ಮುಂದೆ ಬೆಂಗಳೂರು ಮೈಸೂರು ಮೆಟ್ರೋ: ಸಂಸದ ಪ್ರತಾಪ್ ಸಿಂಹ ಭರವಸೆ
ಮೈಸೂರು ಕೊಡಗು ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟನೆ ಮಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು-ರಾಮೇಶ್ವರಂ ರೈಲು ಬರಲಿದೆ. ಬೆಂಗಳೂರು-ಮೈಸೂರಿಗೆ ಮೆಟ್ರೋ ಬರಲಿದೆ ಎಂದು ಭರವಸೆ ನೀಡಿದರು. ಇದೇ ವೇಳೆ ಮಾತನಾಡಿದ ಶಾಸಕ ಡಾ ಅಶ್ವಥ್ ನಾರಾಯಣ್, ಸಂಸದ ಪ್ರತಾಪ್ ಸಿಂಹ ಅದ್ಭುತವಾಗಿ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು.
ಮೈಸೂರು, ಫೆ.15: 2014ಕ್ಕೂ ಮೊದಲು ಒಂದು ರೈಲು ಬಂದಿಲ್ಲ. ನಾನು 11 ಟ್ರೈನ್ ತಂದಿದ್ದೇನೆ. ಶೀಘ್ರದಲ್ಲೇ 12ನೇ ರೈಲು ಬರಲಿದೆ. ಮೈಸೂರು-ರಾಮೇಶ್ವರಂ ರೈಲು ಬರಲಿದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ (Pratap Simha) ಭರವಸೆ ನೀಡಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಸಾಕಷ್ಟು ಅನುದಾನ ನೀಡಿದ್ದಾರೆ. ಮುಂದೆ ಬೆಂಗಳೂರು-ಮೈಸೂರಿಗೆ ಮೆಟ್ರೋ ಬರಲಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮೈಸೂರು ಕೊಡಗು ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟನೆ ಮಾಡಿದ ಸಂಸದ ಪ್ರತಾಪ್ ಸಿಂಹ, ಈ ವೇಳೆ ಮುಂದೆ ಬೆಂಗಳೂರು ಮೈಸೂರು ಮೆಟ್ರೋ ಬರಲಿದೆ ಎಂದು ಭರವಸೆ ನೀಡಿದರು. ಚುನಾವಣೆಗೆ ಹೋಗಬೇಕಾದರೆ ಏನು ಮಾಡುತ್ತೇವೆ? ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದೇವೆ. 10 ವರ್ಷದಲ್ಲಿ ನಾನು ಕೆಲಸ ಮಾಡಿದ ರಿಪೋರ್ಟ್ ಕಾರ್ಡ್ ನೀಡಿದ್ದೇನೆ. ಪ್ರಧಾನಿ ಮೋದಿ ಕೊಟ್ಟಿದ್ದೇನು? ಪ್ರತಾಪ್ ಸಿಂಹ ತಂದಿದ್ದೇನು? ಅನ್ನೋ ಬುಕ್‌ಲೆಟ್ ಇದರಲ್ಲಿ ಕೇಂದ್ರದ ಡಿಪಾಲ್ಟ್ ಯೋಜನೆ ಪಟ್ಟಿ ಇಲ್ಲಿ ಮಾಡಿಲ್ಲ. 2014ರ ಹಿಂದೆ ಒಂದು ಟ್ರೈನ್ ಬಂದಿಲ್ಲ. ನಾನು 11 ಟ್ರೈನ್ ತಂದಿದ್ದೇನೆ. 12ನೇ ರೈಲು ಸದ್ಯದಲ್ಲೇ ಬರಲಿದೆ ಎಂದು ತಿಳಿಸಿದರು.
