ಕೊಲೆ ಪ್ರಕರಣ; ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಸಿಸಿಟಿವಿ ಸಾಕ್ಷ್ಯ..ಆರೋಪಿ ಸುಳಿವು ಕೊಟ್ಟ ಮೀರತ್ ಟೋಲ್ಪ್ಲಾಜಾ
Sushil Kumar: ಮರಣೋತ್ತರ ವರದಿಯ ಪ್ರಕಾರ, ಸಾಗರ್ ಅವರ ಎದೆಯ ಹೊರತಾಗಿ ದೇಹದ ಮೇಲೆ ಇರಿತದ ಗಾಯಗಳಿದ್ದವು. ಅವರ ದೇಹದ ಮೇಲೆ 50 ಕ್ಕೂ ಹೆಚ್ಚು ಗಾಯಗಳಿವೆ.
ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ 23 ವರ್ಷದ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ರಣಕಹಳೆ ಊದಿದ್ದಾರೆ. ಆರೋಪಿಗಳ ಬಂಧನಕ್ಕೆ ಕಾರಣವಾದ ಮಾಹಿತಿಗಾಗಿ ಪೊಲೀಸರು ಬಹುಮಾನವನ್ನೂ ಘೋಷಿಸಿದರು. ಹೀಗಾಗಿ ಸುಶೀಲ್ ಕುಮಾರ್ ಅವರಿಗೆ ಪೊಲೀಸರ ಕಾಟ ಹೆಚ್ಚುತ್ತಿವೆ. ಫೋರೆನ್ಸಿಕ್ ಸೈನ್ಸ್ ಲ್ಯಾಬ್ ತನ್ನ ವರದಿಯಲ್ಲಿ ಮೊಬೈಲ್‌ನಲ್ಲಿನ ವೀಡಿಯೊ ತುಣುಕುಗಳು ಸತ್ಯಕ್ಕೆ ಹತ್ತಿರವಾಗಿವೆ ಎಂದು ಹೇಳಿದೆ. ಈ ವಿಡಿಯೋದಲ್ಲಿ ಸುಶೀಲ್ ಕುಮಾರ್ ಅವರು ತಮ್ಮ ಸಹಚರರೊಂದಿಗೆ ಸಾಗರ್ ರಾಣಾ ಅವರನ್ನು ತಳಿಸುತ್ತಿರುವುದು ಕಂಡುಬರುತ್ತದೆ.
ಸುಶೀಲ್‌ಕುಮಾರ್ ವಿರುದ್ಧ ದೃಢವಾದ ಸಾಕ್ಷ್ಯಗಳು ಛತ್ರಸಾಲ್ ಕ್ರೀಡಾಂಗಣದ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳಲ್ಲಿ ಸುಶೀಲ್ ಕುಮಾರ್ ಮತ್ತು ಅವರ 20 ರಿಂದ 25 ಸಹಚರರು ಸಾಗರ್ ಮತ್ತು ಇತರ ಇಬ್ಬರನ್ನು ಥಳಿಸುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸುಶೀಲ್ ಕುಮಾರ್ ಮತ್ತು ಸಂಗಡಿಗರು, ಸಾಗರ್ ಹಾಗೂ ಇತರ ಇಬ್ಬರು ವ್ಯಕ್ತಿಗಳಿಗೆ ಹಾಕಿ ಸ್ಟಿಕ್ಗಳಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ಫೋರೆನ್ಸಿಕ್ ಸೈನ್ಸ್ ಲ್ಯಾಬ್ ಸಹ ವೀಡಿಯೊ ನಿಜ ಎಂದು ಹೇಳಿದೆ.
ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ ಕುಸ್ತಿಪಟು ಸಾಗರ್ ರಾಣಾ ಹತ್ಯೆಯಾದಾಗಿನಿಂದ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಸಂಗಡಿಗರು ತಲೆಮರಿಸಿಕೊಂಡಿದ್ದಾರೆ. ಆತ ಮತ್ತು ಇತರ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ ಸುಶೀಲ್ ಕುಮಾರ್ ಮತ್ತು ಅವರ ಸಹಚರರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಪೊಲೀಸರು ಊಹಿಸಿದ್ದರು. ಅದೇ ಸಮಯದಲ್ಲಿ, ಸುಶೀಲ್ ಕುಮಾರ್ ತನ್ನ ಬಂಧನವನ್ನು ತಪ್ಪಿಸಲು ನ್ಯಾಯಾಲಯದಲ್ಲಿ ಪೂರ್ವ ಬಂಧನ ಜಾಮೀನು ಅರ್ಜಿ ಸಲ್ಲಿಸಿದ್ದರು. ದೆಹಲಿ ಪೊಲೀಸರು ಸುಶೀಲ್ (1ಲಕ್ಷ) ಹಾಗೂ ಆತನ ಸಂಗಡಿಗರ (ಅಜಯ್ಗೆ 50000) ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದ್ದಾರೆ.
Sushil Kumar was seen at Meerut toll plaza: Delhi Police
Read @ANI Story | https://t.co/yOUydnODuI pic.twitter.com/PhtasLESaV
— ANI Digital (@ani_digital) May 20, 2021
Case relating to killing of Sagar Rana at Chhatrasal Stadium | Reward of Rs 1 Lakh on info leading to arrest of wrestler Sushil Kumar announced. Rs 50,000 reward announced for Ajay, who is absconding too: Delhi Police
Non-bailable warrant has been issued against Kumar & others. pic.twitter.com/0gsp04aStm
— ANI (@ANI) May 17, 2021
ಸಾಗರ್ ದೇಹದ ಮೇಲೆ 50 ಕ್ಕೂ ಹೆಚ್ಚು ಗಾಯಗಳು ಸುಶೀಲ್ ಕುಮಾರ್ ಇತರ ಕುಸ್ತಿಪಟುಗಳೊಂದಿಗೆ, ಪೂರ್ಣ ಸಿದ್ಧತೆ ಮಾಡಿಕೊಂಡು ಕುಸ್ತಿಪಟು ಸಾಗರ್ ರಾಣಾ ಅವರ ಮೇಲೆ ಆಕ್ರಮಣ ಮಾಡಿದ್ದಾರೆ. ಮರಣೋತ್ತರ ವರದಿಯ ಪ್ರಕಾರ, ಸಾಗರ್ ಅವರ ಎದೆಯ ಹೊರತಾಗಿ ದೇಹದ ಮೇಲೆ ಇರಿತದ ಗಾಯಗಳಿದ್ದವು. ಅವರ ದೇಹದ ಮೇಲೆ 50 ಕ್ಕೂ ಹೆಚ್ಚು ಗಾಯಗಳಿವೆ. ಸಾಗರ್ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆಯಲ್ಪಟ್ಟಿರುವುದು ಸಹ ವರದಿಯಾಗಿದೆ.
Published On - 6:20 pm, Sat, 22 May 21