ಅಪ್ಪು ಫೋಟೋ ಹಿಡಿದು ಶಿವಣ್ಣನ ಬಳಿ ನುಗ್ಗಿದ ಅಭಿಮಾನಿ; ಸಿಟ್ಟಾದ ನಟ

ಅಪ್ಪು ಫೋಟೋ ಹಿಡಿದು ಶಿವಣ್ಣನ ಬಳಿ ನುಗ್ಗಿದ ಅಭಿಮಾನಿ; ಸಿಟ್ಟಾದ ನಟ

ರಾಜೇಶ್ ದುಗ್ಗುಮನೆ
|

Updated on: Mar 12, 2024 | 11:58 AM

‘ಕರಟಕ ಧಮನಕ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಪ್ರಚಾರಕ್ಕೆ ಅವರು ಬಳ್ಳಾರಿಗೆ ತೆರಳಿದ್ದರು. ಈ ವೇಳೆ ಅಭಿಮಾನಿಯೋರ್ವ ಪುನೀತ್ ರಾಜ್​ಕುಮಾರ್ ಫೋಟೋ ಹಿಡಿದು ಶಿವಣ್ಣ ಬಳಿ ನುಗ್ಗಲು ಪ್ರಯತ್ನಿಸಿದ್ದಾನೆ. ಮೊದಲೇ ನೂಕು ನುಗ್ಗಲು ಇತ್ತು. ಇದರ ಜೊತೆ ಅಭಿಮಾನಿ ಈ ರೀತಿ ನಡೆದುಕೊಂಡಿದ್ದು ಶಿವಣ್ಣಗೆ ಸ್ವಲ್ಪವೂ ಇಷ್ಟವಾಗಿಲ್ಲ.

ಶಿವರಾಜ್​ಕುಮಾರ್ (Shivarajkumar) ಅವರು ಅಭಿಮಾನಿಗಳ ಜೊತೆ ಕೂಲ್ ಆಗಿ ಇರೋಕೆ ಪ್ರಯತ್ನಿಸುತ್ತಾರೆ. ಆದರೆ, ಕೆಲವೊಮ್ಮೆ ಫ್ಯಾನ್ಸ್ ಮಾಡುವ ಅತಿರೇಕದ ಕೆಲಸದಿಂದ ಅವರು ಸಿಟ್ಟಾಗುತ್ತಾರೆ. ಇತ್ತೀಚೆಗೆ ಶಿವಣ್ಣ ಹಾಗೂ ಪ್ರಭುದೇವ ನಟನೆಯ ‘ಕರಟಕ ಧಮನಕ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಪ್ರಚಾರಕ್ಕೆ ಅವರು ಬಳ್ಳಾರಿಗೆ ತೆರಳಿದ್ದರು. ಈ ವೇಳೆ ಅಭಿಮಾನಿಯೋರ್ವ ಪುನೀತ್ ರಾಜ್​ಕುಮಾರ್ ಫೋಟೋ ಹಿಡಿದು ಶಿವಣ್ಣ ಬಳಿ ನುಗ್ಗಲು ಪ್ರಯತ್ನಿಸಿದ್ದಾನೆ. ಮೊದಲೇ ನೂಕು ನುಗ್ಗಲು ಇತ್ತು. ಇದರ ಜೊತೆ ಅಭಿಮಾನಿ ಈ ರೀತಿ ನಡೆದುಕೊಂಡಿದ್ದು ಅವರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಹೀಗಾಗಿ ಶಿವರಾಜ್​ಕುಮಾರ್ ಫುಲ್ ಗರಂ ಆಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