ಕರುನಾಡಿನ ರೈತನ ಮಗಳು ರಚಿಕಾ ಸುರೇಶ್​ಗೆ ‘ಮಿಸ್ ಇಂಡಿಯಾ ಟೀನ್ 2023’ ಕಿರೀಟ

ಮಾಡೆಲಿಂಗ್ ಜೊತೆಗೆ ನಟನೆಯನ್ನೂ ಮುಂದುವರಿಸಿಕೊಂಡು ಹೋಗುತ್ತಿರುವ ರಚಿಕಾ ಸುರೇಶ್ ಅವರು ಈಗಾಗಲೇ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಪರಿಚಯಗೊಂಡಿದ್ದಾರೆ. ಹಲವು ಅವಕಾಶಗಳು ಅವರಿಗೆ ಸಿಗುತ್ತಿವೆ. ಇತ್ತೀಚೆಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಅವರು ‘ಮಿಸ್ ಇಂಡಿಯಾ ಟೀನ್ 2023’ ಕಿರೀಟ ಗೆದ್ದಿದ್ದಾರೆ.

ಕರುನಾಡಿನ ರೈತನ ಮಗಳು ರಚಿಕಾ ಸುರೇಶ್​ಗೆ ‘ಮಿಸ್ ಇಂಡಿಯಾ ಟೀನ್ 2023’ ಕಿರೀಟ
ರಚಿಕಾ ಸುರೇಶ್​
Follow us
ಮದನ್​ ಕುಮಾರ್​
|

Updated on: Oct 13, 2023 | 7:45 PM

ಮಾಡೆಲಿಂಗ್​ ಮತ್ತು ಸಿನಿಮಾ ರಂಗಕ್ಕೆ ಹತ್ತಿರದ ನಂಟು. ಈ ಎರಡರ ಪೈಕಿ ಒಂದು ಕ್ಷೇತ್ರದಲ್ಲಿ ಗುರುತಿಸಿಕೊಂಡವರಿಗೆ ಇನ್ನೊಂದರಲ್ಲಿ ಅವಕಾಶಗಳು ಕೈಬೀಸಿ ಕರೆಯುತ್ತವೆ. ರೈತ ಕುಟುಂಬದ ಮಕ್ಕಳು ಕೂಡ ಮಾಡೆಲಿಂಗ್ (Modeling)​ ಕ್ಷೇತ್ರದಲ್ಲಿ ಗಮನ ಸೆಳೆಯಬಹುದು ಎಂಬುದಕ್ಕೆ ರಚಿಕಾ ಸುರೇಶ್​ (Rachika Suresh) ಅವರ ಲೇಟೆಸ್ಟ್​ ಉದಾಹರಣೆ. ಸಿನಿಮಾ ನಟಿಯಾಗಿಯೂ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ರೈತನ ಮಗಳಾಗಿರುವ ಅವರು ಒಂದು ಪ್ರತಿಷ್ಠಿತ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ‘ಮಿಸ್ ಇಂಡಿಯಾ ಟೀನ್ 2023’ (Miss India Teen 2023) ಸ್ಪರ್ಧೆಯಲ್ಲಿ ಕಿರೀಟ ಪಡೆದ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ರಚಿಕಾ ಸುರೇಶ್ ಅವರು ಮೂಲತಃ ಶ್ರವಣಬೆಳಗೊಳದವರು. ರೈತನ ಮಗಳಾದ ಅವರಿಗೆ ಮಾಡೆಲಿಂಗ್​ ಹಾಗೂ ನಟನೆಯಲ್ಲಿ ಅಪಾರ ಆಸಕ್ತಿ ಇದೆ. ವಿವಿಧ ಸೌಂದರ್ಯ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದ್ದಾರೆ. ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ದೆಹಲಿಯ ನೋಯ್ಡಾ ಫಿಲ್ಮ್​ ಸಿಟಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ರಚಿಕಾ ಸುರೇಶ್​ ಅವರು ‘ಮಿಸ್ ಇಂಡಿಯಾ ಟೀನ್ 2023’ ಕಿರೀಟ ಗೆದ್ದಿದ್ದಾರೆ. ಈ ಗೆಲುವಿನಿಂದ ಅವರಿಗೆ ಇನ್ನಷ್ಟು ಅವಕಾಶಗಳು ಸಿಗಲಿವೆ.

