ಲಂಡನ್: ಮಹಿಳೆಯರನ್ನು ಕೊಂದರೆ ಲಾಟರಿ ಹೊಡೆಯುತ್ತದೆ ಎಂದು ನಂಬಿದ್ದ ಅವನು ಇಬ್ಬರನ್ನು ಬರ್ಬರವಾಗಿ ಕೊಂದುಹಾಕಿದ!
ಹುಸ್ಸೇನ್ ವಾಸವಾಗಿದ್ದ ಮನೆಯಲ್ಲಿ ಪೊಲೀಸರಿಗೆ ಒಂದು ನೋಟ್ ಸಿಕ್ಕಿದ್ದು, ಮಹಿಳೆಯರನ್ನು ಬಲಿಕೊಟ್ಟರೆ ಭೂತವು ತನಗೆ ಲಾಟರಿಯಲ್ಲಿ ಹಣ ಸಿಗುವಂತೆ ಮಾಡುತ್ತದೆ ಎನ್ನುವುದನ್ನು ಅವನು ನಂಬಿ ಕೃತ್ಯವೆಸಗಿದ್ದು ಸಾಬೀತಾಗುತ್ತದೆ ಎಂದು ಎಂದು ಪ್ರಾಸಿಕ್ಯೂಷನ್ ಹೇಳಿದೆ.

ಮೂಢನಂಬಿಕೆ ಮತ್ತು ಭಾನಾಮತಿ ಎಲ್ಲರಿಗೂ ಗೊತ್ತಿರುವ ವಿಷಯಗಳೇ. ಕಲ್ಯಾಣ ಕರ್ನಾಟಕ ಭಾಗಕ್ಕೆ ಹೋದರೆ. ಭಾನಾಮತಿ ಅಥವಾ ಬ್ಲ್ಯಾಕ್ ಮ್ಯಾಜಿಕ್ನ ಸಾವಿರಾರು ನೈಜ್ಯ ಕತೆಗಳು ಸಿಗುತ್ತವೆ. ಮಂತ್ರವಾದಿ ಅಂತ ಕರೆಸಿಕೊಳ್ಳುವ ವ್ಯಕ್ತಿಯೊಬ್ಬ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ನಿಧಿ ಬಗ್ಗೆ ನೂರೆಂಟು ಕತೆಗಳನ್ನು ಸೃಷ್ಟಿಸಿ ಅಮಾಯಕರ ಬ್ರೇನ್ ವಾಷ್ ಮಾಡುತ್ತಾನೆ. ನಿಧಿ ವಶವಾಗಬೇಕಾದರೆ, ಸಿದ್ಧಿಗಳನ್ನು ಮಾಡಬೇಕಾಗುತ್ತದೆ ಅಂತ ಹೇಳಿ ಅವರಿಂದ ಕಂತೆಗಟ್ಟಲೆ ಹಣ ಪೀಕುತ್ತಾನೆ. ಅಮವಾಸ್ಯೆಗಳಂದು ನಡುರಾತ್ರಿ ಪೂಜೆ ಮಾಡಿ ದೇವಿಯನ್ನು ಒಲಿಸಿಕೊಳ್ಳಬೇಕು ಮತ್ತು ಆಕೆ ಒಲಿಯಬೇಕಾದರೆ ನರಬಲಿ ಕೊಡಬೇಕು ಅಂತ ಹೇಳಿ ಅವರನ್ನು ಅಕ್ಷರಶಃ ಕ್ರಿಮಿನಲ್ಗಳನ್ನಾಗಿ ಪರಿವರ್ತಿಸುತ್ತಾನೆ. ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಾಣುವವರು ಅವನ ಬಲೆಗೆ ಬಿದ್ದು ಕೊಲೆಗಳನ್ನೂ ಮಾಡಿಬಿಡುತ್ತಾರೆ. ಅಂಥ ಮೂಢರು ತಮ್ಮ ಕುಟುಂಬದ ಸದಸ್ಯರನ್ನೇ ಬಲಿ ತೆಗೆದುಕೊಂಡು ಜೈಲು ಪಾಲಾಗಿರುವ ಅನೇಕ ಘಟನೆಗಳು ಕಲ್ಯಾಣ ಕರ್ನಾಟಕದಲ್ಲಿ ಮತ್ತು ಪಕ್ಕದ ತೆಲಂಗಾಣದಲ್ಲಿ ಸಾಕಷ್ಟು ನಡೆದಿವೆ. ನಿಧಿಗಾಗಿ ಕೊಲೆ ಎಂಬ ಶೀರ್ಷಿಕೆಯ ಸುದ್ದಿಗಳನ್ನು ನೀವೂ ಓದಿರುತ್ತೀರಿ. ನಿಧಿಗಾಗಿ ಕೊಲೆಯಂಥ ಘೋರ ಅಪರಾಧವೆಸಗುವುದು ಮೂಢ ಮತ್ತು ಕ್ರೂರ ನಂಬಿಕೆಯ ಪರಮಾವಧಿಯಲ್ಲದೆ ಬೇರೇನೂ ಅಲ್ಲ.
