AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನಲ್ಲಿ ವಿಶ್ವ ಸುಂದರಿ ಫೈನಲ್; ಗೆದ್ದವರಿಗೆ ಬಂಪರ್ ಆಫರ್

Miss World 2025: ಮಿಸ್ ವರ್ಲ್ಡ್ 2025ರ ಗ್ರ್ಯಾಂಡ್ ಫಿನಾಲೆ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. 108 ಸ್ಪರ್ಧಿಗಳು ವಿವಿಧ ಸುತ್ತುಗಳಲ್ಲಿ ಪಾಲ್ಗೊಂಡಿದ್ದಾರೆ. ಭಾರತವನ್ನು ನಂದಿನಿ ಗುಪ್ತಾ ಪ್ರತಿನಿಧಿಸುತ್ತಿದ್ದಾರೆ. ಭಾರತ ಗೆದ್ದರೆ ಅದು ದಾಖಲೆಯಾಗಲಿದೆ. ವಿಜೇತರಿಗೆ ಒಂದು ಮಿಲಿಯನ್ ಡಾಲರ್ ಮತ್ತು ವಜ್ರದ ಕಿರೀಟ ಸಿಗಲಿದೆ.

ಹೈದರಾಬಾದ್​ನಲ್ಲಿ ವಿಶ್ವ ಸುಂದರಿ ಫೈನಲ್; ಗೆದ್ದವರಿಗೆ ಬಂಪರ್ ಆಫರ್
ಮಿಸ್​ ವರ್ಲ್ಡ್
ರಾಜೇಶ್ ದುಗ್ಗುಮನೆ
|

Updated on: May 31, 2025 | 11:45 AM

Share

72ನೇ ಸಾಲಿನ ‘ಮಿಸ್ ವರ್ಲ್ಡ್​ 2025’ (Miss World 2025) ಗ್ರ್ಯಾಂಡ್ ಫಿನಾಲೆ ಇಂದು (ಮೇ 31) ಸಂಜೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆಯಲಿದೆ. ವಿಶ್ವದ ನಾನಾ ಕಡೆಯಿಂದ ಒಟ್ಟೂ 108 ಸ್ಪರ್ಧಿಗಳು ಇದರಲ್ಲಿ ಭಾಗಿ ಆಗಿದ್ದರು. ಕಳೆದ ಒಂದು ತಿಂಗಳಿನಿಂದ ವಿವಿಧ ಸುತ್ತುಗಳಲ್ಲಿ ಈ ಸ್ಪರ್ಧಿಗಳು ಭಾವಹಿಸಿದ್ದರು. ಇಂದು ವಿನ್ನರ್ ಯಾರು ಎಂದು ಘೋಷಿಸುವ ಸಮಯ. ಸಂಜೆಯ ವೇಳೆಗೆ ಈ ಬಗ್ಗೆ ಘೋಷಣೆ ಆಗಲಿದೆ. ವಿನ್ ಆದವರಿಗೆ ವಿವಿಧ ಸವಲತ್ತುಗಳು ಸಿಗಲಿವೆ.

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು 108 ದೇಶಗಳ ಸುಂದರಿಯರು ಬಂದಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಿಂದ ಕೆಲವರನ್ನು ಫೈನಲ್‌ಗೆ ಆಯ್ಕೆ ಮಾಡಲಾಯಿತು. ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಿಗೆ ಪ್ರತಿ ವಿಭಾಗದಿಂದ ನಾಲ್ವರು ವಿಜೇತರಂತೆ 16 ಹೆಸರುಗಳನ್ನು ಫೈನಲ್ ಮಾಡಲಾಗಿದೆ.

ತೀರ್ಪುಗಾರರ ಸದಸ್ಯರು ಕೇಳುವ ಪ್ರಶ್ನೆಗಳಿಗೆ ನೀಡುವ ಉತ್ತರಗಳ ಆಧಾರದ ಮೇಲೆ ಪ್ರತಿ ವಿಭಾಗದಿಂದ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಅವರಲ್ಲಿ ಒಬ್ಬರು ಮಿಸ್ ವರ್ಲ್ಡ್ ಆಗಿರುತ್ತಾರೆ, ಮತ್ತು ಉಳಿದ ಮೂವರು ರನ್ನರ್ ಅಪ್ ಆಗಿರುತ್ತಾರೆ. ಕಳೆದ ಬಾರಿಯ ವಿಶ್ವ ಸುಂದರಿ ವಿಜೇತೆ, ಜೆಕ್ ಗಣರಾಜ್ಯದ ಸುಂದರಿ ಕ್ರಿಸ್ಟಿನಾ ಈ ಬಾರಿ ವಜ್ರದ ಕಿರೀಟವನ್ನು ಹಸ್ತಾಂತರಿಸಲಿದ್ದಾರೆ. www.watchmissworld.com ಲೈವ್ ವೀಕ್ಷಿಸಬಹುದು.

