‘ಅವರು ಹಾಗೆ ಮಾಡಬಾರದಿತ್ತು’: ‘ಕಬ್ಜ’ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಅಸಮಾಧಾನ

Kabza: ಆರ್ ಚಂದ್ರು ನಿರ್ದೇಶಿಸಿ, ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿ, ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದ 'ಕಬ್ಜ' ಸಿನಿಮಾದ ಬಗ್ಗೆ ಶಿವರಾಜ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಅವರು ಹಾಗೆ ಮಾಡಬಾರದಿತ್ತು': 'ಕಬ್ಜ' ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಅಸಮಾಧಾನ
ಕಬ್ಜ
Follow us
ಮಂಜುನಾಥ ಸಿ.
|

Updated on: Oct 12, 2023 | 9:37 PM

ಶಿವರಾಜ್ ಕುಮಾರ್ (Shiva Rajkumar) ಚಿತ್ರರಂಗದಲ್ಲಿ ಯಾರ ಬಗ್ಗೆಯೂ ನೇರವಾಗಿ ಅಸಮಾಧಾನ, ಸಿಟ್ಟು ವ್ಯಕ್ತಪಡಿಸಿದ್ದು ಬಹಳ ಅಪರೂಪ. ಎಲ್ಲರ ಬಗ್ಗೆಯೂ ಪ್ರೀತಿ, ಕರುಣೆಯಿಂದಲೇ ಮಾತನಾಡುತ್ತಾರೆ. ಇದೀಗ ‘ಘೋಸ್ಟ್’ ಸಿನಿಮಾದ ಬಿಡುಗಡೆಯ ಹೊಸ್ತಿಲಲ್ಲಿರುವ ಶಿವರಾಜ್ ಕುಮಾರ್, ಆರ್ ಚಂದ್ರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದ ‘ಕಬ್ಜ’ ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ‘ಘೋಸ್ಟ್’ ಸಿನಿಮಾ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ ಎಂಬ ಬಗ್ಗೆ ಮಾತನಾಡುತ್ತಾ, ”ನಿಜ ಹೇಳಬೇಕೆಂದರೆ ‘ಕಬ್ಜ’ ಸಿನಿಮಾದ ಬಳಿಕ ನಮ್ಮ ಸಿನಿಮಾವನ್ನು ಹಿಂದಿಗೆ ತೆಗೆದುಕೊಂಡು ಹೋಗುವುದು ತುಸು ಕಷ್ಟವಾಗುತ್ತಿದೆ. ಚಂದ್ರು ಮೇಲೆ ದೂರು ಎಂದಲ್ಲ, ನನಗೆ ಅವರ ಬಗ್ಗೆ ಗೌರವ ಇದೆ. ಆದರೆ ‘ಜೈಲರ್’ ನಲ್ಲಿ ಅತಿಥಿ ಪಾತ್ರಗಳನ್ನು ಎಷ್ಟು ಬೇಕೋ ಹೇಗೆ ಬೇಕೋ ಹಾಗೆ ಬಳಸಿಕೊಂಡರು. ಬಹಳ ಜಾಣತನದಿಂದ ಅತಿಥಿ ಪಾತ್ರಗಳನ್ನು ಬಳಸಿಕೊಂಡರು. ಆದರೆ ‘ಕಬ್ಜ’ನಲ್ಲಿ ಹಾಗಾಗಲಿಲ್ಲ. ಅತಿಥಿ ಪಾತ್ರಗಳನ್ನೇ ಹೈಲೆಟ್ ಮಾಡಿಬಿಟ್ಟರು. ಅದು ಸರಿಯಾದ ಕ್ರಮವಲ್ಲ” ಎಂದಿದ್ದಾರೆ ಶಿವರಾಜ್ ಕುಮಾರ್.

”ಜನಗಳನ್ನು ಬಹಳ ಮಿಸ್ ಲೀಡ್ ಮಾಡಿದರು. ಸಿನಿಮಾವನ್ನು ಕೊಂಡು ಕೊಳ್ಳುವವರು ಸಹ ಮಿಸ್ ಲೀಡ್ ಆದರು. ಹಣ ತೆಗೆದುಕೊಳ್ಳುವಾಗಲು ಸಹ ಗೌರವಯುತವಾಗಿ ತೆಗೆದುಕೊಳ್ಳಬೇಕು. ಸ್ವಲ್ಪ ಕಡಿಮೆ ತೆಗೆದುಕೊಂಡರು ಪರವಾಗಿಲ್ಲ. ಪ್ರಾಮಾಣಿಕವಾಗಿ ತೆಗೆದುಕೊಳ್ಳಬೇಕು. ಚಂದ್ರು ಹೇಳಿದರು, ಕತೆ ಹೀಗಿದೆ, ಮುಂದಿನ ಭಾಗಕ್ಕೆ ಲೀಡ್ ಆಗುತ್ತದೆ ಎಂದು. ಉಪೇಂದ್ರ, ಸುದೀಪ್ ಸಹ ಇದ್ದಾರೆ ಚೆನ್ನಾಗಿರುತ್ತೆ ಎಂದು ನಾನು ನಟಿಸಿದೆ” ಎಂದಿದ್ದಾರೆ ಶಿವರಾಜ್ ಕುಮಾರ್.