ಓಕೆ, ಇಂಥ ಮೂಢನಂಬಿಕೆಗಳು ಕೇವಲ ಕಲ್ಯಾಣ ಕರ್ನಾಟಕದಲ್ಲಿ ಅಥವಾ ಭಾರತದಲ್ಲಿ ಮಾತ್ರ ಇವೆ ಅಂತ ನೀವು ಭಾವಿಸದ್ದರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಲಂಡನ್ನಲ್ಲಿ ಕಳೆದ ವರ್ಷ 19ರ ಪ್ರಾಯದ ಯುವಕನೊಬ್ಬ ಇಬ್ಬರು ಮಹಿಳೆಯರನ್ನು ಕೊಂದರೆ ಲಾಟರಿಯಲ್ಲಿ ಹಣ ಬರುತ್ತದೆ ಎಂದು ನಂಬಿ ಅವರನ್ನು ನಿರ್ದಯತೆಯಿಂದ, ಬರ್ಬರವಾಗಿ ಕೊಂದ ಪ್ರಕರಣ ಈಗ ಬೆಳಕಿಗೆ ಬಂದಿದೆ. ಪಾತಕಿ ಅವರನ್ನು ಕೊಂದು ದೇಹಗಳನ್ನು ಲಂಡನ್ನಲ್ಲಿರುವ ವೆಂಬ್ಲೀ ಪಾರ್ಕ್ನಲ್ಲಿ ಹೂತುಬಿಟ್ಟಿದ್ದ.
ಕೊಲೆಗಾರನ ಹೆಸರು ದಾನಿಯಲ್ ಹುಸ್ಸೇನ್ ಮತ್ತು ಅವನ ರಾಕ್ಷಸೀ ಕೃತ್ಯಕ್ಕೆ ಬಲಿಯಾದವರು 27 ವರ್ಷ ವಯಸ್ಸಿನ ನಿಕೊಲಿ ಸ್ಮಾಲ್ಮನ್ ಮತ್ತು 46 ವರ್ಷ ವಯಸ್ಸಿನ ಬಿಬಾ ಹೆನ್ರಿ. ಇಂಗ್ಲೆಂಡ್ ಮತ್ತು ವೇಲ್ಸ್ನ ಸೆಂಟ್ರಲ್ ಕ್ರಿಮಿನಲ್ ಕೋರ್ಟ್ಗೆ ಪ್ರಾಸಿಕ್ಯೂಷನ್ ತಿಳಿಸಿರುವ ಪ್ರಕಾರ ಕಳೆದ ವರ್ಷ ಜೂನ್ 6ರಂದು ಹುಸ್ಸೇನ್ ಅವೇಷಕ್ಕೊಳಗಾದವನಂತೆ ಅಮಾನುಷವಾಗಿ ಇರಿದು ಅವರಿಬ್ಬರನ್ನು ಕೊಂದು ಹಾಕಿದ ಎನ್ನುವುದನ್ನು ದಿ ಗಾರ್ಡಿಯನ್ ಪತ್ರಿಕೆ ಬರದಿ ಮಾಡಿದೆ.