ಇದನ್ನೂ ಓದಿ: ಮಾಡೆಲಿಂಗ್ ಮಾಡುತ್ತಿದ್ದ ದಿನಗಳಲ್ಲಿ ದೀಪಿಕಾ ಹಾಗೂ ಕತ್ರಿನಾ ಹೇಗಿದ್ದರು? ಅಪರೂಪದ ಚಿತ್ರ ನೋಡಿ

ಮಾಡೆಲಿಂಗ್ ಜೊತೆಜೊತೆಗೆ ನಟನೆಯನ್ನೂ ಮುಂದುವರಿಸಿಕೊಂಡು ಹೋಗುತ್ತಿರುವ ರಚಿಕಾ ಅವರು ಈಗಾಗಲೇ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಪರಿಚಯಗೊಂಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಅವರಿಗೆ ಡಿಮ್ಯಾಂಡ್​ ಹೆಚ್ಚಿದೆ. ತಮಿಳಿನ ‘ಎಂಜಾಯ್’ ಚಿತ್ರದಲ್ಲೂ ರಚಿಕಾ ಸುರೇಶ್ ಅವರು ಅಭಿನಯಿಸಿದ್ದಾರೆ. ಖ್ಯಾತ ಫ್ಯಾಷನ್ ತರಬೇತುದಾರ ಫಾರೆವರ್ ನವೀನ್ ಕುಮಾರ್ ಅವರಿಂದ ಟ್ರೇನಿಂಗ್​ ಪಡೆದಿರುವ ರಚಿಕಾ ಸುರೇಶ್ ಅವರು ಅನೇಕ ಕಂಪನಿಗಳಿಗೆ ರೂಪದರ್ಶಿ ಆಗಿದ್ದಾರೆ. ಹಲವು ಆಫರ್​ಗಳು ಬರುತ್ತಿದ್ದರೂ ಕೂಡ ತಮಗೆ ಸೂಕ್ತ ಎನಿಸಿದ ಸಿನಿಮಾಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಎರಡು ಚಿತ್ರಗಳಿಗೆ ನಾಯಕಿಯಾದ ನಟಿ ಗಗನಾ ಕುಂಚಿ

‘ಮಿಸ್ ಇಂಡಿಯಾ ಟೀನ್’ ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ 18ರಿಂದ 20 ಸ್ಪರ್ಧಿಗಳು ಪೈಪೋಟಿ ನೀಡಿದ್ದರು. ವೆಸ್ಟರ್ನ್ ವೇರ್​, ಟ್ರೆಡಿಷನಲ್ ವೇರ್ ಸೇರಿದಂತೆ ಮೂರ್ನಾಲ್ಕು ಸುತ್ತುಗಳಲ್ಲಿ ಸ್ಪರ್ಧೆ ಏರ್ಪಟ್ಟಿತ್ತು. ಜೊತೆಗೆ ಪ್ರಶ್ನೋತ್ತರದ ಸುತ್ತು ಕೂಡ ಇತ್ತು. ಬದಲಾವಣೆಗೆ ಒಂದು ಅವಕಾಶ ಮತ್ತು ಅಧಿಕಾರ ಸಿಕ್ಕರೆ ತಮಿಳುನಾಡು-ಕರ್ನಾಟಕ ನಡುವಿನ ಕಾವೇರಿ ನೀರು ಹಂಚಿಕೆಯ ಸಮಸ್ಯೆಯನ್ನು ಸಾಮರಸ್ಯದಿಂದ ಬಗೆಹರಿಸುವುದಾಗಿ ಜಡ್ಜಸ್ ಎದುರು ಉತ್ತರಿಸಿ ಗಮನ ಸೆಳೆದಿದ್ದಾರೆ ರಚಿಕಾ. ವಿವಿಧ ಬಗೆಯಲ್ಲಿ ಫೋಟೋಶೂಟ್​ ಮಾಡಿಸಿರುವ ಅವರು ಆ ಮೂಲಕವೂ ಶೈನ್​ ಆಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.