Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಘೋಸ್ಟ್’ ಭೇಟಿಯಾದ ‘ಘೋಸ್ಟ್’: ಮೆಚ್ಚಿನ ನಟನ ಭೇಟಿಯಾದ ಶಿವಣ್ಣ

Ghost: ನಟ ಶಿವರಾಜ್ ಕುಮಾರ್ ತಮ್ಮ 'ಘೊಸ್ಟ್' ಸಿನಿಮಾದ ಪ್ರಚಾರಕ್ಕೆ ಮುಂಬೈಗೆ ತೆರಳಿದ್ದಾರೆ. ಮುಂಬೈನಲ್ಲಿ ಕನ್ನಡದ 'ಘೋಸ್ಟ್' ತಮಿಳಿನ 'ಘೋಸ್ಟ್' ಅನ್ನು ಭೇಟಿಯಾಗಿದ್ದಾರೆ.

'ಘೋಸ್ಟ್' ಭೇಟಿಯಾದ 'ಘೋಸ್ಟ್': ಮೆಚ್ಚಿನ ನಟನ ಭೇಟಿಯಾದ ಶಿವಣ್ಣ
ಶಿವರಾಜ್ ಕುಮಾರ್
Follow us
ಮಂಜುನಾಥ ಸಿ.
|

Updated on:Oct 13, 2023 | 7:03 PM

ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್‘ (Ghost) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಹಲವು ರಾಜ್ಯಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ಶಿವಣ್ಣನ ‘ಘೋಸ್ಟ್’ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಇದೇ ಕಾರಣಕ್ಕೆ ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನು ಮಾಡಲಾಗುತ್ತಿದೆ. ಸಿನಿಮಾ ಪ್ರಚಾರಕ್ಕೆ ಮುಂಬೈಗೆ ಹೋಗಿದ್ದ ಶಿವಣ್ಣನಿಗೆ ಅಲ್ಲಿ ಮತ್ತೊಬ್ಬ ‘ಘೋಸ್ಟ್’ ಸಿಕ್ಕಿದ್ದಾರೆ. ಅದುವೆ ಕಮಲ್ ಹಾಸನ್.

ಕಮಲ್ ಹಾಸನ್​ ತಮ್ಮ ಈ ಹಿಂದಿನ ಸಿನಿಮಾ ‘ವಿಕ್ರಂ’ನಲ್ಲಿ ‘ಘೋಸ್ಟ್’ ಆಗಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಕಮಲ್ ಪಾತ್ರವನ್ನು ‘ಘೋಸ್ಟ್’ ಎಂದೇ ಕರೆಯಲಾಗಿತ್ತು. ಇದೀಗ ಶಿವರಾಜ್ ಕುಮಾರ್ ಹಾಗೂ ಕಮಲ್ ಹಾಸನ್ ಭೇಟಿ ಆಗಿದ್ದು ಕನ್ನಡದ ‘ಘೋಸ್ಟ್’, ತಮಿಳಿನ ‘ಘೋಸ್ಟ್’ ಅನ್ನು ಭೇಟಿಯಾದಂತಾಗಿದೆ.

ಕಮಲ್ ಅವರನ್ನು ಭೇಟಿಯಾದ ಚಿತ್ರವನ್ನು ಶಿವರಾಜ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಒನ್ಸ್ ಅಪಾನ್ ಎ ಟೈಮ್ ದೇರ್ ಲಿವ್ಡ್ ಎ ಘೋಸ್ಟ್’ ಎಂದು ಕಮಲ್​ರ ‘ವಿಕ್ರಂ’ ಸಿನಿಮಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ‘ಘೋಸ್ಟ್’ ಸಿನಿಮಾವನ್ನು ಮುಂಬೈನಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಕಮಲ್ ಹಾಸನ್ ಸಿಕ್ಕರು ಎಂದು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮಧ್ಯರಾತ್ರಿಯಿಂದಲೇ ಶುರುವಾಗಲಿದೆ ಘೋಸ್ಟ್ ಅಬ್ಬರ, ಶಿವಣ್ಣನಂತೆ ಅಭಿಮಾನಿಗಳಲ್ಲೂ ಉತ್ಸಾಹ

ಅಂದಹಾಗೆ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್​ರ ಬಹುದೊಡ್ಡ ಅಭಿಮಾನಿ. ಹಲವು ಸಂದರ್ಭಗಳಲ್ಲಿ ಶಿವರಾಜ್ ಕುಮಾರ್ ಅವರು ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಇಂದು ಹಂಚಿಕೊಂಡಿರುವ ಚಿತ್ರದಲ್ಲೂ ಸಹ ಶಿವಣ್ಣ ಸ್ಟಾರ್ ನಟನ ರೀತಿಯಲ್ಲದೆ, ಒಬ್ಬ ಅಭಿಮಾನಿಯ ಹಾವಭಾವದಲ್ಲಿಯೇ ಕಮಲ್ ಅವರ ಜೊತೆಗೆ ಚಿತ್ರ ಕ್ಲಿಕ್ಕಿಸಿಕೊಂಡಿದ್ದಾರೆ. ಕಮಲ್ ಹಾಸನ್ ಹಾಗೂ ಶಿವರಾಜ್ ಕುಮಾರ್ ಅವರ ಸ್ನೇಹ ಹಳೆಯದ್ದು. ಕಮಲ್ ಹಾಸನ್ ರ ಸೂಪರ್ ಹಿಟ್ ಸಿನಿಮಾ ‘ಪುಷ್ಪಕ ವಿಮಾನ’ಕ್ಕೆ ಕ್ಲ್ಯಾಪ್ ಮಾಡಿದ್ದಿದ್ದು ಡಾ ರಾಜ್​ಕುಮಾರ್. ಕಳೆದ ಬಾರಿ ಬೆಂಗಳೂರಿಗೆ ಬಂದಾಗ ಕಮಲ್ ಅವರು ಅಣ್ಣಾವ್ರ ಸರಳತೆಯನ್ನು ಬಹುವಾಗಿ ಕೊಂಡಾಡಿದ್ದರು.

ಇತ್ತೀಚೆಗಷ್ಟೆ ರಜನೀಕಾಂತ್ ಜೊತೆಗೆ ‘ಜೈಲರ್’ ತಮಿಳು ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಜೊತೆಗೆ ಶಿವರಾಜ್ ಕುಮಾರ್ ಪಾತ್ರ ಬಹಳ ಜನಪ್ರಿಯತೆ ಗಳಿಸಿಕೊಂಡಿತ್ತು. ಕಮಲ್ ಪಾತ್ರವೇ ಅಲ್ಲದೆ ರಜನೀಕಾಂತ್ ಅವರೊಟ್ಟಿಗೂ ಶಿವರಾಜ್ ಕುಮಾರ್ ಅವರಿಗೆ ಬಹಳ ಆತ್ಮೀಯತೆ ಇದೆ.

ಇದೀಗ ಶಿವರಾಜ್ ಕುಮಾರ್ ನಟನೆಯ ‘ಘೊಸ್ಟ್’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೈಲರ್, ಹಾಡು ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಹೈಪ್ ಸೃಷ್ಠಿಯಾಗಿದೆ. ಸಿನಿಮಾ ಅಕ್ಟೋಬರ್ 19ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Fri, 13 October 23