ಹುಸ್ಸೇನ್ ವಾಸವಾಗಿದ್ದ ಮನೆಯಲ್ಲಿ ಪೊಲೀಸರಿಗೆ ಒಂದು ನೋಟ್ ಸಿಕ್ಕಿದ್ದು, ಮಹಿಳೆಯರನ್ನು ಬಲಿಕೊಟ್ಟರೆ ಭೂತವು ತನಗೆ ಲಾಟರಿಯಲ್ಲಿ ಹಣ ಸಿಗುವಂತೆ ಮಾಡುತ್ತದೆ ಎನ್ನುವುದನ್ನು ಅವನು ನಂಬಿ ಕೃತ್ಯವೆಸಗಿದ್ದು ಸಾಬೀತಾಗುತ್ತದೆ ಎಂದು ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಮಹಿಳೆಯರ ಮೇಲೆ ಹಲ್ಲೆ ನಡೆದಾಗ ಹೆನ್ರಿಯ ಹುಟ್ಟುಹಬ್ಬ ಪಾರ್ಟಿ ನಡೆಯುತಿತ್ತು. ಹೆನ್ರಿಯನ್ನು ಅವನು 8 ಬಾರಿ ತಿವಿದಿದ್ದ ಮತ್ತು ಸ್ಮಾಲ್ಮನ್ಳನ್ನು 28 ಬಾರಿ ಇರಿದಿದ್ದ.
ಪ್ರಾಸಿಕ್ಯೂಷನ್ ಪರ ವಾದಿಸಿದ ಆಲಿವರ್ ಗ್ಲ್ಯಾಸ್ಗೋ, ’ಪ್ರತಿವಾದಿಗೆ ತನ್ನ ಯೋಜನೆಯಲ್ಲಿ ಸಫಲನಾಗುವ ಬಗ್ಗೆ ಅಪಾರ ವಿಶ್ವಾಸವಿತ್ತು, ಯಾಕೆಂದರೆ, ಅವರನ್ನು ಕ್ರೂರವಾಗಿ ಹತ್ಯೆಗೈದ ನಂತರ ಅವನು ಹಲವಾರು ಲಾಟರಿ ಟಿಕೆಟ್ಗಳನ್ನು ಖರೀದಿಸಿದ್ದ. ಅವನ ಮನೆಯಲ್ಲಿ ಪತ್ತೆಯಾದ ನೋಟ್ನಲ್ಲಿ ಮೂರು ಲಾಟರಿ ಟಿಕೆಟ್ ಸಿಕ್ಕಿದ್ದವು,’ ಎಂದು ಕೋರ್ಟ್ಗೆ ತಿಳಿಸಿದರು.
ಭೂತ ಅವನಿಗೆ ಲಾಟರಿಯಲ್ಲಿ ಹಣ ಸಿಗುವಂತೇನೂ ಮಾಡಲಿಲ್ಲ, ಪ್ರತಿವಾದಿಗೆ ಲಾಟರಿ ಹೊಡೆಯಲಿಲ್ಲ ಎನ್ನುವ ಸಂಗತಿಯು ಅವನು ಮಾಡಿರುವ ಎರಡು ಕೊಲೆಗಳ ಬಗ್ಗೆ ಸುಳಿವು ನೀಡಿತು, ಎಂದು ಕೋರ್ಟಿಗೆ ತಿಳಿಸಲಾಯಿತು.
ಹೆನ್ರಿಯ ಬರ್ತ್ಡೇ ಪಾರ್ಟಿಯಲ್ಲಿ ಬೇರೆ ಅತಿಥಿಗಳೂ ಇದ್ದರು. ಆದರೆ ಕೊನೆವರೆಗೆ ಉಳಿದಿದ್ದು ಆಕೆ ಮತ್ತು ಸ್ಮಾಲ್ಮನ್. ಲಭ್ಯವಾಗಿರುವ ಫುಟೇಜ್ನಲ್ಲಿ ಅವರು ಡ್ಯಾನ್ಸ್ ಮಾಡುತ್ತಿದ್ದಾರೆ ಮತ್ತು ಒಬ್ಬ ಆಗುಂತಕನ ಅಗಮನ ಅವರ ಗಮನವನ್ನು ಆ ಕಡೆ ಸೆಳೆದಿದೆ. ಆದರೆ ಹಲ್ಲೆ ನಡೆದಿರುವುದು ಪುಟೇಜ್ನಲ್ಲಿ ಸೆರೆಯಾಗಿಲ್ಲ, ಎಂದು ಬಿಬಿಸಿ ವರದಿ ಮಾಡಿದೆ
‘ಆ ಆಗಂತುಕನೇ ಪ್ರತಿವಾದಿಯಾಗಿದ್ದನೇ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ, ಆದರೆ, ಅವತ್ತು ಸಾಯಂಕಾಲ ಅವನು (ಹುಸ್ಸೇನ್) ಪಾರ್ಕ್ನಲ್ಲಿದ್ದ ಮತ್ತು ಮಹಿಳೆಯರ ಮೇಲೆ ನಡೆಸಿದ ಅನ್ನೋದರಲ್ಲಿ ಮಾತ್ರ ಸಂಶಯವಿಲ್ಲ.‘ ಎಂದು ಗ್ಲ್ಯಾಸ್ಗೋ ತಿಳಿಸಿದರು.
