ಕೊರೊನಾ ವಿರುದ್ಧದ ಹೋರಾಟ ಮ್ಯಾನ್ ವರ್ಸಸ್ ವೈಲ್ಡ್ ಎಪಿಸೋಡ್ನಂತಿತ್ತು; ಮಾಜಿ ಕ್ರಿಕೆಟಿಗ ಲಕ್ಷ್ಮಿಪತಿ ಬಾಲಾಜಿ
ಐಪಿಎಲ್ 2020 ರ ಸಮಯದಲ್ಲಿ ತಂಡದ ಸದಸ್ಯರು ಪಾಸಿಟಿವ್ ಆಗಿದ್ದರು. ಈ ಸಂದರ್ಭದಲ್ಲಿ, ಈ ಬಾರಿ ಮೊದಲಿಗಿಂತ ಹೆಚ್ಚು ಕಟ್ಟುನಿಟ್ಟಾಗಿತ್ತು. ನಾವು ಎಲ್ಲಿ ಸೋಂಕಿಗೆ ಒಳಗಾಗಿದ್ದೇವೆಂದು ನನಗೆ ತಿಳಿದಿಲ್ಲ ಎಂದರು.
ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಅವರು ಮೇ 2 ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ನಂತರ ಮೇ 14 ರಂದು ಬಾಲಾಜಿಯ ಪರೀಕ್ಷೆ ನೆಗೆಟಿವ್ ಬಂದಿತು. ಈಗ ಅವರು ಈ ಕಾಯಿಲೆಗೆ ಸಂಬಂಧಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತನ್ನ ಮೊದಲ ಪರೀಕ್ಷೆಯು ಪಾಸಿಟಿವ್ ಬಂದಾಗ ಅವರು ಕ್ವಾರಂಟೈನ್ಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಆರಂಭದಲ್ಲಿ ಆಶ್ಚರ್ಯವಾಯಿತು ಎಂದು ಬಾಲಾಜಿ ಹೇಳಿದರು. ಇಎಸ್‌ಪಿಎನ್‌ಕ್ರಿನ್‌ಫೊ ಜೊತೆ ಮಾತನಾಡಿದ ಅವರು, ಮೇ 2 ರಂದು ನನಗೆ ಸ್ವಲ್ಪ ಆತಂಕವಾಗಿತ್ತು. ಅಂದು ನನಗೆ ಸ್ವಲ್ಪ ಬಾಡಿ ಪೈನ್ ಇತ್ತು ಜೊತೆಗೆ ಸ್ವಲ್ಪ ನೆಗಡಿ ಕೂಡ ಇತ್ತು. ಅದೇ ದಿನ ಪರೀಕ್ಷೆ ಮಾಡಲಾಗಿ ನನಗೆ ಕೊರೊನಾ ತಗುಲಿರುವುದು ಪಕ್ಕಾ ಆಯಿತು.
ಅಂದು ನಾನು ತುಂಬಾ ಭಯಭೀತನಾಗಿದ್ದೆ ಮತ್ತು ಆರಂಭದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಹ ಸಾಧ್ಯವಾಗಲಿಲ್ಲ. ನನಗೆ ಏನಾಯಿತು ಎಂದು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಜನರು ಹೊರಗೆ ಸಾಯುತ್ತಿದ್ದಾರೆಂದು ನನಗೆ ತಿಳಿದಿತ್ತು. ಕುಟುಂಬ ಮತ್ತು ಸ್ನೇಹಿತರಿಂದ ಸಂದೇಶಗಳು ಬರಲು ಪ್ರಾರಂಭಿಸಿದಾಗ, ರೋಗದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ನನಗೆ 24 ಗಂಟೆಗಳ ಸಮಯ ಹಿಡಿಯಿತು. ನಾನು ಚಿಂತೆ ಮಾಡಲು ಪ್ರಾರಂಭಿಸಿದೆ. ನಾನು ನನ್ನ ಬಗ್ಗೆ ಕಾಳಜಿ ವಹಿಸಬೇಕು ಎಂದು ನಾನು ಅರಿತುಕೊಂಡೆ ಎಂದು ಬಾಲಾಜಿ ಅಂದಿನ ಅನುಭವ ಹೇಳಿಕೊಂಡಿದ್ದಾರೆ.
