ರಾಜಕೀಯಕ್ಕೆ ದಳಪತಿ ವಿಜಯ್ ಎಂಟ್ರಿ ಖಚಿತ? 234 ವಿಧಾನಸಭಾ ಕ್ಷೇತ್ರಗಳ ಗುರಿ ಇಟ್ಟುಕೊಂಡ ನಟ

ಇತ್ತೀಚೆಗೆ ವಿಜಯ್ ರಾಜಕೀಯಕ್ಕೆ ಬರುತ್ತಾರೆ, 2026ರ ವಿಧಾನಸಭಾ ಚುನಾವಣೆಗೆ ಅವರು ಸಜ್ಜಾಗುತ್ತಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿವೆ. ಇದಕ್ಕೆ ಪೂರಕವಾಗುವಂತಹ ಘಟನೆಗಳು ಕೂಡ ನಡೆಯುತ್ತಿವೆ.

ರಾಜಕೀಯಕ್ಕೆ ದಳಪತಿ ವಿಜಯ್ ಎಂಟ್ರಿ ಖಚಿತ? 234 ವಿಧಾನಸಭಾ ಕ್ಷೇತ್ರಗಳ ಗುರಿ ಇಟ್ಟುಕೊಂಡ ನಟ
ವಿಜಯ್
Follow us
ರಾಜೇಶ್ ದುಗ್ಗುಮನೆ
|

Updated on:Jun 08, 2023 | 12:00 PM

ಚಿತ್ರರಂಗಕ್ಕೂ ರಾಜಕೀಯಕ್ಕೂ ಒಳ್ಳೆಯ ನಂಟಿದೆ. ಚಿತ್ರರಂಗದಲ್ಲಿ ಮಿಂಚಿದ ಸಾಕಷ್ಟು ಮಂದಿ ರಾಜಕೀಯಕ್ಕೆ ಬರುತ್ತಾರೆ. ಕರ್ನಾಟಕಕ್ಕಿಂತಲೂ ಆಂಧ್ರ, ತಮಿಳು ನಾಡು ಭಾಗದಲ್ಲಿ ಮೊದಲಿನಿಂದಲೂ ಈ ಟ್ರೇಂಡ್ ಜೋರಾಗಿದೆ. ಈಗ ದಳಪತಿ ವಿಜಯ್ (Thalapathy Vijay) ಅವರ ಸರದಿ. 2026ರಲ್ಲಿ ನಡೆಯುವ ತಮಿಳುನಾಡು ರಾಜಕೀಯಕ್ಕೆ (Tamil Nadu Politics)  ದಳಪತಿ ವಿಜಯ್ ಎಂಟ್ರಿ ನೀಡುತ್ತಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅಂದಹಾಗೆ, ಈ ಸುದ್ದಿ ಹುಟ್ಟಿಕೊಳ್ಳೋಕೆ ಕಾರಣ ವಿಜಯ್ ಅವರ ನಡೆ.

ಇತ್ತೀಚೆಗೆ ವಿಜಯ್ ರಾಜಕೀಯಕ್ಕೆ ಬರುತ್ತಾರೆ, 2026ರ ವಿಧಾನಸಭಾ ಚುನಾವಣೆಗೆ ಅವರು ಸಜ್ಜಾಗುತ್ತಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿವೆ. ಇದಕ್ಕೆ ಪೂರಕವಾಗುವಂತಹ ಘಟನೆಗಳು ಕೂಡ ನಡೆಯುತ್ತಿವೆ. ಇತ್ತೀಚಿಗೆ ವಿಜಯ್ ಅವರು ಸಿನಿಮಾ ಕೆಲಸಗಳ ಜೊತೆ ಹೆಚ್ಚೆಚ್ಚು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕರ ಜೊತೆಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಿಂತಲೂ ಮುಖ್ಯವಾದ ಕೆಲಸ ಒಂದನ್ನು ಅವರು ಮಾಡುತ್ತಿದ್ದಾರೆ.

10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಜೂನ್ 17 ರಂದು ಸನ್ಮಾನಿಸಲಾಗುತ್ತಿದೆ. ಚೆನ್ನೈ ನೀಲಗಿರಿಯ ಆರ್‌ಕೆ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದ ವ್ಯವಸ್ಥೆ ಮಾಡಲಾಗುತ್ತಿದೆ. ಇಷ್ಟೇ ಆಗಿದ್ದರೆ ರಾಜಕೀಯದ ವಾಸನೆ ಬರುತ್ತಿರಲಿಲ್ಲ. ಜಿಲ್ಲೆ ಹಾಗೂ ತಾಲೂಕು ಎಂದು ಆಯ್ಕೆ ಮಾಡದೇ ದಳಪತಿ ವಿಜಯ್ ಅವರು 234 ವಿಧಾನಸಭಾ ಕ್ಷೇತ್ರವನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಪ್ರತಿ ಕ್ಷೇತ್ರದ ಟಾಪ್ ಮೂವರಿಗೆ ಸನ್ಮಾನ ಮಾಡಲಾಗುತ್ತಿದೆ. ‘ವಿಜಯ್ ಮಕ್ಕಳ್ ಇಯಕ್ಕಮ್’ ಮೂಲಕ ಈ ಕಾರ್ಯಕ್ರಮ ನಡೆಯುತ್ತಿದೆ.

ಪ್ರತಿ ಕ್ಷೇತ್ರದ ಟಾಪ್ 3 ವಿದ್ಯಾರ್ಥಿಗಳಿಗೆ ಬಹುಮಾನದ ಜೊತೆಗೆ ನಗದು ಪ್ರೋತ್ಸಾಹ ಧನವನ್ನೂ ನೀಡುವುದಾಗಿ ಈಗಾಗಲೇ ಘೋಷಿಸಲಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿ ವಿಜಯ್ ಶೀಘ್ರದಲ್ಲೇ ರಾಜಕೀಯ ಅಖಾಡಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕಾಗಿಯೇ ಕ್ಷೇತ್ರ ಎಂಬ ಪದವನ್ನು ಪ್ರಸ್ತಾಪಿಸಲಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ವಾರಿಸು’ ಯಶಸ್ಸಿನ ಬಳಿಕ 50 ಕೋಟಿ ರೂಪಾಯಿ ಸಂಭಾವನೆ ಹೆಚ್ಚಿಸಿಕೊಂಡ ದಳಪತಿ ವಿಜಯ್

ಸದ್ಯ ‘ಲಿಯೋ’ ಸಿನಿಮಾ ಕೆಲಸಗಳಲ್ಲಿ ದಳಪತಿ ವಿಜಯ್ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಲೋಕೇಶ್ ಅವರು ತಮ್ಮದೇ ಯೂನಿವರ್ಸ್​ ಸೃಷ್ಟಿಸಿಕೊಂಡಿದ್ದಾರೆ. ‘ಕೈದಿ’, ‘ವಿಕ್ರಮ್’ ಸಿನಿಮಾಗಳು ಇದರ ಅಡಿಯಲ್ಲಿ ಮೂಡಿ ಬಂದಿದೆ. ಈ ಚಿತ್ರಗಳಿಗೂ ‘ಲಿಯೋ’ಗೂ ಸಂಬಂಧ ಇದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:54 am, Thu, 8 June 23