AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಸುಂದರಿ ಸ್ಪರ್ಧೆ: ಭಾರತಕ್ಕೆ ನಿರಾಸೆ, ಯಾರ ಪಾಲಾಯ್ತು ಕಿರೀಟ?

Miss World 2025: ಹೈದರಾಬಾದ್​ನಲ್ಲಿ ಕಳೆದ ಒಂದು ವಾರದಿಂದಲೂ ನಡೆದ 72ನೇ ವಿಶ್ವ ಸುಂದರಿ ಸ್ಪರ್ಧೆ 2025ಕ್ಕೆ ಇಂದು (ಮೇ 31) ತೆರೆ ಬಿದ್ದಿದೆ. ಹಲವಾರು ದೇಶಗಳಿಂದ 108 ಮಂದಿ ಸುಂದರಿಯರು ಭಾಗಿಯಾಗಿದ್ದ ಈ ಸ್ಪರ್ಧೆಯಲ್ಲಿ ಅಂತಿಮವಾಗಿ ವಿಶ್ವ ಸುಂದರಿಯನ್ನು ಘೋಷಿಸಲಾಗಿದೆ. ಭಾರತಕ್ಕೆ ನಿರಾಸೆಯಾಗಿದ್ದು, ಥಾಯ್ಲೆಂಡ್ ಸುಂದರಿಗೆ ಕಿರೀಟ ಧಕ್ಕಿದೆ.

ವಿಶ್ವ ಸುಂದರಿ ಸ್ಪರ್ಧೆ: ಭಾರತಕ್ಕೆ ನಿರಾಸೆ, ಯಾರ ಪಾಲಾಯ್ತು ಕಿರೀಟ?
Opal Suchata
ಮಂಜುನಾಥ ಸಿ.
|

Updated on:May 31, 2025 | 11:12 PM

Share

ಹೈದರಾಬಾದ್​​ನಲ್ಲಿ ಆಯೋಜಿತವಾಗಿದ್ದ 72ನೇ ವಿಶ್ವ ಸುಂದರಿ (Miss World 2025) ಸ್ಪರ್ಧೆಯಲ್ಲಿ ಥಾಯ್ಲೆಂಡ್ ಚೆಲುವೆ ಓಪಲ್ ಸುಚಾತ ಅವರು ವಿಶ್ವ ಸುಂದರಿಯಾಗಿ ಆಯ್ಕೆ ಆಗಿದ್ದಾರೆ. ಹೈದರಾಬಾದ್​ನ ಹೈಟೆಕ್ಸ್ (HITEX) ಎಕ್ಸಿಬಿಷನ್ ಸೆಂಟರ್​​ನಲ್ಲಿ ಬಲು ಅದ್ಧೂರಿಯಾಗಿ, ವರ್ಣರಂಜಿತವಾಗಿ ನಡೆದ ಕಾರ್ಯಕ್ರಮದಲ್ಲಿ ಥಾಯ್ಲೆಂಡ್​ನ ಸುಂದರಿ ಓಪಲ್ ಸುಚಾತಗೆ ಕಳೆದ ಬಾರಿಯ ವಿಶ್ವ ಸುಂದರಿ ಜೆಕ್ ರಿಪಬ್ಲಿಕ್​​ನ ಕ್ರಿಸ್ಟಿಯಾನಾ ಅವರು ಕಿರೀಟ ತೊಡಿಸಿದರು.

ವಿವಿಧ ದೇಶಗಳ 108 ಮಂದಿ ಸುಂದರಿಯರು ಭಾಗಿ ಆಗಿದ್ದ ವಿಶ್ವ ಸುಂದರಿ ಸ್ಪರ್ಧೆ ಸುಮಾರು ಒಂದು ವಾರದ ಕಾಲ ನಡೆದಿದ್ದು, ಇಂದು (ಮೇ 31) ರಾತ್ರಿ ವೇಳೆಗೆ ಅಂತಿಮ ಸುತ್ತು ಮುಗಿದು ಫಲಿತಾಂಶ ಹೊರಬಿತ್ತು. ಥಾಯ್ಲೆಂಡ್​ನ ಓಪಲ್ ಸುಚಾತ ತಮ್ಮ ಅದ್ಭುತ ಸೌಂದರ್ಯದ ಜೊತೆಗೆ ಮಾತುಗಾರಿಕೆ, ಆದರ್ಶ, ವ್ಯಕ್ತಿತ್ವಗಳಿಂದಲೂ ಗಮನ ಸೆಳೆದು 2025ರ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದರು. ವಿಜೇತೆಗೆ ಬರೋಬ್ಬರಿ 8.50 ಕೋಟಿ ರೂಪಾಯಿ ಹಣವನ್ನು ಬಹುಮಾನವಾಗಿ ನೀಡಲಾಯ್ತು.

