ಬಾಲಿವುಡ್​ನಲ್ಲಿ ಹವಾ ಎಬ್ಬಿಸಲು ಶಿವರಾಜ್ ಕುಮಾರ್ ರೆಡಿ: ಏನಿದು ಹೊಸ ಸುದ್ದಿ?

Shiva Rajkumar: ಕನ್ನಡ, ತಮಿಳು, ತೆಲುಗು ದಾಟಿ ಈಗ ಉತ್ತರ ಭಾರತದಲ್ಲಿ ಅಬ್ಬರಿಸಲು ಶಿವರಾಜ್ ಕುಮಾರ್ ರೆಡಿಯಾದಂತಿದೆ. ಬಾಲಿವುಡ್ ಸಿನಿಮಾ ಒಂದಕ್ಕೆ ಸಂಬಂಧಿಸಿದಂತೆ ನಿರ್ದೇಶಕರೊಬ್ಬರು ಶಿವಣ್ಣನೊಟ್ಟಿಗೆ ಮಾತುಕತೆ ಮುಗಿಸಿದ್ದಾರಂತೆ.

ಬಾಲಿವುಡ್​ನಲ್ಲಿ ಹವಾ ಎಬ್ಬಿಸಲು ಶಿವರಾಜ್ ಕುಮಾರ್ ರೆಡಿ: ಏನಿದು ಹೊಸ ಸುದ್ದಿ?
ಶಿವರಾಜ್ ಕುಮಾರ್-ಸುದಿಪ್ತೋ ಸೇನ್
Follow us
ಮಂಜುನಾಥ ಸಿ.
|

Updated on: Aug 29, 2023 | 9:37 PM

ಜೈಲರ್‘ (Jailer) ಸಿನಿಮಾದಿಂದ ಶಿವರಾಜ್ ಕುಮಾರ್ (Shiva Rajkumar) ಹವಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎದ್ದಿದೆ. ಇಷ್ಟು ದಿನ ಕನ್ನಡಿಗರಿಗಷ್ಟೆ ಗೊತ್ತಿದ್ದ ಶಿವಣ್ಣನ ಗತ್ತು ‘ಜೈಲರ್’ ಸಿನಿಮಾದಿಂದ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೂ ಗೊತ್ತಾಗಿದೆ. ಕನ್ನಡದ ಬಹುಬೇಡಿಕೆಯ ಸ್ಟಾರ್ ನಟರಾಗಿದ್ದ ಶಿವರಾಜ್ ಕುಮಾರ್ ‘ಜೈಲರ್’ ಬಳಿಕ ಪರಭಾಷೆಗಳಲ್ಲಿಯೂ ಬೇಡಿಕೆಯ ನಟರಾಗಿಬಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಈಗಾಗಲೇ ಖದರ್ ತೋರಿಸಿರುವ ಶಿವಣ್ಣ, ಬಾಲಿವುಡ್​ನಲ್ಲೂ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿದೆ ಒಂದು ಫೋಟೊ.

ಶಿವರಾಜ್ ಕುಮಾರ್ ಅವರನ್ನು ‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ದೇಶಕ ಸುದಿಪ್ತೋ ಸೇನ್ ಭೇಟಿಯಾಗಿದ್ದಾರೆ. ಜೊತೆಗೆ ಸಿನಿಮಾ ವಿತರಕ ಹಾಗೂ ನಿರ್ಮಾಪಕ ಎನ್​ಎಸ್ ರಾಜಕುಮಾರ್ ಸಹ ಅವರ ಜೊತೆಗಿದ್ದಾರೆ. ಮೂವರು ಒಟ್ಟಿಗಿರುವ ಚಿತ್ರ ಇದೀಗ ವೈರಲ್ ಆಗಿದ್ದು, ಸಿನಿಮಾ ಸಂಬಂಧಿಸಿದಂತೆ ಮಾತುಕತೆಗೆ ಈ ಮೂವರು ಸೇರಿದ್ದಾರೆ ಎನ್ನಲಾಗುತ್ತಿದೆ.

