ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಗೌರವಕ್ಕೆ ಬಿಸಿಸಿಐ ಪರಿಗಣಿಸಿದ್ದು ಬಹಳ ಹೆಮ್ಮೆಯ ವಿಷಯ: ಶಿಖರ್ ಧವನ್

ಈ ಪ್ರವಾಸಕ್ಕೆ ಆಯ್ಕೆಯಾಗಿರುವ ತಂಡದಲ್ಲಿ ಆರು ಜನ ತೀರ ಹೊಸಬರು. ಅವರಲ್ಲಿ ಐವರು ಇದುವರೆಗೆ ಭಾರತವನ್ನು ಯಾವತ್ತೂ ಪ್ರತಿನಿಧಿಸಿಲ್ಲ. ಹೊಸಬರ ತಂಡವನ್ನು ಮುನ್ನಡೆಸುವುದು ಸುಲಭದ ಮಾತಲ್ಲವಾದರೂ ಧವನ್​ ಇದನ್ನು ಸವಾಲಾಗಿ ಸ್ವೀಕರಿಸಿ, ತನ್ನನ್ನು ನಾಯಕನ ಸ್ಥಾನಕ್ಕೆ ಪರಿಗಣಿಸಿದ ಮಂಡಳಿಗೆ ಮತ್ತು ತನಗೆ ಶುಭ ಹಾರೈಸಿದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಗೌರವಕ್ಕೆ ಬಿಸಿಸಿಐ ಪರಿಗಣಿಸಿದ್ದು ಬಹಳ ಹೆಮ್ಮೆಯ ವಿಷಯ: ಶಿಖರ್ ಧವನ್
ಶಿಖರ್ ಧವನ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 11, 2021 | 10:07 PM

ಭಾರತದ ಪ್ರಮುಖ ಆಟಗಾರರೆಲ್ಲ ಜೂನ್​ 18ರಿಂದ ನ್ಯೂಜಿಲೆಂಡ್​ ವಿರುದ್ಧ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಪಂದ್ಯ ಮತ್ತು ಅದಾದ ನಂತರ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 5-ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾಗವಹಿಸಿಲು ಯುನೈಟೆಡ್ ಕಿಂಗ್​ಡಮ್​ಗೆ ತೆರಳಿರವುದರಿಂದ ಶ್ರೀಲಂಕಾ ವಿರುದ್ಧ ದ್ವೀಪರಾಷ್ಟ್ರದಲ್ಲಿ ನಡೆಯಲಿರುವ ಎರಡು ಸೀಮಿತ ಓವರ್​ಗಳ ಸರಣಿಗಳಿಗೆ ಆಯ್ಕೆ ಮಾಡಿರುವ ರಾಷ್ಟ್ರೀಯ ಸೀನಿಯರ್ ತಂಡಕ್ಕೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯು ತಮ್ಮನ್ನು ನಾಯಕನಾಗಿ ನೇಮಕ ಮಾಡಿರುವುದಕ್ಕೆ ಹಿರಿಯ ಎಡಗೈ ಆಟಗಾರ ಶಿಖರ್ ಧವನ್ ಕೃತಜ್ಞತೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಸೀನಿಯರ್​ ತಂಡವನ್ನು ಲೀಡ್​ ಮಾಡುವುದು ಒಂದು ದೊಡ್ಡ ಗೌರವ ಎಂದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರು ಒಂದು ದಿನ ಪಂದ್ಯಗಳು ಮತ್ತ ಅಷ್ಟೇ ಸಂಖ್ಯೆಯ ಟ20ಐ ಪಂದ್ಯಗಳ ಸರಣಿಗಳಲ್ಲಾಡುವ 20-ಸದಸ್ಯರ ಭಾರತೀಯ ತಂಡಕ್ಕೆ ಧವನ್ ಅವರನ್ನು ನಾಯಕನಾಗಿ ಘೋಷಿಸಲಾಗಿದೆ. ಅವರು ಲೀಡ್​ ಮಾಡುತ್ತಿರುವುದು ಸೀನಿಯರ್ ತಂಡವಾದರೂ ಖ್ಯಾತನಾಮರಾಗಿರುವ ವಿರಾಟ್​ ಕೊಹ್ಲಿ, ರೋಹಿತ್ ಶರ್ಮ, ಕೆ ಎಲ್ ರಾಹುಲ್, ರಿಷಭ್ ಪಂತ್, ಜಸ್ಪ್ರೀತ್​ ಬುಮ್ರಾ, ಮೊಹಮ್ಮದ್ ಶಮಿ ಮೊದಲಾದವರು ತಂಡದ ಭಾಗವಾಗಿಲ್ಲ. ಅವರೆಲ್ಲ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಈ ಆಟಗಾರರ ಅಲಭ್ಯತೆ ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್​ಗೆ ಮೊದಲು ತನ್ನ ರಿಸರ್ವ್​ ಆಟಗಾರರ ಸಾಮರ್ಥ್ಯ ಪರೀಕ್ಷಿಸಲು ಬಿಸಿಸಿಐಗೆ ಒಂದು ಅವಕಾಶ ಒದಗಿಸಿದೆ.

