Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾಖಾಹಾರಿ’ ಸಿನಿಮಾಗೆ ರಂಗಾಯಣ ರಘು ಹೀರೋ; ಯೋಗರಾಜ್ ಭಟ್ ರಿಲೀಸ್​ ಮಾಡಿದ ಟೈಟಲ್​ ಪೋಸ್ಟರ್​

ರಂಗಾಯಣ ರಘು ನಟನೆಯ ‘ಶಾಖಾಹಾರಿ’ ಚಿತ್ರದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ರಂಗಾಯಣ ರಘು ಜೊತೆ ಹಲವು ವರ್ಷಗಳಿಂದ ಒಡನಾಟ ಹೊಂದಿರುವ ಯೋಗರಾಜ್ ಭಟ್ ಅವರು ಈ ಸಿನಿಮಾದ ಶೀರ್ಷಿಕೆ ಪೋಸ್ಟರ್​ ರಿಲೀಸ್​ ಮಾಡಿ ಶುಭ ಹಾರೈಸಿದ್ದಾರೆ. ಇದರ ಚಿತ್ರೀಕರಣ ಮುಗಿದ್ದು, ಸದ್ಯಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

‘ಶಾಖಾಹಾರಿ’ ಸಿನಿಮಾಗೆ ರಂಗಾಯಣ ರಘು ಹೀರೋ; ಯೋಗರಾಜ್ ಭಟ್ ರಿಲೀಸ್​ ಮಾಡಿದ ಟೈಟಲ್​ ಪೋಸ್ಟರ್​
ರಂಗಾಯಣ ರಘು
Follow us
ಮದನ್​ ಕುಮಾರ್​
|

Updated on: Aug 30, 2023 | 12:01 PM

ನಟ ರಂಗಾಯಣ ರಘು (Rangayana Raghu) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವ ಅವರು ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಸಲ್ಲಿಸುತ್ತಾರೆ. ಕಾಮಿಡಿ ಆದರೂ ಸೈ, ಎಮೋಷನಲ್​ ದೃಶ್ಯವಾದರೂ ಸೈ ಎಂಬಂತಹ ಪ್ರತಿಭಾವಂತ ಕಲಾವಿದ ಅವರು. ಪೋಷಕ ಪಾತ್ರಗಳ ಮೂಲಕ ಭಾರಿ ಬೇಡಿಕೆ ಸೃಷ್ಟಿಕೊಂಡಿರುವ ಅವರು ಈಗ ‘ಶಾಖಾಹಾರಿ’ (Shakahari) ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್​ ಪೋಸ್ಟರ್​ ಅನಾವರಣ ಆಗಿದೆ. ಇದನ್ನು ಯೋಗರಾಜ್​ ಭಟ್​ (Yogaraj Bhat) ಅವರು ಬಿಡುಗಡೆ ಮಾಡಿದ್ದಾರೆ.

ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಅವರು ಜೊತೆಗೂಡಿ ‘ಕೀಳಂಬಿ ಮೀಡಿಯಾ ಲ್ಯಾಬ್’ ಸಂಸ್ಥೆಯ ಮೂಲಕ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ ‘ಶಾಖಾಹಾರಿ’ ಚಿತ್ರದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ರಂಗಾಯಣ ರಘು ಜೊತೆ ಹಲವು ವರ್ಷಗಳಿಂದ ಒಡನಾಟ ಹೊಂದಿರುವ ಯೋಗರಾಜ್ ಭಟ್ ಅವರು ಈ ಸಿನಿಮಾದ ಶೀರ್ಷಿಕೆ ಪೋಸ್ಟರ್​ ಅನ್ನು ರಿಲೀಸ್​ ಮಾಡಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್​ ಮಗ ಜೇಸನ್​ ಸಂಜಯ್​ ಈಗ ಡೈರೆಕ್ಟರ್​; ‘ಲೈಕಾ ಪ್ರೊಡಕ್ಷನ್ಸ್’ ಜೊತೆ ಕೈ ಜೋಡಿಸಿದ ಸ್ಟಾರ್​ ಕಿಡ್​

ಈ ಸಿನಿಮಾದ ಮೋಷನ್​ ಪೋಸ್ಟರ್​ ನೋಡಿ ಸಿನಿಪ್ರಿಯರಲ್ಲಿ ಕೌತುಕ ಮೂಡಿದೆ. ಮಲೆನಾಡಿನ ತೀರ್ಥಹಳ್ಳಿಯ ಒಂದು ಊರಿನಲ್ಲಿ ನಡೆಯುವ ಒಂದಷ್ಟು ನಿಗೂಢ ಘಟನೆಗಳ ಸುತ್ತಮುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಹೋಟೆಲ್​ನಲ್ಲಿ ಅಡುಗೆ ಮಾಡುವ ಭಟ್ಟನಾಗಿ ರಂಗಾಯಣ ರಘು ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ ಕೂಡ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ಪ್ರಯಕ್ತ ‘ತುಕ್ರ-ತನಿಯ’ ಪೋಸ್ಟರ್​ ಬಿಡುಗಡೆ; ಏನು ಇದರ ಅರ್ಥ?

ವಿಶ್ವಜಿತ್ ರಾವ್ ಅವರು ‘ಶಾಖಾಹಾರಿ’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ, ಶಶಾಂಕ್ ನಾರಾಯಣ ಅವರ ಸಂಕಲನ, ಮಯೂರ್ ಅಂಬೆಕಲ್ಲು ಅವರ ಸಂಗೀತದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಆಶಿಕ್ ಕುಸುಗೊಳ್ಳಿ ಅವರು ಗ್ರೇಡಿಂಗ್ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸದ್ಯಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಪೂರ್ತಿ ಮಲೆನಾಡಿನಲ್ಲೇ ಚಿತ್ರೀಕರಣ ಆಗಿರುವ ‘ಶಾಖಾಹಾರಿ’ ಸಿನಿಮಾದಲ್ಲಿ ಮಲೆನಾಡಿನ ಅನೇಕರು ಕೆಲಸ ಮಾಡಿದ್ದಾರೆ ಎಂಬುದು ವಿಶೇಷ.

ಇದನ್ನೂ ಓದಿ: ಚಿರಂಜೀವಿ ಜನ್ಮದಿನಕ್ಕೆ ಘೋಷಣೆ ಆಯ್ತು ಹೊಸ ಸಿನಿಮಾ; 157ನೇ ಚಿತ್ರಕ್ಕೆ ನಿರ್ದೇಶಕ ಯಾರು?

ರಂಗಾಯಣ ರಘು ಅವರ ಈ ಹಿಂದಿನ ಸಿನಿಮಾಗಳಿಂದ ‘ಶಾಖಾಹಾರಿ’ ಚಿತ್ರ ಸಖತ್​ ಡಿಫರೆಂಟ್​ ಆಗಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಂದೀಪ್ ಸುಂಕದ್ ಅವರು ಈ ಸಿನಿಮಾಗೆ ನಿರ್ದೇಶ ಮಾಡಿದ್ದಾರೆ. ಈಗಾಗಲೇ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅನುಭವ ಅವರಿಗೆ ಇದೆ. ಸಹ-ನಿರ್ದೇಶಕನಾಹಗಿ, ಬರಹಗಾರರಾಗಿ ಅವರು ಅನುಭವ ಪಡೆದಿದ್ದಾರೆ. ‘ಶಾಖಾಹಾರಿ’ ಚಿತ್ರಕ್ಕೆ ಸಂದೀಪ್ ಸುಂಕದ್ ಅವರೇ ಕಥೆ ಬರೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!