AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಳಪತಿ ವಿಜಯ್​ ಮಗ ಜೇಸನ್​ ಸಂಜಯ್​ ಈಗ ಡೈರೆಕ್ಟರ್​; ‘ಲೈಕಾ ಪ್ರೊಡಕ್ಷನ್ಸ್’ ಜೊತೆ ಕೈ ಜೋಡಿಸಿದ ಸ್ಟಾರ್​ ಕಿಡ್​

ಖ್ಯಾತ ನಟ ದಳಪತಿ ವಿಜಯ್​ ಅವರ ಮಗ ಜೇಸನ್​ ಸಂಜಯ್​ ಅವರು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಯಾವುದೇ ನಿರ್ದೇಶಕರು ತಮ್ಮ ಮೊದಲ ಚಿತ್ರ ಮಾಡುವಾಗ ‘ಲೈಕಾ ಪ್ರೊಡಕ್ಷನ್ಸ್’ ರೀತಿಯ ದೊಡ್ಡ ಸಂಸ್ಥೆಯ ಜೊತೆ ಕೈ ಜೋಡಿಸುವುದು ಎಂದರೆ ಸುಲಭದ ಮಾತಲ್ಲ. ಜೇಸನ್​ ಸಂಜಯ್​ ಅವರಿಗೆ ಅಂಥ ಒಂದು ಅವಕಾಶ ಸಿಕ್ಕಿದೆ.

ದಳಪತಿ ವಿಜಯ್​ ಮಗ ಜೇಸನ್​ ಸಂಜಯ್​ ಈಗ ಡೈರೆಕ್ಟರ್​; ‘ಲೈಕಾ ಪ್ರೊಡಕ್ಷನ್ಸ್’ ಜೊತೆ ಕೈ ಜೋಡಿಸಿದ ಸ್ಟಾರ್​ ಕಿಡ್​
ಸುಭಾಸ್ಕರನ್, ಜೇಸನ್​​ ಸಂಜಯ್​, ದಳಪತಿ ವಿಜಯ್​
ಮದನ್​ ಕುಮಾರ್​
|

Updated on:Aug 28, 2023 | 6:19 PM

Share

ನಟ ದಳಪತಿ ವಿಜಯ್​ (Thalapathy Vijay) ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಈಗ ಅವರ ಪುತ್ರ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹೀರೋಗಳ ಮಕ್ಕಳು ಕೂಡ ನಟರಾಗಬೇಕು ಎಂದು ಬಯಸುವುದೇ ಹೆಚ್ಚು. ಆದರೆ ದಳಪತಿ ವಿಜಯ್​ ಅವರ ಮಗ ಜೇಸನ್​ ಸಂಜಯ್​ (Jason Sanjay) ಬೇರೆ ಹಾದಿ ತುಳಿಯಲು ಮುಂದಾಗಿದ್ದಾರೆ. ಅವರು ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ವಿಶೇಷ ಏನೆಂದರೆ, ಜೇಸನ್​ ಸಂಜಯ್​ ಅವರ ಚೊಚ್ಚಲ ನಿರ್ದೇಶನದ ಸಿನಿಮಾಗೆ ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್​’ (Lyca Productions) ಸಂಸ್ಥೆಯು ಬಂಡವಾಳ ಹೂಡಲಿದೆ. ಈ ಸುದ್ದಿ ಕೇಳಿ ದಳಪತಿ ವಿಜಯ್​ ಫ್ಯಾನ್ಸ್​ ಖುಷಿ ಆಗಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಈ ಹೊಸ ಸುದ್ದಿಯನ್ನು ‘ಲೈಕಾ ಪ್ರೊಡಕ್ಷನ್ಸ್​’ ಹಂಚಿಕೊಂಡಿದೆ.