ಈ ಪ್ರವಾಸಕ್ಕೆ ಆಯ್ಕೆಯಾಗಿರುವ ತಂಡದಲ್ಲಿ ಆರು ಜನ ತೀರ ಹೊಸಬರು. ಅವರಲ್ಲಿ ಐವರು ಇದುವರೆಗೆ ಭಾರತವನ್ನು ಯಾವತ್ತೂ ಪ್ರತಿನಿಧಿಸಿಲ್ಲ. ಹೊಸಬರ ತಂಡವನ್ನು ಮುನ್ನಡೆಸುವುದು ಸುಲಭದ ಮಾತಲ್ಲವಾದರೂ ಧವನ್​ ಇದನ್ನು ಸವಾಲಾಗಿ ಸ್ವೀಕರಿಸಿ, ತನ್ನನ್ನು ನಾಯಕನ ಸ್ಥಾನಕ್ಕೆ ಪರಿಗಣಿಸಿದ ಮಂಡಳಿಗೆ ಮತ್ತು ತನಗೆ ಶುಭ ಹಾರೈಸಿದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಧವನ್ ನಿರಂತರವಾಗಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. ಇದುವರೆಗೆ ಅವರು 142 ಒಡಿಐ ಮತ್ತು 64 ಟಿ20 ಪಂದ್ಯಗಳನ್ನಾಡಿದ್ದು 50 ಓವರ್​ಗಳ ಫಾರ್ಮಾಟ್​ನಲ್ಲಿ ಅತ್ಯುತ್ತಮ ಎನ್ನಬಹುದಾದ 45.28 ಸರಾಸರಿಯೊಂದಿಗೆ 5,977 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕ ಮತ್ತು 32 ಅರ್ಧ ಶತಕಗಳಿವೆ ಮತ್ತು ಗರಿಷ್ಟ ಸ್ಕೋರ್ 143 ಆಗಿದೆ. ಟಿ20 ಪಂದ್ಯಗಳಲ್ಲಿ ಅವರ ಸರಾಸರಿ 27.88 ಇದ್ದು ಇದುವರೆಗೆ 11 ಅರ್ಧ ಶತಕಗಳ ಸಹಾಯದಿಂದ 1,673 ರನ್ ಬಾರಿಸಿದ್ದಾರೆ. ಗರಿಷ್ಟ ಸ್ಕೋರ್ 92.

ಟೆಸ್ಟ್​ಗಳಲ್ಲೂ ಅವರ ಪ್ರದರ್ಶನ ಬಹಳ ಚೆನ್ನಾಗಿದೆ. ಆಡಿರುವ 34 ಟೆಸ್ಟ್​ಗಳಲ್ಲಿ ಅವರು 40.61 ಸರಾಸರಿಯಲ್ಲಿ 2,315 ರನ್ ಬಾರಿಸಿದ್ದಾರೆ. 7 ಶತಕ ಮತ್ತ 5 ಅರ್ಧ ಶತಕ ಆವರ ಬ್ಯಾಟ್​ನಿಂದ ಸಿಡಿದಿವೆ. ಈಗ ನಾಯಕತ್ವ ಹೊರೆ ಅವರ ಮೇಲೆ ಬಿದ್ದಿರುವುದರಿಂದ ಬ್ಯಾಟಿಂಗ್ ಮೇಲೆ ಅದು ಪ್ರಭಾವ ಬೀರಲಿದೆಯೇ ಅಥವಾ ಇನ್ನಷ್ಟು ಉತ್ಕೃಷ್ಟ ಪ್ರದರ್ಶನಗಳನ್ನು ನೀಡಲಿದ್ದ್ದಾರೆಯೇ ಅನ್ನುವುದನ್ನು ಕಾದು ನೋಡಬೇಕು.

ಈ ಅವಳಿ ಸರಣಿಯಲ್ಲಿ ಋತುರಾಜ್ ಗಾಯಕ್ವಾಡ್​, ನೀತಿಷ್ ರಾಣಾ, ಕನ್ನಡಿಗರಾದ ದೇವದತ್​ ಪಡಿಕ್ಕಲ್, ಕೃಷ್ಣಪ್ಪ ಗೌತಮ್, ಚೇತನ್ ಸಕಾರಿಯಾ, ಮತ್ತು ವರುಣ್​ ಚಕ್ರವರ್ತಿ ಆಡುವ ಅವಕಾಶ ಪಡೆದರೆ, ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದಂತಾಗುತ್ತದೆ. ಅವರ ಸಾಮರ್ಥ್ಯವನ್ನು ದೊಡ್ಡ ಹಂತದ ಕ್ರಿಕೆಟ್​ನಲ್ಲಿ ಸೂಕ್ತವಾಗಿ ಬಳಸಿಕೊಳ್ಳುವುದು ಧವನ್​ ಅವರ ಜವಾಬ್ದಾರಿಯಾಗಿದೆ.

ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತದ ತಂಡ ಇಂತಿದೆ: 

ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್​ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್​, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನೀತಿಷ್ ರಾಣಾ, ಇಶಾನ ಕಿಷನ್ (ವಿಕೆಟ್​-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್​-ಕೀಪರ್), ಯುಜ್ವೇಂದ್ರ ಚಹಲ್, ರಾಹುಲ್ ಚಹರ್, ಕೆ ಗೌತಮ್, ಕೃಣಾಲ್ ಪಾಂಡೆ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ (ಉಪ-ನಾಯಕ), ದೀಪಕ್ ಚಹರ್, ನವದೀಪ್ ಸೈನಿ ಮತ್ತು ಚೇತನ್ ಸಕಾರಿಯಾ

ನೆಟ್​ ಬೌಲರ್​ಗಳು: ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್​ದೀಪ್ ಸಿಂಗ್, ಸಾಯಿ ಕಿಶೋರ್ ಮತ್ತು ಸಿಮರ್ಜೀತ್ ಸಿಂಗ್

ಇದನ್ನೂ ಓದಿ: Shikhar Dhawan: ಯಾವ ಹಾಡೆಂದು ಊಹಿಸಬಲ್ಲಿರಾ? ಕೊಳಲು ವಾದಕನಾದ ಕ್ರಿಕೆಟಿಗ ಶಿಖರ್ ಧವನ್; ವಿಡಿಯೋ ನೋಡಿ

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್