ಹಿಂದಿ ಸಿನಿಮಾ ಒಂದರ ಮಾತುಕತೆ ನಡೆದಿದ್ದು, ಸುದಿಪ್ತೋ ನಿರ್ದೇಶನದ ಈ ಸಿನಿಮಾದ ಬಗ್ಗೆ ಶಿವರಾಜ್ ಕುಮಾರ್ ಸಹ ಆಸಕ್ತಿ ತೋರಿದ್ದು, ಕತೆ ಓಕೆ ಆಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವರಾಜ್ ಕುಮಾರ್, ಡೇಟ್ಸ್ ಹೊಂದಾಣಿಕೆ ಇನ್ನಿತರೆಗಳ ವಿಷಯಗಳ ಮುಂದಿನ ಚರ್ಚೆಯ ಬಳಿಕ ಸಿನಿಮಾ ಅಧಿಕೃತವಾಗಿ ಘೋಷಣೆ ಆಗುವ ಸಾಧ್ಯತೆ ಇದೆ. ಸಿನಿಮಾದ ಕತೆ, ಇತರೆ ಪಾತ್ರವರ್ಗ ಇನ್ನೂ ಕೆಲವು ವಿಷಯಗಳ ಬಗ್ಗೆ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.

ಇದನ್ನೂ ಓದಿ:ತಮ್ಮದೇ ನಟನೆಯ ಜೈಲರ್ ಸಿನಿಮಾ ನೋಡಿದ ಶಿವರಾಜ್ ಕುಮಾರ್ ಸಿನಿಮಾದ ಬಗ್ಗೆ ಹೇಳಿದ್ದು ಹೀಗೆ

ಶಿವರಾಜ್ ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ಘೋಸ್ಟ್’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ತಮಿಳಿನಲ್ಲಿ ಧನುಶ್ ಜೊತೆ ನಟಿಸಿರುವ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಲಿದೆ. ‘ಭೈರತಿ ರಣಗಲ್’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಅದರ ಬಳಿಕ ‘ಕಬ್ಜ 2’ ಸಿನಿಮಾದಲ್ಲಿ ಶಿವಣ್ಣ ನಟಿಸಬೇಕಿದೆ. ತೆಲುಗಿನ ನಿರ್ದೇಶಕರೊಬ್ಬರ ಕನ್ನಡ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ಕೆಲ ತಿಂಗಳ ಹಿಂದೆ ಅವರೇ ಹೇಳಿಕೊಂಡಿದ್ದಂತೆ ಸುಮಾರು 10 ಸಿನಿಮಾಗಳು ಅವರ ಕೈಯಲ್ಲಿವೆ. ಇವುಗಳ ನಡುವೆ ಬಾಲಿವುಡ್ ಸಿನಿಮಾಕ್ಕೆ ಡೇಟ್ಸ್ ಹೊಂದಿಸಿಕೊಳ್ಳುವುದು ಕಷ್ಟ ಸಾಧ್ಯವೇ ಸರಿ.

ತಮಿಳಿನ ‘ಜೈಲರ್’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಣ್ಣ ಅತಿಥಿ ಪಾತ್ರದಲ್ಲಷ್ಟೆ ಕಾಣಿಸಿಕೊಂಡಿದ್ದಾರೆ. ಆದರೆ ಆ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ನೋಡಿದ ತಮಿಳುನಾಡು, ಆಂಧ್ರ-ತೆಲಂಗಾಣದ ಪ್ರೇಕ್ಷಕರು ಶಿವರಾಜ್ ಕುಮಾರ್ ಸ್ವ್ಯಾಗ್​ಗೆ ಫಿದಾ ಆಗಿದ್ದಾರೆ. ‘ಜೈಲರ್’ ದೆಸೆಯಿಂದ ಪರಭಾಷೆಗಳಿಂದ ಶಿವಣ್ಣನಿಗೆ ಬರುತ್ತಿರುವ ಆಫರ್​ಗಳ ಸಂಖ್ಯೆ ದುಪ್ಪಟ್ಟಾಗಿದೆಯಂತೆ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