ಹಾಸನ: ಒಂದೇ ವಾರದಲ್ಲಿ ಹೃದಯಾಘಾತದಿಂದ ಇಬ್ಬರು ಯುವತಿಯರು, ಯುವಕ ಸಾವು; ತಜ್ಞರು ಹೇಳಿದ್ದೇನು ನೋಡಿ
20 ರ ಆಸುಪಾಸಿನ ವಯಸ್ಸಿನ ಯುವಕ ಯುವತಿಯರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹಾಸನ ಜಿಲ್ಲೆಯ ಜನರನ್ನು ನಿದ್ದೆಗೆಡಿಸಿದೆ. ಕಳೆದ ಒಂದೇ ವಾರದಲ್ಲಿ ಹೃದಯಾಘಾತದಿಂದ ಇಬ್ಬರು ಯುವತಿಯರು, ಒಬ್ಬ ಯುವಕ ಮೃತಪಟ್ಟಿದ್ದಾರೆ. ಯುವ ಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಹೃದ್ರೋಗ ತಜ್ಞ ಡಾ. ಕೆಎಸ್ ಸದಾನಂದ ಮಾತನಾಡಿದ್ದು, ಅವರು ನೀಡಿದ ವಿವರಗಳು ಇಲ್ಲಿವೆ.
ಹಾಸನ, ಮೇ 29: ಹಾಸನ ಜಿಲ್ಲೆಯಲ್ಲಿ ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವಾರವಷ್ಟೇ ಜಿಲ್ಲೆಯಲ್ಲಿ ಒಬ್ಬ ಯುವಕ ಹಾಗೂ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೀಗ ಮೇ 28 ರಂದು ವಿದ್ಯಾರ್ಥಿನಿ ಕವನಾ (21 ವರ್ಷ ವಯಸ್ಸು) ಮೃತಪಟ್ಟಿದ್ದಾರೆ. ಹಾಸನದ ಕೆಲವತ್ತಿ ಗ್ರಾಮದಲ್ಲಿ ಮನೆಯಲ್ಲಿದ್ದಾಗಲೇ ಕವನಾ ಅಸುನೀಗಿದ್ದಾರೆ. ಮೇ 20 ರಂದು ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ 20 ರ ಹರೆಯದ ಸಂಧ್ಯಾ ಮೃತಪಟ್ಟಿದ್ದರು. ಅದೇ ದಿನ, ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇತ್ತೀಚೆಗೆ ಯುವ ಜನಾಂಗದಲ್ಲಿ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಸ್ಟ್ರೋಕ್ ಹೆಚ್ಚಾಗುತ್ತಿದ್ದು, ಆ ಕುರಿತು ಹೃದ್ರೋಗ ತಜ್ಞ ಡಾ. ಕೆಎಸ್ ಸದಾನಂದ ‘ಟಿವಿ9’ ಜತೆಗೆ ಮಾತನಾಡಿದ್ದಾರೆ. ಅವರು ನೀಡಿರುವ ಕಾರಣಗಳು, ವಿವರಗಳಿಗೆ ವಿಡಿಯೋ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