ಭಾರತದ ಪ್ರತಿನಿಧಿಯಾಗಿ ನಂದಿನಿ ಗುಪ್ತಾ ಇದ್ದರು. ಆರಂಭದ ಕೆಲ ಸುತ್ತುಗಳಲ್ಲಿ ಚುರುಕಾಗಿ ಭಾಗಿಯಾಗಿದ್ದ ನಂದಿನಿ ಗುಪ್ತಾ, ಅಂತಿಮ 40ರ ಹಂತಕ್ಕೂ ಬರದೆ ನಿರಾಸೆ ಅನುಭವಿಸಿದರು. ಕ್ವಾಟರ್​ಫೈನಲ್​ ಸುತ್ತಿಗೂ ಮುಂಚೆಯೇ ಅವರು ಸ್ಪರ್ಧೆಯಿಂದ ಹೊರಬಿದ್ದರು. ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹಲವು ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ‘ಬ್ಯೂಟಿ ವಿತ್ ಪರ್ಪಸ್, ಸ್ಪೋರ್ಟ್ಸ್, ಮಲ್ಟಿಮೀಡಿಯಾ, ಟ್ಯಾಲೆಂಟ್, ಟಾಪ್ ಮಾಡೆಲ್, ಹೆಡ್ ಟು ಹೆಡ್ ಹೀಗೆ ಹಲವು ಸುತ್ತುಗಳ ಸ್ಪರ್ಧೆಗಳನ್ನು ಎದುರಿಸಿ ಗೆದ್ದವರನ್ನು ಅಂತಿಮ ಸುತ್ತುಗಳಿಗೆ ಆಯ್ಕೆ ಮಾಡಲಾಗಿತ್ತು. ಕೊನೆಗೆ ಉಳಿದ 40 ಮಂದಿಯನ್ನು ಜಡ್ಜ್​ಗಳು ಹಲವು ರೀತಿ ಸಂದರ್ಶಿಸಿ ಅಂತಿಮ ಸುತ್ತಿಗೆ ಆಯ್ಕೆ ಮಾಡಿದ್ದರು. ಎಲ್ಲ ಸುತ್ತುಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಥಾಯ್ಲೆಂಡ್​​ನ ಓಪಲ್ ಸುಚಾತ ಅವರು ವಿಶ್ವ ಸುಂದರಿ ಎಂದು ಘೋಷಿಸಲಾಯ್ತು.

ಇದನ್ನೂ ಓದಿ:ಹೈದರಾಬಾದ್​ನಲ್ಲಿ ವಿಶ್ವ ಸುಂದರಿ ಫೈನಲ್; ಗೆದ್ದವರಿಗೆ ಬಂಪರ್ ಆಫರ್

ಥಾಯ್ಲೆಂಡ್​​ನ ಓಪಲ್ ಸುಚಾತ ವಿಶ್ವ ಸುಂದರಿ ಎನಿಸಿಕೊಂಡರೆ, ಮೊದಲ ರನ್ನರ್ ಅಪ್ ಆಗಿದ್ದು ಇಥಿಯೋಫಿಯಾದ ಹಸೆಟ್ ಡೆರೆಜೆ, ಎರಡನೇ ರನ್ನರ್ ಅಪ್ ಪೋಲಂಡ್​ನ ಮೇಜ್ ಕ್ಲಾಡ್ಜ್, ಮೂರನೇ ರನ್ನರ್ ಅಪ್ ಮಾರ್ಟಿನಿಕ್ಯೂನ ಔರೈಲ್ ಜೋಶಿಮ್. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಓಪಲ್ ಸುಚಾತ, ‘ಈ ಗೆಲುವು ಕೇವಲ ನನ್ನ ಖಾಸಗಿ ಗೆಲುವಲ್ಲ, ತಮ್ಮ ಮಾತನ್ನು ಲೋಕಕ್ಕೆ ಹೇಳ ಬಯಸುವ, ತಮ್ಮನ್ನು ತಾವು ಜಗತ್ತಿನ ಮುಂದೆ ಸಾಧಿಸಿ ತೋರಿಸಿಕೊಳ್ಳಬಯಸುವ ಎಲ್ಲ ಯುವತಿಯರ ಗೆಲುವು, ನಾನು ವಿಶ್ವ ಸುಂದರಿ ಆಗಿರುವ ಸಮಯವನ್ನು ನನ್ನ ಕೈಲಾದ ಬದಲಾವಣೆ ತರಲು ಉಪಯೋಗಿಸುತ್ತೇನೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:11 pm, Sat, 31 May 25