ಇದನ್ನೂ ಓದಿ:ಬಾಲಿವುಡ್​ನಲ್ಲಿ ಹವಾ ಎಬ್ಬಿಸಲು ಶಿವರಾಜ್ ಕುಮಾರ್ ರೆಡಿ: ಏನಿದು ಹೊಸ ಸುದ್ದಿ?

”ಸಿನಿಮಾ ಬಿಡುಗಡೆ ಆದಾಗ ತಮಿಳುನಾಡಿನಲ್ಲಿ ಶೂಟಿಂಗ್ ಮಾಡುತ್ತಿದ್ದೆ. ವಾಪಸ್ ಬರಬೇಕಾದರೆ ತಿಂಡಿ ತಿನ್ನುತ್ತಿದ್ದಾಗ ಕೆಲವರು ಬಂದು, ಸರ್, ಬಹಳ ನಿರೀಕ್ಷೆ ಇಟ್ಟುಕೊಂಡು ಹೋಗಿದ್ದೆವು ಸರ್, ಬರೀ ಒಂದೇ ಸೀನ್​ನಲ್ಲಿ ಇದ್ದೀರ ನೀವು ಎಂದರು. ಇಲ್ಲೂ ಸಹ ಕಟೌಟ್ ಎಲ್ಲ ಹಾಕಿಬಿಟ್ಟಿದ್ದರು ಆದರೆ ಇರುವುದು ಅತ್ಯಂತ ಕಡಿಮೆ ಸೀನ್. ಅದು ನನಗೂ ಸಹ ಯಾಕೋ ಸರಿ ಬರಲಿಲ್ಲ” ಎಂದು ಬೇಸರದಿಂದಲೇ ಹೇಳಿದರು ಶಿವರಾಜ್ ಕುಮಾರ್.

”ಜೈಲರ್’ ಸಿನಿಮಾದವರು ಜಾಣತನದಿಂದ ಅತಿಥಿ ಪಾತ್ರಗಳನ್ನು ಬಳಸಿಕೊಂಡರು. ಮೊದಲಿನಿಂದಲೂ ಅವರು ಅತಿಥಿ ಪಾತ್ರಗಳಷ್ಟೆ ಎಂಬುದನ್ನೇ ಹೇಳಿಕೊಂಡು ಬಂದರು. ಅದನ್ನು ಬಹಳ ಚೆನ್ನಾಗಿ ತೋರಿಸಿದರು, ಹಾಗೆಯೇ ಒಳ್ಳೆ ರಿಲೀಸ್ ಮಾಡಿದರು. ಇನ್ಯಾವ ಪರಭಾಷೆ ಸಿನಿಮಾ ಸಹ ಓಡದಷ್ಟು ಚೆನ್ನಾಗಿ ‘ಜೈಲರ್’ ಸಿನಿಮಾ ಇಲ್ಲಿ ಓಡಿತು” ಎಂದರು ಶಿವರಾಜ್ ಕುಮಾರ್.

‘ಕಬ್ಜ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಕೇವಲ ಕೊನೆಯ ಸೀನ್​ ಒಂದರಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಾರೆ. ಆದರೆ ಆ ಬಗ್ಗೆ ಶಿವಣ್ಣನಿಗೆ ಬೇಸರವಿಲ್ಲ, ಬದಲಿಗೆ ಪ್ರಚಾರದ ಸಮಯದಲ್ಲಿ ಅತಿಥಿ ಪಾತ್ರಗಳನ್ನು ಹೈಲೆಟ್ ಮಾಡಿ ಅದನ್ನು ನೋಡಿ ಪ್ರೇಕ್ಷಕರು ಥಿಯೇಟರ್​ಗಳಿಗೆ ಬರುವಂತೆ ಮಾಡಿ, ಬಂದ ಪ್ರೇಕ್ಷಕರಿಗೆ ನಿರಾಸೆ ಮಾಡಿದ ಬಗ್ಗೆ ಅವರಿಗೆ ಬೇಸರವಿದೆ. ಅಂದಹಾಗೆ ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಇದೇ ಅಕ್ಟೋಬರ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