ಇಬ್ಬರು ಸಹೋದರಿಯರನ್ನು ಕಟುಕನಂತೆ ಕೊಂದ ನಂತರ ಅವನು ದೇಹಗಳನ್ನು ಪೊದೆಯಲ್ಲಿ ತಳ್ಳಿ ಅವುಗಳ ಮೇಲೆ ಹುಲ್ಲು ಹಾಕಿದ, ಎಂದು ಪ್ರಾಸಿಕ್ಯೂಷನ್ ವಾದಿಸಿದ್ದು ವರದಿಯಾಗಿದೆ
‘ಸ್ಥಳದಲ್ಲಿ ಲಭ್ಯವಾದ ಹುಸ್ಸೇನ್ನ ಡಿಎನ್ಎ ಹಾಗೂ ಮಹಿಳೆಯರ ದೇಹದ ಮೇಲೆ ಮತ್ತು ರಕ್ತಸಿಕ್ತವಾದ ಚಾಕುವಿನ ಮೇಲೂ ಪತ್ತೆಯಾಗಿದೆ. ಈ ಸಾಕ್ಷ್ಯಸಾಕಾಗದು ಅಂತಾದರೆ, ಪ್ರತಿವಾದಿ ಚಾಕುಗಳ ಸೆಟ್ ಖರೀದಿಸಿದ ಬಗ್ಗೆ ಪುರಾವೆಯೂ ಇದೆ,’ ಎಂದು ಗ್ಲ್ಯಾಸ್ಗೋ ನ್ಯಾಯಾಲಯಕ್ಕೆ ತಿಳಿಸಿದರು.
ಲಂಡನ್ನ ನೈರುತ್ಯ ಭಾಗದಲ್ಲಿ ಬ್ಲ್ಯಾಕ್ಹೆತ್ನಲ್ಲಿರವ ಆಸ್ಪತ್ರೆಯೊಂದಕ್ಕೆ ಜೂನ್ 7 ರಂದು ತೆರಳಿ ತನ್ನ ಗಾಯಗಳಿಗೆ ಚಿಕಿತ್ಸೆ ಪಡೆದಿರುವ ಹುಸ್ಸೇನ್ ಕೊಲೆ ಆರೋಪಗಳನ್ನು ತಳ್ಳಿಹಾಕಿದ್ದಾನೆ. ತಾನು ಷಡ್ಯಂತ್ರವೊಂದರ ಬಲಿಪಶುವಾಗಿದ್ದೇನೆ ಅಂತ ಬಿಂಬಿಸಲು ಅವನು ಪ್ರಯತ್ನಿಸುತ್ತಿದ್ದಾನೆ ಅಂತ ಪ್ರಾಸಿಕ್ಯೂಷನ್ ಕೋರ್ಟ್ಗೆ ತಿಳಿಸಿದೆ.
ಇದನ್ನೂ ಓದಿ: Bengaluru Crime |ಅಡುಗೆ ತಯಾರಿಸುವ ವಿಚಾರಕ್ಕೆ ಶೆಫ್ಗಳ ನಡುವೆ ಜಗಳ.. ಚಾಕು ಇರಿದು ಯುವಕನ ಕೊಲೆ, ಆರೋಪಿ ಎಸ್ಕೇಪ್




