Thalapathy Vijay: ದಳಪತಿ ವಿಜಯ್​ ರಾಜಕೀಯದ ಎಂಟ್ರಿಗೆ ರಜನಿಕಾಂತ್​, ಅಜಿತ್​ ಫ್ಯಾನ್ಸ್​ ಬೆಂಬಲ? ಪಾದಯಾತ್ರೆಗೆ ನಡೆದಿದೆ ಪ್ಲ್ಯಾನ್​

Thalapathy Vijay Padayatra: ದಳಪತಿ ವಿಜಯ್​ ಅವರಿಗೆ ಈ ಪರಿ ಬೆಂಬಲ ಸಿಕ್ಕಿದ್ದು ನಿಜವೇ ಹೌದಾದರೆ ಅವರ ರಾಜಕೀಯದ ಎಂಟ್ರಿ ಸಿಕ್ಕಾಪಟ್ಟೆ ಸದ್ದು ಮಾಡಲಿದೆ. ಪಾದಯಾತ್ರೆಗೆ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ.

Thalapathy Vijay: ದಳಪತಿ ವಿಜಯ್​ ರಾಜಕೀಯದ ಎಂಟ್ರಿಗೆ ರಜನಿಕಾಂತ್​, ಅಜಿತ್​ ಫ್ಯಾನ್ಸ್​ ಬೆಂಬಲ? ಪಾದಯಾತ್ರೆಗೆ ನಡೆದಿದೆ ಪ್ಲ್ಯಾನ್​
ದಳಪತಿ ವಿಜಯ್​
Follow us
|

Updated on: Jul 12, 2023 | 12:51 PM

ಕಾಲಿವುಡ್​ ನಟ ದಳಪತಿ ವಿಜಯ್​ (Thalapathy Vijay) ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಸುದ್ದಿ ದಿನದಿಂದ ದಿನಕ್ಕೆ ಬಲವಾಗಿ ಹಬ್ಬುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಅವರು ಹಲವು ಸಭೆ ಮಾಡುತ್ತಿದ್ದಾರೆ. ಈಗ ಅವರು ಪಾದಯಾತ್ರೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್​ ಅವರಿಗೆ ಅಭಿಮಾನಿಗಳಿಂದ (Thalapathy Vijay Fans) ಭರ್ಜರಿ ಬೆಂಬಲ ಸಿಗುತ್ತಿದೆ. ಇನ್ನೊಂದು ಮುಖ್ಯ ವಿಚಾರ ಏನೆಂದರೆ, ರಜನಿಕಾಂತ್​ ಮತ್ತು ಅಜಿತ್​ ಕುಮಾರ್​ ಫ್ಯಾನ್ಸ್​ ಕೂಡ ವಿಜಯ್​ಗೆ ಜೈಕಾರ ಹಾಕಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ದಳಪತಿ ವಿಜಯ್​ ಅವರಿಗೆ ಈ ಪರಿ ಬೆಂಬಲ ಸಿಕ್ಕಿದ್ದು ನಿಜವೇ ಹೌದಾದರೆ ಅವರ ರಾಜಕೀಯದ ಎಂಟ್ರಿ (Thalapathy Vijay Politics Entry) ಸಿಕ್ಕಾಪಟ್ಟೆ ಸದ್ದು ಮಾಡಲಿದೆ.

ತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಬಹಳ ಹತ್ತಿರದ ನಂಟು ಇದೆ. ಸಿನಿಮಾರಂಗದಲ್ಲಿ ಮಿಂಚಿದ ಸೆಲೆಬ್ರಿಟಿಗಳು ನಂತರ ಮುಖ್ಯಮಂತ್ರಿಯಾದ ಉದಾಹರಣೆ ಕೂಡ ಇದೆ. ಹಾಗಾಗಿ ದಳಪತಿ ವಿಜಯ್​ ಅವರ ರಾಜಕೀಯದ ಪ್ರವೇಶಕ್ಕೆ ಕಾತರ ಸೃಷ್ಟಿಯಾಗಿದೆ. 2024ರ ಚುನಾವಣೆಗೂ ಮುನ್ನವೇ ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Thalapathy Vijay: ಚಿತ್ರರಂಗಕ್ಕೆ ವಿದಾಯ ಹೇಳಲಿರುವ ದಳಪತಿ ವಿಜಯ್​? ರಾಜಕೀಯದ ಎಂಟ್ರಿಗೆ 3 ವರ್ಷ ತಯಾರಿ

ದಳಪತಿ ವಿಜಯ್​ ನಟನೆಯ ‘ಲಿಯೋ’ ಸಿನಿಮಾದ ಮೇಲೆ ತುಂಬ ನಿರೀಕ್ಷೆ ಇದೆ. ಲೋಕೇಶ್​ ಕನಗರಾಜ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನವೇ ತಮಿಳುನಾಡಿನಾದ್ಯಂತ ವಿಜಯ್​ ಅವರು ಪಾದಯಾತ್ರೆ ಮಾಡಲಿದ್ದಾರೆ. ಆ ಮೂಲಕ ಅವರು ರಾಜ್ಯದ ಪರಿಸ್ಥಿತಿ ಮತ್ತು ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಾದಯಾತ್ರೆ ಬಗ್ಗೆ ಇನ್ನೂ ಅಧಿಕೃತವಾಗಿ ಯಾರೂ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: Thalapathy Vijay: ಡ್ರಗ್ಸ್​ ಸೇವನೆಗೆ ಪ್ರಚೋದನೆ ನೀಡಿದ ಆರೋಪ: ನಟ ದಳಪತಿ ವಿಜಯ್​ ಮೇಲೆ ಕೇಸ್​ ದಾಖಲು

ರಾಜಕೀಯದಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ದಳಪತಿ ವಿಜಯ್​ ಅವರು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ ಎಂದು ವರದಿ ಆಗಿದೆ. ‘ಲಿಯೋ’ ಸಿನಿಮಾದ ಬಳಿಕ ಅವರು ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾದ ಶೂಟಿಂಗ್​ ನವೆಂಬರ್​ನಲ್ಲಿ ಆರಂಭ ಆಗಲಿದೆ. ಆ ಬಳಿಕ ಅವರು ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ ಎನ್ನಲಾಗಿದೆ. ಇದು ಕೆಲವು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರುವಾಗಲೇ ವಿಜಯ್​ ಅವರು ರಾಜಕೀಯದತ್ತ ಮುಖ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.