‘ಮಿಸ್ ವರ್ಲ್ಡ್ 2024’ ಕೂಡ ಶಾರುಖ್ ಖಾನ್ ಅಭಿಮಾನಿ; ರಿವೀಲ್ ಮಾಡಿದ ಕ್ರಿಸ್ಟೀನಾ

ಮುಂಬೈ​ನಲ್ಲಿ ‘ಮಿಸ್ ವರ್ಲ್ಡ್ 2024’ ಕಾರ್ಯಕ್ರಮ ನಡೆದಿದೆ. ಈ ವೇಳೆ ತಮ್ಮ ಬ್ಯೂಟಿ ಹಾಗೂ ಬುದ್ಧಿವಂತಿಕೆಯಿಂದ ಕ್ರಿಸ್ಟೀನಾ ಎಲ್ಲರ ಮನ ಗೆದ್ದರು. ಅವರು ವಿಶ್ವ ಸುಂದರಿ ಕಿರೀಟ ಧರಿಸಿದರು. ವೇದಿಕೆ ಮೇಲೆ ಅವರಿಗೆ ಈ ಕಿರೀಟ ಹಾಕಲಾಯಿತು.  ಆ ಬಳಿಕ ಅವರು ಅನೇಕ ಸಂದರ್ಶನ ನೀಡಿದ್ದಾರೆ.

‘ಮಿಸ್ ವರ್ಲ್ಡ್ 2024’ ಕೂಡ ಶಾರುಖ್ ಖಾನ್ ಅಭಿಮಾನಿ; ರಿವೀಲ್ ಮಾಡಿದ ಕ್ರಿಸ್ಟೀನಾ
ಶಾರುಖ್-ಕ್ರಿಸ್ಟೀನಾ
Follow us
ರಾಜೇಶ್ ದುಗ್ಗುಮನೆ
|

Updated on: Mar 12, 2024 | 10:51 AM

ನಟ ಶಾರುಖ್ ಖಾನ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಇದು ಪದೇ ಪದೇ ಸಾಬೀತು ಆಗುತ್ತಲೇ ಇರುತ್ತದೆ. ಅವರ ಸಿನಿಮಾಗಳನ್ನು ನೋಡಲು ಬೇರೆ ರಾಷ್ಟ್ರಗಳ ಮಂದಿ ಆಸಕ್ತಿ ತೋರಿಸುತ್ತಾರೆ. ಚೆಕ್ ರಿಪಬ್ಲಿಕ್​ನ ಕ್ರಿಸ್ಟೀನಾಗೆ ಇತ್ತೀಚೆಗೆ ‘ಮಿಸ್ ವರ್ಲ್ಡ್ 2024’ (Miss World 2024) ಪಟ್ಟ ಸಿಕ್ಕಿದೆ. ಅವರು ಕೂಡ ಶಾರುಖ್ ಖಾನ್ ಅಭಿಮಾನಿ ಅನ್ನೋದು ರಿವೀಲ್ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಭರ್ಜರಿ ಖುಷಿಯಾಗಿದ್ದಾರೆ.

ಮುಂಬೈನ ಜಿಯೋ ಸೆಂಟರ್​ನಲ್ಲಿ ‘ಮಿಸ್ ವರ್ಲ್ಡ್ 2024’ ಕಾರ್ಯಕ್ರಮ ನಡೆದಿದೆ. ಈ ವೇಳೆ ತಮ್ಮ ಬ್ಯೂಟಿ ಹಾಗೂ ಬುದ್ಧಿವಂತಿಕೆಯಿಂದ ಕ್ರಿಸ್ಟೀನಾ ಎಲ್ಲರ ಮನ ಗೆದ್ದರು. ಅವರು ವಿಶ್ವ ಸುಂದರಿ ಕಿರೀಟ ಧರಿಸಿದರು. ವೇದಿಕೆ ಮೇಲೆ ಅವರಿಗೆ ಈ ಕಿರೀಟ ಹಾಕಲಾಯಿತು.  ಆ ಬಳಿಕ ಅವರು ಅನೇಕ ಸಂದರ್ಶನ ನೀಡಿದ್ದಾರೆ. ಆ ಸಂದರ್ಭದಲ್ಲಿ ಅವರು ಭಾರತೀಯ ಸಿನಿಮಾಗಳ ಮೇಲಿನ ಪ್ರಿತಿ ಬಗ್ಗೆ ಮಾತನಾಡಿದ್ದಾರೆ.

‘ಕಭಿ ಖುಷಿ ಕಭಿ ಘಮ್’ ಚಿತ್ರದ ‘ಬೋಲೆ ಚುಡಿಯಾ..’ ಕ್ರಿಸ್ಟೀನಾ ಅವರ ಫೇವರಿಟ್ ಹಾಡುಗಳಲ್ಲಿ ಒಂದು. ಪ್ರಿಯಾಂಕಾ ಚೋಪ್ರಾ ಅವರು ತಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಕ್ರಿಸ್ಟೀನಾ ಅವರಿಗೆ ಭಾರತೀಯ ಆಹಾರಗಳ ಮೇಲೆ ವಿಶೇಷ ಪ್ರೀತಿ ಇದೆ. ಅವರಿಗೆ ಬಟರ್ ಚಿಕನ್ ಎಂದರೆ ಸಖತ್ ಇಷ್ಟ. ಭಾರತಕ್ಕೆ ಬಂದಾಗ ಅವರು ಇದನ್ನು ತಿನ್ನುತ್ತಾರಂತೆ. ‘ನೀವು ಶಾರುಖ್ ಅಭಿಮಾನಿಯೇ’ ಎನ್ನುವ ಪ್ರಶ್ನೆಗೆ ಅವರು ಹೌದು ಎಂದು ತಲೆಯಾಡಿಸಿದ್ದಾರೆ. ಕ್ರಿಸ್ಟೀನಾ ಇನ್ನೂ ವಿದ್ಯಾರ್ಥಿನಿ. ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಇದರ ಜೊತೆಗೆ ಅವರು ಅಂತಾರಾಷ್ಟ್ರೀಯ ಮಾಡೆಲ್ ಕೂಡ ಹೌದು.

ಇದನ್ನೂ ಓದಿ: ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ; ಇದರ ಬೆಲೆ ಇಷ್ಟೊಂದಾ?

ಭಾರತದಿಂದ ಸಿನಿ ಶೆಟ್ಟಿ ಅವರು ‘ಮಿಸ್ ವರ್ಲ್ಡ್​’ ಸ್ಪರ್ಧೆಗೆ ತೆರಳಿದ್ದರು. ಆದರೆ, ಅವರಿಗೆ ಟಾಪ್ 4ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಸಾಜಿದ್ ನಾಡಿಯಾದ್ವಾಲಾ, ಕೃತಿ ಸನೋನ್, ಪೂಜಾ ಹೆಗ್ಡೆ, ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಮೊದಲಾದವರು ಜ್ಯೂರಿ ಸ್ಥಾನದಲ್ಲಿ ಇದ್ದರು. ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