ಕಾಲಿವುಡ್​ನಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆಗೆ ಸಲ್ಲುತ್ತದೆ. ಇತ್ತೀಚೆಗಷ್ಟೇ ಈ ಬ್ಯಾನರ್​ನಿಂದ ನಿಖಿಲ್​ ಕುಮಾರಸ್ವಾಮಿ ಅವರ ಹೊಸ ಸಿನಿಮಾ ಸೆಟ್ಟೇರಿತು. ಈಗ ಜೇಸನ್​ ಸಂಜಯ್​ ಅವರ ಮೊದಲ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಬರೀ ಸ್ಟಾರ್​ ಕಲಾವಿದರಿಗೆ ಮಾತ್ರವಲ್ಲದೇ ಹೊಸಬರಿಗೂ ಈ ಸಂಸ್ಥೆಯ ಮೂಲಕ ನಿರ್ಮಾಪಕ ಸುಭಾಸ್ಕರನ್​ ಅವರು ಅವಕಾಶ ನೀಡುತ್ತಿದ್ದಾರೆ. ಜೇಸನ್​ ಸಂಜಯ್​ ಜೊತೆ ಕೈ ಜೋಡಿಸಿರುವುದಕ್ಕೆ ಸುಭಾಸ್ಕರನ್​ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಜೇಸನ್​ ಸಂಜಯ್​ ನಿರ್ದೇಶನ ಮಾಡಲಿರುವ ಮೊದಲ ಪ್ರಾಜೆಕ್ಟ್​ ಬಗ್ಗೆ ಸುಭಾಸ್ಕರನ್​ ಮಾತನಾಡಿದ್ದಾರೆ. ‘ಯಾವಾಗಲೂ ಯುವ ಪ್ರತಿಭೆಗಳಿಗೆ ಲೈಕಾ ಪ್ರೊಡಕ್ಷನ್ ಸಂಸ್ಥೆಯು ವೇದಿಕೆ ನಿರ್ಮಿಸಿಕೊಡುತ್ತಿದೆ. ನಮ್ಮ ಮುಂದಿನ ಸಿನಿಮಾ ಜೇಸನ್ ಸಂಜಯ್ ಜೊತೆ ಎಂಬುದನ್ನು ತಿಳಿಸಲು ಖುಷಿ ಆಗುತ್ತಿದೆ. ಜೇಸನ್ ಅವರು ಲಂಡನ್‌ನಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಟೊರಾಂಟೋ ಫಿಲ್ಮ್​ ಸ್ಕೂಲ್​ನಲ್ಲಿ ಸಿನಿಮಾ ಮೇಕಿಂಗ್​ ಬಗ್ಗೆ ಡಿಪ್ಲೊಮಾ ಪಡೆದಿದ್ದಾರೆ. ಅವರು ತಮ್ಮ ಸ್ಕ್ರಿಪ್ಟ್​ ವಿವರಿಸಿದಾಗ ನಮಗೆ ಒಂದು ಸಿನಿಮೀಯ ಅನುಭವ ನೀಡಿತು. ಆದ್ದರಿಂದ ನಾವು ನಿರ್ಮಾಣ ಮಾಡಲು ಮುಂದಾದೆವು. ನಿರ್ದೇಶಕರಿಗೆ ಇರಬೇಕಾದ ಎಲ್ಲ ಮುಖ್ಯ ಗುಣಗಳು ಜೇಸನ್​ ಸಂಜಯ್​ ಅವರಿಗೆ ಇದೆ’ ಎಂದು ಸುಭಾಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಗಾಗಿ ಬೆಂಗಳೂರಿಗೆ ಬಂದ ಲೈಕಾ ಕುಟುಂಬ, ಅದ್ಧೂರಿ ಮುಹೂರ್ತ

ಮೊದಲ ಚಿತ್ರ ಮಾಡುವಾಗ ‘ಲೈಕಾ ಪ್ರೊಡಕ್ಷನ್ಸ್’ ರೀತಿಯ ದೊಡ್ಡ ಸಂಸ್ಥೆಯ ಜೊತೆ ಕೈ ಜೋಡಿಸುವುದು ಎಂದರೆ ಸುಲಭದ ಮಾತಲ್ಲ. ಜೇಸನ್​ ಸಂಜಯ್​ ಅವರಿಗೆ ಅಂಥ ಒಂದು ಅವಕಾಶ ಸಿಕ್ಕಿದೆ. ‘ಈ ಅವಕಾಶ ಪಡೆದಿರುವುದು ಗೌರವದ ವಿಷಯ. ಯುವ ಪ್ರತಿಭೆಗಳಿಗೆ ಈ ಸಂಸ್ಥೆಯಿಂದ ಪ್ರೋತ್ಸಾಹ ಸಿಗುತ್ತಿದೆ. ಈ ಚಾನ್ಸ್​ ನೀಡಿದಕ್ಕೆ ಸುಭಾಸ್ಕರನ್ ಅವರಿಗೆ ನನ್ನ ಧನ್ಯವಾದಗಳು. ಡೈರೆಕ್ಟರ್​ ಆಗಬೇಕು ಎಂಬ ನನ್ನ ಕನಸುಗಳನ್ನು ನನಸು ಮಾಡಲು ಬೆಂಬಲ ನೀಡಿದ ತಮಿಳ್​ ಕುಮಾರನ್ ಅವರಿಗೂ ಧನ್ಯವಾದ ತಿಳಿಸುತ್ತೇನೆ’ ಎಂದು ಜೇಸನ್​ ಸಂಜಯ್​ ಹೇಳಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್​ ರಾಜಕೀಯದ ಎಂಟ್ರಿಗೆ ರಜನಿಕಾಂತ್​, ಅಜಿತ್​ ಫ್ಯಾನ್ಸ್​ ಬೆಂಬಲ? ಪಾದಯಾತ್ರೆಗೆ ನಡೆದಿದೆ ಪ್ಲ್ಯಾನ್​

ಈ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಹೊಸ ಪ್ರತಿಭೆಗಳು ನಟಿಸುವ ಸಾಧ್ಯತೆ ಇದೆ. ತಾಂತ್ರಿಕ ಬಳಗದ ಬಗ್ಗೆಯೂ ಮಾಹಿತಿ ಹೊರಬರುವುದು ಬಾಕಿ ಇದೆ. ದಳಪತಿ ವಿಜಯ್​ ಮತ್ತು ಜೇಸನ್​ ಸಂಜಯ್​ ಅವರು ಜೊತೆಯಾಗಿ ಸಿನಿಮಾ ಮಾಡಲಿ ಎಂದು ಕೂಡ ಅಭಿಮಾನಿಗಳು ಬಯಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:01 pm, Mon, 28 August 23

Follow Us
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್