ಇದನ್ನೂ ಓದಿ
Image
ಟಾಲಿವುಡ್​ನಲ್ಲಿ ರೀ-ಯೂನಿಯನ್ ಸಂಭ್ರಮ; ಸ್ಯಾಂಡಲ್​ವುಡ್​ನಲ್ಲಿ ಯಾವಾಗ?
Image
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
Image
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
Image
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

ನಾಲ್ವರು ನ್ಯಾಯಾಧೀಶರು..

ಶುಕ್ರವಾರ ಅಂತಿಮ ಸ್ಪರ್ಧೆಗಳಿಗೆ ನಾಲ್ವರು ತೀರ್ಪುಗಾರರ ಆಯ್ಕೆ ಆಗಿದೆ. ಇವರಲ್ಲಿ ನಟ ಸೋನು ಸೂದ್, ಮೇಘಾ ಎಂಜಿನಿಯರಿಂಗ್ ನಿರ್ದೇಶಕಿ ಸುಧಾ ರೆಡ್ಡಿ, ಮಿಸ್ ಇಂಗ್ಲೆಂಡ್ 2014 ವಿಜೇತೆ ಕರೀನಾ ಟರ್ರೆಲ್ ಮತ್ತು ಮಿಸ್ ವರ್ಲ್ಡ್ ಆರ್ಗನೈಸೇಶನ್ ಅಧ್ಯಕ್ಷೆ ಜೂಲಿಯಾ ಮಾರ್ಲಿ ಸೇರಿದ್ದಾರೆ. ವಿಜೇತರನ್ನು ಜೂಲಿಯಾ ಮಾರ್ಲಿ ಘೋಷಿಸಲಿದ್ದಾರೆ.

ಭಾರತ ಗೆದ್ದರೆ ಅದು ದಾಖಲೆಯಾಗುತ್ತದೆ..

ಈ ಬಾರಿ ಭಾರತವನ್ನು ಮಿಸ್ ಇಂಡಿಯಾ ನಂದಿನಿ ಗುಪ್ತಾ ಪ್ರತಿನಿಧಿಸುತ್ತಿದ್ದಾರೆ. 1951ರಿಂದ ಈವರೆಗೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತ ಮತ್ತು ವೆನೆಜುವೆಲಾ ತಲಾ 6 ಬಾರಿ ಕಿರೀಟವನ್ನು ಗೆದ್ದಿವೆ. ಒಂದೊಮ್ಮೆ ಈ ಬಾರ ಭಾರತಕ್ಕೆ ಮಿಸ್ ವರ್ಲ್ಡ್ ಸಿಕ್ಕರೆ ಭಾರತ ಅತಿ ಹೆಚ್ಚು ಬಾರಿ ಮಿಸ್ ವರ್ಲ್ಡ್ ಗೆದ್ದ ದೇಶ ಎಂಬ ಖ್ಯಾತಿಗೆ ಭಾಜನ ಆಗಲಿದೆ.

ಗೆದ್ದರೆ ಲಾಟರಿ

ಮಿಸ್ ವರ್ಲ್ಡ್ ವಿಜೇತರು ಒಂದು ಮಿಲಿಯನ್ ಡಾಲರ್ ಹಣ ಪಡೆಯುತ್ತಾರೆ. ಅಂದರೆ, ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 8.5 ಕೋಟಿ ರೂಪಾಯಿ. ಇದಲ್ಲದೆ, 1,770 ವಜ್ರಗಳನ್ನು ಹೊಂದಿರುವ ಬಿಳಿ ಚಿನ್ನದ ಕಿರೀಟವನ್ನು ಸ್ವೀಕರಿಸುತ್ತಾರೆ. ಈ ಕೀರಿಟ ಒಂದು ವರ್ಷದವರೆಗೆ ಅವರು ಇಟ್ಟುಕೊಳ್ಳಬಹುದು. ಆ ಬಳಿಕ ಅದನ್ನು ಮುಂದಿನ ವಿಜೇತರಿಗೆ ಹಸ್ತಾಂತರಿಸಬೇಕು.

ಇದನ್ನೂ ಓದಿ: ‘ಮಿಸ್ ವರ್ಲ್ಡ್ 2024’ ಕೂಡ ಶಾರುಖ್ ಖಾನ್ ಅಭಿಮಾನಿ; ರಿವೀಲ್ ಮಾಡಿದ ಕ್ರಿಸ್ಟೀನಾ

ಮಿಸ್​ ವರ್ಲ್ಡ್ ಆದವರು ಒಂದು ವರ್ಷದವರೆಗೆ ಉಚಿತವಾಗಿ ಪ್ರಪಂಚವನ್ನು ಸುತ್ತುವ ಅವಕಾಶವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ ಸಾಕಷ್ಟು ಜಾಹೀರಾತು, ಚಲನಚಿತ್ರಗಳಲ್ಲಿ ಅವಕಾಶ ಪಡೆಯುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಅವರಿಗೆ ಅವಕಾಶಗಳಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.