Miss World 2024: ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ; ಇದರ ಬೆಲೆ ಇಷ್ಟೊಂದಾ?

‘ಮಿಸ್ ವರ್ಲ್ಡ್' ಕಿರೀಟವನ್ನು ಜಪಾನಿನ ಕಂಪನಿ ಮಿಕಿಮೊಟೊ ವಿನ್ಯಾಸಗೊಳಿಸಿದೆ. ಈ ಕಂಪನಿಯು ವಿಶೇಷವಾಗಿ ಮುತ್ತುಗಳಿಗೆ ಹೆಸರುವಾಸಿಯಾಗಿದೆ. ಈ ಕಿರೀಟವನ್ನು ನೀಲಿ ಮತ್ತು ಬಿಳಿ ಬಣ್ಣದ ವಜ್ರಗಳಿಂದ ಮಾಡಲಾಗಿದೆ. ಪ್ರಸ್ತುತ ವಿಶ್ವ ಸುಂದರಿ ಕಿರೀಟವನ್ನು 2017ರಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲಿ ಇದು ನಾಲ್ಕನೇ ಕಿರೀಟವಾಗಿದೆ.

Miss World 2024: ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ; ಇದರ ಬೆಲೆ ಇಷ್ಟೊಂದಾ?
ಕ್ರಿಸ್ಟಿನಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Mar 10, 2024 | 2:04 AM

ವಿವಿಧ ದೇಶಗಳ ಪ್ರತಿಭಾವಂತ ಮತ್ತು ಸುಂದರ ಮಹಿಳೆಯರು ಪ್ರತಿ ವರ್ಷ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಮಿಸ್ ವರ್ಲ್ಡ್’ನಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಗೆದ್ದವರಿಗೆ ಸಾಕಷ್ಟು ಜನಪ್ರಿಯತೆ ಸಿಗುತ್ತದೆ. ಈ ಬಾರಿ ಕರ್ನಾಟಕ ಮೂಲದ ಸಿನಿ ಶೆಟ್ಟಿ (Sini Shetty)ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಭಾಗಿ ಆಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. ಚೆಕ್ ರಿಪಬ್ಲಿಕ್​ನ ಕ್ರಿಸ್ಟಿನಾ ಅವರಿಗೆ ಮಿಸ್ ವರ್ಲ್ಡ್ ಕಿರೀಟ ಒಲಿದಿದೆ.  ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ 71ನೇ ಸಾಲಿನ ಮಿಸ್​ ವರ್ಲ್ಡ್ ಕಾರ್ಯಕ್ರಮ ನಡೆದಿದೆ. 28 ವರ್ಷಗಳ ಬಳಿಕ ಭಾರತದಲ್ಲಿ ಕಾರ್ಯಕ್ರಮ ನಡೆದಿದೆ ಅನ್ನೋದು ವಿಶೇಷ.

‘ಮಿಸ್ ವರ್ಲ್ಡ್ 2024’ ಕಾರ್ಯಕ್ರಮದಲ್ಲಿ 115 ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದವು. ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಈ ಕಾರ್ಯಕ್ರಮ ಆರಂಭ ಆಯಿತು. ಸೋನಿ ಲೈವ್​ನಲ್ಲಿ ಈ ಕಾರ್ಯಕ್ರಮ ನೇರ ವೀಕ್ಷಣೆಗೆ ಅವಕಾಶ ಇತ್ತು. ಈ ಕಾರ್ಯಕ್ರಮದಲ್ಲಿ ಕೃತಿ ಸನೋನ್ ಮೊದಲಾದವರು ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ಕ್ರಿಸ್ಟಿನಾ ವಿನ್ನರ್ ಎಂದು ಘೋಷಣೆ ಮಾಡಲಾಯಿತು. ಈ ಮೊದಲು ಭಾರತದ ಐಶ್ವರ್ಯಾ, ಪ್ರಿಯಾಂಕಾ ಚೋಪ್ರಾ ಮೊದಲಾದವರು ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದಿದ್ದಾರೆ.

‘ಮಿಸ್ ವರ್ಲ್ಡ್’ ಸ್ಪರ್ಧೆಗೆ 12 ಜಡ್ಜ್​​ಗಳ ಪ್ಯಾನಲ್ ಇದೆ. ಬಾಲಿವುಡ್ ನಟ ಕೃತಿ ಸನೋನ್, ಪೂಜಾ ಹೆಗ್ಡೆ ಮೊದಲಾದವರು ಇದರ ಜಡ್ಜ್​ ಆಗಿದ್ದಾರೆ. ಇದರ ಜೊತೆ ಮೂರು ಮಿಸ್ ವರ್ಲ್ಡ್​ ಟೈಟಲ್ ಹೋಲ್ಡರ್​ಗಳು ಕೂಡ ಇದರಲ್ಲಿ ಇದ್ದಾರೆ.