ಬೊಮ್ಮಾಯಿ, ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಕಷ್ಟು ಅನುದಾನ ನೀಡಿದ್ದಾರೆ. ಮುಂದೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆಗಲಿದೆ. ಮೈಸೂರು ಬೆಂಗಳೂರು ಮೆಟ್ರೋ ಬರಲಿದೆ. ಮೈಸೂರು ಚೆನ್ನೈ ಬುಲೆಟ್ ರೈಲು ಶೀಘ್ರವಾಗಿ ಆಗಲಿದೆ. ನಾನು ಮತ್ತೊಮ್ಮೆ ಆಶೀರ್ವಾದ ಕೇಳುತ್ತಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. 2014, 2019ರಲ್ಲಿ ಗೆಲ್ಲಿಸಿದ್ದಾರೆ. ಸತತವಾಗಿ ಆಯ್ಕೆಯಾಗಿ ದಾಖಲೆ ಮಾಡಿದ್ದೇನೆ. ಪಕ್ಷ ಆಶೀರ್ವಾದ, ತೀರ್ಮಾನ ಮಾಡಿದರೆ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ: ಹಾಲವರ್ತಿ ಗ್ರಾಮದಲ್ಲಿ ಅಸ್ಪಶ್ಯತೆ ಜೀವಂತ, ದಲಿತರ ಕಟಿಂಗ್ಗೆ ನಿರಾಕರಣೆ, ಹೋಟೆಲ್ನಲ್ಲಿ ತಟ್ಟೆ ನೀಡದ ಸಿಬ್ಬಂದಿ
ಮೈಸೂರು ಇಡೀ ವಿಶ್ವದ ಗಮನ ಸೆಳೆಯುತ್ತದೆ
ಮೈಸೂರಿನಲ್ಲಿ ಮಾತನಾಡಿದ ಶಾಸಕ ಡಾ ಅಶ್ವಥ್ ನಾರಾಯಣ್, ಮೈಸೂರು ಜಿಲ್ಲೆಯಲ್ಲಿ ಅನುಭವಿಗಳಿದ್ದಾರೆ. ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು ಅನ್ನೋದು ಎಲ್ಲರ ಆಶಯವಾಗಿದೆ. 400ಕ್ಕೂ ಹೆಚ್ಚು ಸೀಟುಗಳನ್ನು ಎನ್ಡಿಎ ಮೈತ್ರಿ ಗೆಲ್ಲುತ್ತದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ. ಮೈಸೂರಿನ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ರೈಲ್ವೇ, ಆರೋಗ್ಯ, ಶಿಕ್ಷಣ, ಕುಡಿಯವ ನೀರು ಸೇರಿ ಎಲ್ಲಾ ಕಡೆ ನಾಲ್ವಡಿ ಕಾಲದ ರೀತಿಯಲ್ಲಿ ಪ್ರತಾಪ್ ಸಿಂಹ ಕೆಲಸ ಮಾಡಿದ್ದಾರೆ. ಕೊಡಗು, ಮೈಸೂರು ಎಲ್ಲಾ ಕ್ಷೇತ್ರದಲ್ಲೂ ಮತ್ತೊಮ್ಮೆ ನಮ್ಮ ಅಭ್ಯರ್ಥಿ ಆಯ್ಕೆಯಾಗಬೇಕು. ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆಯಬೇಕು. ರಾಮಮಂದಿರದ ಶಿಲ್ಪಿ ಕಲ್ಲು ಮೈಸೂರಿನದ್ದೇ. ಮೈಸೂರು ಅಂದರೆ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಸಂಸದ ಪ್ರತಾಪ್ ಸಿಂಹ ಹಿಂದಿನ ಅವಧಿಯ ಕೆಲಸದ ದಾಖಲೆ ಇಟ್ಟಿದ್ದಾರೆ. ಅದಕ್ಕಾಗಿ ಬುಕ್‌ಲೆಟ್ ಮಾಡಿಸಿದ್ದಾರೆ ಎಂದು ಡಾ ಅಶ್ವಥ್ ನಾರಾಯಾಣ್ ತಿಳಿಸಿದರು.
ಮೈಸೂರು, ಕೊಡಗು ಲೋಕಸಭಾ ಕ್ಷೇತ್ರ ಸಮನ್ವಯ ಕೇಂದ್ರ ಆಗುತ್ತೆ
ಬಿಜೆಪಿ, ಜೆಡಿಎಸ್ ಮೈತ್ರಿಯಾಗಿ ಕೆಲಸ ಮಾಡುವ ಜವಬ್ದಾರಿಯಿದೆ. ಮೈಸೂರು ಲೋಕಸಭಾ ಕ್ಷೇತ್ರವನ್ನು ನಿಶ್ಚಿತವಾಗಿ ನಾವು ಗೆಲ್ಲುತ್ತೇವೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಎಸ್.ಎ ರಾಮದಾಸ್ ಹೇಳಿದರು. ದೇಶದಲ್ಲಿ ಹಾಲಿ ಸಂಸದರ ಜೊತೆ 68 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಗೆಲುವಿಗೆ ಶ್ರಮ ಹಾಕುತ್ತಿದ್ದೇವೆ. ಈ ಬಾರಿ ಅಭಿವೃದ್ಧಿ ಹೆಸರಿನಲ್ಲಿ ನಾವು ಮತಯಾಚನೆ ಮಾಡ್ತೀವಿ. ಮೋದಿ ಅವರ 2ನೇ ಆವೃತ್ತಿಯ ಅಭಿವೃದ್ಧಿ ಮೂಲಕ ಮತಯಾಚನೆ ಮಾಡುತ್ತಿದ್ದೇವೆ. ಮೈಸೂರು, ಕೊಡಗು ಲೋಕಸಭಾ ಕ್ಷೇತ್ರ ಸಮನ್ವಯ ಕೇಂದ್ರ ಆಗುತ್ತೆ. ಯೋಜನೆ ಕಾರ್ಯತಂತ್ರ ಈ ಕಾರ್ಯಾಲಯದಲ್ಲಿ ಆಗಲಿದೆ. ಸಿದ್ದರಾಮಯ್ಯ, ಡಿಕೆಶಿ ಮೈಸೂರು ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಆದ್ರೂ ಮೈಸೂರು ಭಾಗದ 4 ಕ್ಷೇತ್ರಗಳು ಈ ಬಾರಿ ಬಿಜೆಪಿ ತೆಕ್ಕೆಗೆ ಬೀಳಲಿದೆ ಎಂದು ಮಾಜಿ ಸಚಿವ ಎಸ್.ಎ ರಾಮದಾಸ್ ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:48 pm, Thu, 15 February 24