ಎಲ್ಲಿ ಸೋಂಕಿಗೆ ಒಳಗಾಗಿದ್ದೇವೆಂದು ನನಗೆ ತಿಳಿದಿಲ್ಲ ನನ್ನ ತಂಡದ ಉಳಿದವರ ಬಗ್ಗೆಯೂ ನಾನು ಚಿಂತೆ ಮಾಡುತ್ತಿದ್ದೆ. ನನ್ನ ಪರೀಕ್ಷೆ ಸಕಾರಾತ್ಮಕವಾಗಿ ಬರುವ ಮೊದಲು ನಾನು ಅವರಲ್ಲಿ ಕೆಲವರನ್ನು ಭೇಟಿ ಮಾಡಿದ್ದೆ. ರಾಜೀವ್ ಕುಮಾರ್ (ಸಿಎಸ್‌ಕೆ ಫೀಲ್ಡಿಂಗ್ ಕೋಚ್), ರಾಬಿನ್ ಉತ್ತಪ್ಪ, ಚೇತೇಶ್ವರ ಪೂಜಾರ, ದೀಪಕ್ ಚಹರ್, ಕಾಶಿ ಸರ್ ಎಲ್ಲರೂ ನನ್ನೊಂದಿಗಿದ್ದರು. ಹಾಗಾದರೆ ಇವರುಗಳಲ್ಲಿ ಯಾರಿಗಾದರೂ ಪಾಸಿಟಿವ್ ಬಂದರೆ ಎಂಬ ವಿಷಯ ಮನಸ್ಸಿನಲ್ಲಿ ಓಡುತ್ತಿತ್ತು? ಅವರ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತಿದ್ದೆ. ಅದೇ ಸಮಯದಲ್ಲಿ ಮೈಕೆಲ್ ಹಸ್ಸಿ ಕೂಡ ಪಾಸಿಟಿವ್ ಆಗಿದ್ದಾರೆ ಎಂಬುದು ತಿಳಿಯಿತು. ಇಲ್ಲಿಯವರೆಗೆ ನಮಗೆ ವೈರಸ್ ಹೇಗೆ ಬಂತು ಎಂಬುದು ತಿಳಿದಿಲ್ಲ. ಮಾರ್ಚ್‌ನಲ್ಲಿ ಸಿಎಸ್‌ಕೆ ಸಿದ್ಧತೆ ಶಿಬಿರದ ಪ್ರಾರಂಭದಿಂದ ಕೊನೆಯವರೆಗೂ ಬಯೋಬಬಲ್ನಲ್ಲಿ ಕಟ್ಟುನಿಟ್ಟಿನ ನಿಯಮಗಳಿದ್ದವು. ಐಪಿಎಲ್ 2020 ರ ಸಮಯದಲ್ಲಿ ತಂಡದ ಸದಸ್ಯರು ಪಾಸಿಟಿವ್ ಆಗಿದ್ದರು. ಈ ಸಂದರ್ಭದಲ್ಲಿ, ಈ ಬಾರಿ ಮೊದಲಿಗಿಂತ ಹೆಚ್ಚು ಕಟ್ಟುನಿಟ್ಟಾಗಿತ್ತು. ನಾವು ಎಲ್ಲಿ ಸೋಂಕಿಗೆ ಒಳಗಾಗಿದ್ದೇವೆಂದು ನನಗೆ ತಿಳಿದಿಲ್ಲ ಎಂದರು.
ಕೊರೊನಾ ಪಾಸಿಟಿವ್ ಆಗಿದ್ದ ಅನುಭವವನ್ನು ವಿವರಿಸಿದ ಬಾಲಾಜಿ, ಈಗ ಹಿಂತಿರುಗಿ ನೋಡಿದಾಗ, ಇದು ಒಂದು ಬದುಕುವುದಕ್ಕಾಗಿ ನಡೆಸುವ ಹೋರಾಟ ಎಂದು ನಾನು ನೋಡುತ್ತೇನೆ. ಲಕ್ಷಾಂತರ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದರು. ಅನೇಕರು ಚೇತರಿಸಿಕೊಂಡರು ಆದರೆ ಅನೇಕರು ಅದೃಷ್ಟವಂತರಾಗಿಲ್ಲ. ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ಸವಾಲುಗಳು ಎದುರಾಗಿದ್ದವು ಆದರೆ ಅದು ವಿಭಿನ್ನ ರೀತಿಯ ಹೋರಾಟವಾಗಿತ್ತು ಎಂದು ತಮ್ಮ ಅನುಭವವನ್ನು ಬಾಲಾಜಿ ಈ ರೀತಿಯಾಗಿ ಹಂಚಿಕೊಂಡಿದ್ದಾರೆ.