Shikhar Dhawan: ಯಾವ ಹಾಡೆಂದು ಊಹಿಸಬಲ್ಲಿರಾ? ಕೊಳಲು ವಾದಕನಾದ ಕ್ರಿಕೆಟಿಗ ಶಿಖರ್ ಧವನ್; ವಿಡಿಯೋ ನೋಡಿ

Shikhar Dhawan: ಧವನ್ ಸುಮಾರು ಒಂದು ನಿಮಿಷದ ವಿಡಿಯೋ ಹಂಚಿಕೊಂಡಿದ್ದು, ರಾಗವನ್ನು ಗುರುತಿಸುವಂತೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Shikhar Dhawan: ಯಾವ ಹಾಡೆಂದು ಊಹಿಸಬಲ್ಲಿರಾ? ಕೊಳಲು ವಾದಕನಾದ ಕ್ರಿಕೆಟಿಗ ಶಿಖರ್ ಧವನ್; ವಿಡಿಯೋ ನೋಡಿ
ಶಿಖರ್ ಧವನ್
Follow us
ಪೃಥ್ವಿಶಂಕರ
|

Updated on: May 22, 2021 | 2:59 PM

ಟೀಂ ಇಂಡಿಯಾದ ಗಬ್ಬರ್ ಎಂದು ಕರೆಯಲ್ಪಡುವ ಶಿಖರ್ ಧವನ್, ಕ್ರಿಕೆಟ್ ಮೈದಾನದಲ್ಲಿರಲಿ ಅಥವಾ ಹೊರಗಡೆ ಇರಲಿ ಅಭಿಮಾನಿಗಳನ್ನು ರಂಜಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಲಾಕ್‌ಡೌನ್ ಮಧ್ಯೆ ಧವನ್ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್ ಜಗತ್ತಿನ ಅಭಿಮಾನಿಗಳಿಗೆ ಕನ್ಹಯ್ಯರಾದ ಗಬ್ಬರ್, ಗಜಲ್ ರಾಗಕ್ಕೆ ಕೊಳಲು ನುಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಲು ಪ್ರಯತ್ನಿಸಿದ್ದಾರೆ. ಗಬ್ಬರ್​ ಹರಿಬಿಟ್ಟಿರುವ ಈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್​ ಮಾಡುತ್ತಿದೆ.

ಧವನ್​ಗೆ ಕೊಳಲು ನುಡಿಸುವುದೆಂದರೆ ತುಂಬಾ ಇಷ್ಟ. ಹೀಗಾಗಿ ಅವರು 2019 ರಿಂದ ಕೊಳಲು ನುಡಿಸಲು ಕಲಿಯುತ್ತಿದ್ದಾರೆ. ಅವರು ಕೊಳಲು ನುಡಿಸಲು ಪ್ರಾರಂಭಿಸಿದಾಗ, ಒಂದು ಮುದ್ದಾದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಇಂತಹ ಅನೇಕ ವೀಡಿಯೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಐಪಿಎಲ್ ಮುಂದೂಡಿದ್ದರಿಂದ ಮನೆಗೆ ಮರಳಿದ್ದ ಧವನ್, ಉಚಿತ ಸಮಯ ಸಿಕ್ಕ ಕೂಡಲೇ ಮತ್ತೆ ತನ್ನ ಹವ್ಯಾಸವನ್ನು ಪೂರೈಸಲು ಪ್ರಾರಂಭಿಸಿದ್ದಾರೆ.

ಧವನ್ ವಿಡಿಯೋಗೆ ಅಭಿಮಾನಿಗಳು ಫುಲ್​ಫೀದಾ ಧವನ್ ಸುಮಾರು ಒಂದು ನಿಮಿಷದ ವಿಡಿಯೋ ಹಂಚಿಕೊಂಡಿದ್ದು, ರಾಗವನ್ನು ಗುರುತಿಸುವಂತೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆತ್ಮಕ್ಕೆ ಸಂಗೀತ, ಸಂಯಮದಿಂದಿರಿ, ಸಕಾರಾತ್ಮಕವಾಗಿರಿ, ಇದು ಯಾವ ಹಾಡು ಎಂದು ನೀವು ಊಹಿಸಬಲ್ಲಿರಾ? ಎಂದು ಧವನ್ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಧವನ್ ತುಂಬಾ ಪ್ರಬುದ್ಧ ರೀತಿಯಲ್ಲಿ ಕೊಳಲು ನುಡಿಸುತ್ತಿರುವುದು ಕಂಡುಬರುತ್ತೆ. ಅಭಿಮಾನಿಗಳು ಈ ಶೈಲಿಯನ್ನು ತುಂಬಾ ಇಷ್ಟಪಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಇದರ ನಂತರ, ಅಭಿಮಾನಿಗಳು ಹಾಡಿನ ರಾಗವನ್ನು ಊಹಿಸಲು ಪ್ರಾರಂಭಿಸಿದ್ದಾರೆ. ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಕೂಡ ಧವನ್ ಅವರ ಪ್ರತಿಭೆಯನ್ನು ಹೊಗಳಿದ್ದಾರೆ. ಧವನ್ ಅವರ ಕೊಳಲು ವಿಡಿಯೋದಲ್ಲಿ ಧನಶ್ರೀ ಚಪ್ಪಾಳೆ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ, ಗಿರಿಧರ್ ಉಡುಪಾ ಎಂಬ ತಬಲಕ್ ಕೂಡ ಧವನ್ ಅವರ ಸಂಗೀತ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

ಶಿಖರ್ ಧವನ್ ಶ್ರೀಲಂಕಾ ಪ್ರವಾಸದಲ್ಲಿ ನಾಯಕನಾಗಬಹುದು ಈ ವರ್ಷದ ಜುಲೈನಲ್ಲಿ ಸೀಮಿತ ಓವರ್‌ಗಳ ಸರಣಿಗೆ ಆರಂಭಿಕ ಆಟಗಾರ ಶಿಖರ್ ಧವನ್ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ನಾಯಕತ್ವ ವಹಿಸಬಹುದು. ಸೀಮಿತ ಓವರ್‌ಗಳ ಸರಣಿಗಾಗಿ ಭಾರತ ಶ್ರೀಲಂಕಾ ಪ್ರವಾಸ ಮಾಡಬೇಕಾಗಿರುತ್ತದೆ, ಆದರೆ ಧವನ್‌ಗೆ ತಂಡದ ನಾಯಕತ್ವವನ್ನು ನೀಡಬಹುದು. ಏಕೆಂದರೆ ಉಳಿದ ಹೆಸರಾಂತ ಆಟಗಾರರು ಅದೇ ಸಮಯದಲ್ಲಿ ಟೆಸ್ಟ್ ಪಂದ್ಯಗಳಿಗಾಗಿ ಇಂಗ್ಲೆಂಡ್‌ನಲ್ಲಿರುತ್ತಾರೆ. ಐಪಿಎಲ್ 2021 ರಲ್ಲಿ ಪಂದ್ಯಾವಳಿಯನ್ನು ಅಮಾನತುಗೊಳಿಸುವವರೆಗೂ ಶಿಖರ್ ಧವನ್ ಆರೆಂಜ್ ಕ್ಯಾಪ್ ಹೊಂದಿರುವವರಾಗಿದ್ದರು. ಅವರು 8 ಪಂದ್ಯಗಳಲ್ಲಿ 54.28 ಸರಾಸರಿಯಲ್ಲಿ 380 ರನ್ ಮತ್ತು 134.27 ಸ್ಟ್ರೈಕ್ ರೇಟ್ ಗಳಿಸಿದ್ದಾರೆ.

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