Video: ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು: ಪ್ರಧಾನಿ ಮೋದಿ
ಆಪರೇಷನ್ ಸಿಂಧೂರ್(Operation Sindoor) ಪಾಕಿಸ್ತಾನದ ಬಣ್ಣ ಬಯಲು ಮಾಡುವುದರ ಜತೆಗೆ ಉಗ್ರರಿಗೆ ತಕ್ಕ ಉತ್ತರ ನೀಡಿದೆ, ಭಾರತ ಏನು ಮಾಡಬಹುದು ಎಂಬುದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಿಕ್ಕಿಂನ 50ನೇ ಗಣರಾಜ್ಯೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ವರ್ಚುವಲ್ ಭಾಷಣ ಮಾಡಿದರು.
ಗ್ಯಾಂಗ್ಟಾಕ್, ಮೇ 29: ಆಪರೇಷನ್ ಸಿಂಧೂರ್(Operation Sindoor) ಪಾಕಿಸ್ತಾನದ ಬಣ್ಣ ಬಯಲು ಮಾಡುವುದರ ಜತೆಗೆ ಉಗ್ರರಿಗೆ ತಕ್ಕ ಉತ್ತರ ನೀಡಿದೆ, ಭಾರತ ಏನು ಮಾಡಬಹುದು ಎಂಬುದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಿಕ್ಕಿಂನ 50ನೇ ಗಣರಾಜ್ಯೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ವರ್ಚುವಲ್ ಭಾಷಣ ಮಾಡಿದರು.
ಪ್ರವಾಸೋದ್ಯಮ ಕೇವಲ ಮನರಂಜನೆಯಲ್ಲ, ಅದು ವೈವಿಧ್ಯತೆಯ ಆಚರಣೆ, ಆದರೆ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮಾಡಿದ್ದನ್ನು ನೆನಪಿಸುತ್ತದೆ. ಅದು ಕೇವಲ ಭಾರತೀಯರ ಮೇಲಿನ ದಾಳಿಯಾಗಿರಲಿಲ್ಲ. ಅದು ಮಾನವೀಯತೆಯ ಆತ್ಮದ ಮೇಲಿನ ದಾಳಿ, ಸಹೋದರತ್ವದ ಮನೋಭಾವದ ಮೇಲಿನ ದಾಳಿ. ಭಯೋತ್ಪಾದಕರು ನಮ್ಮ ಅನೇಕ ಕುಟುಂಬಗಳ ಸಂತೋಷವನ್ನು ಕಸಿದುಕೊಂಡರು. ಅವರು ಭಾರತೀಯರಾದ ನಮ್ಮನ್ನು ವಿಭಜಿಸಲು ಸಹ ಪಿತೂರಿ ನಡೆಸಿದರು.
ಇಂದು ಇಡೀ ಜಗತ್ತು ಭಾರತ ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಿನಿಂದ ಇರುವುದನ್ನು ನೋಡುತ್ತಿದೆ. ನಾವು ಒಗ್ಗಟ್ಟಿನಿಂದ ಭಯೋತ್ಪಾದಕರು ಮತ್ತು ಅವರ ಪೋಷಕರಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ. ನಾವು ‘ಆಪರೇಷನ್ ಸಿಂಧೂರ್’ ಮೂಲಕ ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದೇವೆ.ತನ್ನ ಭಯೋತ್ಪಾದಕ ನೆಲೆಯ ನಾಶದಿಂದ ಕೋಪಗೊಂಡ ಪಾಕಿಸ್ತಾನವು ನಮ್ಮ ನಾಗರಿಕರು ಮತ್ತು ಸೈನಿಕರ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು, ಆದರೆ ಅದರಲ್ಲಿಯೂ ಪಾಕಿಸ್ತಾನದ ನಿಜವಾದ ಬಣ್ಣ ಬಯಲಾಗಿದೆ ಎಂದು ಅವರು ಹೇಳಿದರು.
ನಾವು ಅವರ ಅನೇಕ ವಾಯುನೆಲೆಗಳನ್ನು ನಾಶಪಡಿಸಿದ್ದೇವೆ ಮತ್ತು ಭಾರತವು ಯಾವುದೇ ಸಮಯದಲ್ಲಿ ಏನು ಮಾಡಬಹುದು ಎಂಬುದನ್ನು ಅವರಿಗೆ ತೋರಿಸಿದ್ದೇವೆ. ಅದನ್ನು ಎಷ್ಟು ವೇಗವಾಗಿ ಮಾಡಬಹುದು, ಎಷ್ಟು ನಿಖರವಾಗಿ ಮಾಡಬಹುದು ಎಂಬುದನ್ನು ಅವರು ಅರ್ಥ ಮಾಡಿಕೊಮಡಿರಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

