Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷೇತ್ರದಾಚೆಯ ಜನ ಸಹ ನನಗೆ ಟಿಕೆಟ್ ಸಿಗಲಿ ಅಂತ ಪ್ರಾರ್ಥಿಸುತ್ತಿದ್ದಾರೆ, ನನ್ನಂಥ ಭಾಗ್ಯಶಾಲಿ ಬೇರ‍್ಯಾರೂ ಇಲ್ಲ: ಪ್ರತಾಪ್ ಸಿಂಹ

ಕ್ಷೇತ್ರದಾಚೆಯ ಜನ ಸಹ ನನಗೆ ಟಿಕೆಟ್ ಸಿಗಲಿ ಅಂತ ಪ್ರಾರ್ಥಿಸುತ್ತಿದ್ದಾರೆ, ನನ್ನಂಥ ಭಾಗ್ಯಶಾಲಿ ಬೇರ‍್ಯಾರೂ ಇಲ್ಲ: ಪ್ರತಾಪ್ ಸಿಂಹ

ಅರುಣ್​ ಕುಮಾರ್​ ಬೆಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on:Mar 15, 2024 | 5:47 PM

ಕೊಡಗು-ಮೈಸೂರು ಭಾಗದ ಜನ ಮಾತ್ರವಲ್ಲ, ಕ್ಷೇತ್ರದಾಚೆಯ ಜನ ಸಹ ಪ್ರತಾಪ್ ಸಿಂಹಗೆ ಟಿಕೆಟ್ ಸಿಗಬೇಕು ಅಂತ ಹಾರೈಸುತ್ತಿದ್ದಾರೆ ಮತ್ತು ಪ್ರಾರ್ಥಿಸುತ್ತಿದ್ದಾರೆ, ತನಗೋಸ್ಕರ ಅವರು ಮಾಡುತ್ತಿರುವ ಪ್ರಚಾರ ಟ್ರೆಂಡಿಂಗ್ ಆಗಿದೆ. ಈ ಪಾಟಿ ಜನರ ಪ್ರೀತಿ ಗಳಿಸಿರುವ ತಾನು ನಿಜಕ್ಕೂ ಭಾಗ್ಯಶಾಲಿ ಎಂದು ಹೇಳಿದರು.

ಮೈಸೂರು: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ (Kodagu-Mysuru constituency) ಟಿಕೆಟ್ ಹಾಲಿ ಸಂಸದ ಪ್ರತಾಪ್ ಸಿಂಹಗೆ (Pratap Simha) ಸಿಗದಿರುವುದು ಹೆಚ್ಚು ಕಡಿಮೆ ಖಚಿತವಾಗಿದೆ. ಪ್ರತಾಪ್ ಅವರಿಗೆ ಆಘಾತ ಮತ್ತು ದುಃಖ ತಡೆದುಕೊಳ್ಳುವುದು ಕಷ್ಟವಾಗುತ್ತಿದೆ. ಕಳೆದ ರಾತ್ರಿ ಸಾಮಾಜಿಕ ಜಾಲತಾಣವೊಂದರಲ್ಲಿ (social media) ತಮ್ಮ ದುಮ್ಮಾನವನ್ನು ಲೈವ್ ಆಗಿ ಹಂಚಿಕೊಂಡ ಪ್ರತಾಪ್ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು. ಟಿಕೆಟ್ ತಪ್ಪಿರುವುದು ಇನ್ನೂ ಖಚಿತವಾಗಿಲ್ಲ, ಸಿಈಸಿ ಸಭೆಯಲ್ಲಿದ್ದವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಆದರೆ ಟಿಕೆಟ್ ಸಿಗಲಿ ಬಿಡಲಿ, ಜನರು ತನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿರುವುದಾಗಿ ಅವರು ಹೇಳಿದರು. ಕೇವಲ ಕೊಡಗು-ಮೈಸೂರು ಭಾಗದ ಜನ ಮಾತ್ರವಲ್ಲ, ಕ್ಷೇತ್ರದಾಚೆಯ ಜನ ಸಹ ಪ್ರತಾಪ್ ಸಿಂಹಗೆ ಟಿಕೆಟ್ ಸಿಗಬೇಕು ಅಂತ ಹಾರೈಸುತ್ತಿದ್ದಾರೆ ಮತ್ತು ಪ್ರಾರ್ಥಿಸುತ್ತಿದ್ದಾರೆ, ತನಗೋಸ್ಕರ ಅವರು ಮಾಡುತ್ತಿರುವ ಪ್ರಚಾರ ಟ್ರೆಂಡಿಂಗ್ ಆಗಿದೆ. ಈ ಪಾಟಿ ಜನರ ಪ್ರೀತಿ ಗಳಿಸಿರುವ ತಾನು ನಿಜಕ್ಕೂ ಭಾಗ್ಯಶಾಲಿ ಎಂದು ಹೇಳಿದರು. ಆದರೆ, ಇದುವರೆಗೆ ಅಧಿಕೃತ ಘೋಷಣೆಯಾಗಿರದ ಕಾರಣ ಟಿಕೆಟ್ ಸಿಗುವ ವಿಶ್ವಾಸವಂತೂ ತನಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ಮೈಸೂರು ಕೊಡಗು ಕ್ಷೇತ್ರದಲ್ಲಿ ನಾನು ಗೆದ್ದರೆ ಸಿದ್ದರಾಮಯ್ಯ ಸೀಟು ಅಲುಗಾಡುತ್ತದೆ: ಪ್ರತಾಪ್ ಸಿಂಹ

Published on: Mar 12, 2024 10:21 AM