ಯಾರು ಕ್ರಿಸ್ಟಿನಾ

ಕ್ರಿಸ್ಟಿನಾ ಅವರು ವಿದ್ಯಾರ್ಥಿನಿ. ಅವರು ಅಂತಾರಾಷ್ಟ್ರೀಯ ಮಾಡೆಲ್ ಕೂಡ ಹೌದು. ಲಾ ಹಾಗೂ ಬಿಸ್ನೆಸ್ ಅಡ್ಮಿಸ್ಟ್ರೇಷನ್​ನಲ್ಲಿ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಅವರು ತಮ್ಮದೇ ಫೌಂಡೇಷನ್ ಆರಂಭಿಸಿ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಅವರು ತಂಜಾನಿಯಾದಲ್ಲಿ ಬಡ ಮಕ್ಕಳಿಗಾಗಿ ಇಂಗ್ಲಿಷ್ ಸ್ಕೂಲ್ ಓಪನ್ ಮಾಡಿದ್ದಾರೆ. ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ಯಾರು ಈ ಸಿನಿ ಶೆಟ್ಟಿ?

ಸಿನಿ ಶೆಟ್ಟಿ ಅವರು ಮುಂಬೈ ಮೂಲದವರು. ಅವರು ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (ಸಿಎಫ್‌ಎ) ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ಸಿನಿ ಶೆಟ್ಟಿ ನೃತ್ಯಗಾರ್ತಿ ಕೂಡ ಹೌದು. ಈಗ ಅವರು ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ತಮ್ಮ 4ನೇ ವಯಸ್ಸಿಗೆ ನೃತ್ಯ ಮಾಡಲು ಅವರು ಪ್ರಾರಂಭಿಸಿದರು. ಇವರು 2022ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆಗಿದ್ದಾರೆ. ಅವರಿಗೆ ಪ್ರಶಸ್ತಿ ತಪ್ಪಿದೆ.

ಕಿರೀಟದ ಬಗ್ಗೆ..

‘ಮಿಸ್ ವರ್ಲ್ಡ್’ ಕಿರೀಟವನ್ನು ಜಪಾನಿನ ಕಂಪನಿ ಮಿಕಿಮೊಟೊ ವಿನ್ಯಾಸಗೊಳಿಸಿದೆ. ಈ ಕಂಪನಿಯು ವಿಶೇಷವಾಗಿ ಮುತ್ತುಗಳಿಗೆ ಹೆಸರುವಾಸಿಯಾಗಿದೆ. ಈ ಕಿರೀಟವನ್ನು ನೀಲಿ ಮತ್ತು ಬಿಳಿ ಬಣ್ಣದ ವಜ್ರಗಳಿಂದ ಮಾಡಲಾಗಿದೆ. ಪ್ರಸ್ತುತ ವಿಶ್ವ ಸುಂದರಿ ಕಿರೀಟವನ್ನು 2017ರಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲಿ ಇದು ನಾಲ್ಕನೇ ಕಿರೀಟವಾಗಿದೆ. ಹಿಂದಿನ ಕಿರೀಟಗಳನ್ನು ಮಿಕಿಮೊಟೊ ಕಂಪನಿಯು ವಿನ್ಯಾಸಗೊಳಿಸಿದೆ. ಹಿಂದಿನ ಕಿರೀಟಗಳು ವಿಭಿನ್ನ ವಿನ್ಯಾಸಗಳು ಮತ್ತು ಬಣ್ಣಗಳನ್ನು ಹೊಂದಿದ್ದವು.

ಮೊದಲ ವಿಶ್ವ ಸುಂದರಿ ಕಿರೀಟವನ್ನು 1951ರಿಂದ 1973ರವರೆಗೆ ಬಳಸಲಾಯಿತು. ಇದು ಮುತ್ತುಗಳು ಮತ್ತು ವಜ್ರಗಳಿಂದ ಮಾಡಿದ ಸಾಮಾನ್ಯ ಕಿರೀಟವಾಗಿತ್ತು. ಎರಡನೇ ಕಿರೀಟವನ್ನು 1974ರಿಂದ 2000 ರವರೆಗೆ ಬಳಸಲಾಯಿತು. ಇದು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿತ್ತು. ಮೂರನೇ ಕಿರೀಟವನ್ನು 2001ರಿಂದ 2016ರವರೆಗೆ ಬಳಸಲಾಯಿತು.

ಇದನ್ನೂ ಓದಿ: ಕರುನಾಡಿನ ರೈತನ ಮಗಳು ರಚಿಕಾ ಸುರೇಶ್​ಗೆ ‘ಮಿಸ್ ಇಂಡಿಯಾ ಟೀನ್ 2023’ ಕಿರೀಟ

ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಕಿರೀಟವು 1,00,000 ಡಾಲರ್‌ಗಳಷ್ಟು ಮೌಲ್ಯದ್ದಾಗಿದೆ. ಅಂದರೆ 82 ಲಕ್ಷ ರೂಪಾಯಿ ಆಗಲಿದೆ. ಆದರೆ ಈ ಕಿರೀಟ ಎಂದಿಗೂ ವಿಜೇತರಿಗೆ ಸೇರುವುದಿಲ್ಲ. ವಿಶ್ವ ಸುಂದರಿ ಸಂಸ್ಥೆಯು ಈ ಕಿರೀಟವನ್ನು ವಿಜೇತರಿಗೆ ಒಂದು ವರ್ಷದವರೆಗೆ ನೀಡುತ್ತದೆ. ನಂತರ ಅದು ಮುಂದಿನ ವಿಜೇತರಿಗೆ ಹಸ್ತಾಂತರಿಸಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:01 am, Sun, 10 March 24