Sign In

By signing in or creating an account, you agree with Associated Broadcasting Company's Terms & Conditions and Privacy Policy.

Thalapathy Vijay: ಡ್ರಗ್ಸ್​ ಸೇವನೆಗೆ ಪ್ರಚೋದನೆ ನೀಡಿದ ಆರೋಪ: ನಟ ದಳಪತಿ ವಿಜಯ್​ ಮೇಲೆ ಕೇಸ್​ ದಾಖಲು

Naa Ready: ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಟ ದಳಪತಿ ವಿಜಯ್​ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

Thalapathy Vijay: ಡ್ರಗ್ಸ್​ ಸೇವನೆಗೆ ಪ್ರಚೋದನೆ ನೀಡಿದ ಆರೋಪ: ನಟ ದಳಪತಿ ವಿಜಯ್​ ಮೇಲೆ ಕೇಸ್​ ದಾಖಲು
ದಳಪತಿ ವಿಜಯ್​
Follow us
ಮದನ್​ ಕುಮಾರ್​
|

Updated on: Jun 26, 2023 | 6:43 PM

ಕಾಲಿವುಡ್​ ನಟ ದಳಪತಿ ವಿಜಯ್​ ಅವರು ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಮಾದಕ ವಸ್ತು ಸೇವನೆಗೆ (Drug Abuse) ದಳಪತಿ ವಿಜಯ್​ ಅವರು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಕೇಸ್​ ದಾಖಲಾಗಿದೆ. ಚಿತ್ರರಂಗಕ್ಕೂ ಡ್ರಗ್ಸ್​ ದಂಧೆಗೂ ನಂಟು ಇದೆ ಎಂಬುದು ಆಗಾಗ ಸಾಬೀತಾಗುತ್ತಾ ಇರುತ್ತದೆ. ಹಾಗಂತ ದಳಪತಿ ವಿಜಯ್ (Thalapathy Vijay)​ ಅವರು ನೇರವಾಗಿ ಡ್ರಗ್ಸ್​ ಜಾಲದ ಜೊತೆ ಸಂಪರ್ಕ ಹೊಂದಿಲ್ಲ. ಈ ಕಿರಿಕ್​ ಹುಟ್ಟಿಕೊಳ್ಳಲು ಕಾರಣ ಆಗಿರುವುದು ‘ಲಿಯೋ’ (Leo Movie) ಸಿನಿಮಾದ ಸಾಂಗ್​! ಹೌದು, ಈ ಚಿತ್ರದ ‘ನಾ ರೆಡಿ..’ ಹಾಡು ಇತ್ತೀಚೆಗೆ ಬಿಡುಗಡೆ ಆಗಿ ಒಳ್ಳೆಯ ರೆಸ್ಪಾನ್ಸ್​ ಪಡೆದುಕೊಂಡಿದ್ದು ಹೌದಾದರೂ ಅದರ ಬೆನ್ನಲ್ಲೇ ವಿವಾದ ಕೂಡ ಶುರುವಾಗಿದೆ.

‘ಲಿಯೋ’ ಸಿನಿಮಾದ ‘ನಾ ರೆಡಿ..’ ಗೀತೆಯು ಮಾದಕ ದ್ರವ್ಯ ಸೇವನೆ ಹಾಗೂ ರೌಡಿಸಂ ಅನ್ನು ಪ್ರಚೋದಿಸುತ್ತದೆ ಎಂದು ಆರ್​ಟಿಐ ಸೆಲ್ವನ್​ ಎಂಬುವವರು ದೂರು ನೀಡಿದ್ದಾರೆ. ಪರಿಣಾಮವಾಗಿ ದಳಪತಿ ವಿಜಯ್​ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈ ಸಿನಿಮಾಗೆ ಲೋಕೇಶ್​ ಕನಗರಾಜ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಂಜಯ್​ ದತ್​, ತ್ರಿಷಾ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಅಭಿನಯಿಸುತ್ತಿದ್ದಾರೆ.

ಲೋಕೇಶ್​ ಕನಗರಾಜ್​ ಅವರು ಕಾಲಿವುಡ್​ನಲ್ಲಿ ತಮ್ಮದೇ ಸಿನಿಮಾಗಳ ಒಂದು ಯೂನಿವರ್ಸ್​ ಸೃಷ್ಟಿ ಮಾಡಿದ್ದಾರೆ. ಅವರು ನಿರ್ದೇಶನ ಮಾಡುವ ಒಂದು ಸಿನಿಮಾದ ಪಾತ್ರಗಳು ಇನ್ನೊಂದು ಸಿನಿಮಾದ ಪಾತ್ರಗಳ ಜೊತೆ ಲಿಂಕ್​ ಹೊಂದಿರುತ್ತವೆ. ‘ಲೋಕೇಶ್​ ಕನಗರಾಜ್​ ಸಿನಿಮ್ಯಾಟಿಕ್​ ಯೂನಿವರ್ಸ್​’ ಎಂದು ಅದನ್ನು ಕರೆಯಲಾಗುತ್ತದೆ. ಈ ಹಿಂದೆ ಅವರು ನಿರ್ದೇಶಿಸಿದ ‘ಖೈದಿ’ ಹಾಗೂ ‘ವಿಕ್ರಮ್​’ ಸಿನಿಮಾಗಳ ಕಥೆಯಲ್ಲಿ ಡ್ರಗ್ಸ್​ ಉಲ್ಲೇಖ ಇತ್ತು. ಈಗ ‘ಲಿಯೋ’ ಸಿನಿಮಾದಲ್ಲೂ ಅದರ ಪ್ರಸ್ತಾಪ ಆಗಲಿದೆ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ.

ಇದನ್ನೂ ಓದಿ: Lokesh Kanagaraj: ‘ಲಿಯೋ’ ನಿರ್ದೇಶಕನಿಗೆ ದಳಪತಿ ವಿಜಯ್​ ಅಭಿಮಾನಿಗಳಿಂದ ಬಹಿರಂಗ ಪತ್ರ; ಏನಿದೆ ಇದರಲ್ಲಿ?

ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಟ ದಳಪತಿ ವಿಜಯ್​ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೋಮವಾರ (ಜೂನ್​ 26) ಬೆಳಗ್ಗೆ 10 ಗಂಟೆ ಸುಮಾರಿಗೆ ಆರ್​ಟಿಐ ಸೆಲ್ವನ್​ ಅವರು ತಮ್ಮ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ಪರಿಣಾಮ ಏನಾಗಬಹುದು ಎಂಬ ಕೌತುಕ ಮೂಡಿದೆ. ಚೆನ್ನೈ ಪೊಲೀಸರು ಈಗಾಗಲೇ ಡ್ರಗ್ಸ್​ ಸೇವನೆ ತಡೆಗೆ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಅನೇಕ ಸ್ಟಾರ್​ ನಟರು ಕೂಡ ಸಾಥ್​ ನೀಡಿದ್ದಾರೆ. ಈ ಸಂದರ್ಭದಲ್ಲಿ ದಳಪತಿ ವಿಜಯ್​ ವಿರುದ್ಧ ಕೇಸ್​ ದಾಖಲಾಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್