Adipurush Movie: ‘ಆದಿಪುರುಷ್’ ನೋಡ ಬಯಸುವವರಿಗೆ ಬಂಪರ್ ಆಫರ್; ಸಿಗ್ತಿದೆ 10 ಸಾವಿರ ಉಚಿತ ಟಿಕೆಟ್
Adipurush Free Tickets: ‘ದಿ ಕಾಶ್ಮೀರ್ ಫೈಲ್ಸ್’ ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅಭಿಷೇಕ್ ಅಗರ್ವಾಲ್ ಅವರು ಈ ಚಿತ್ರದ 10 ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.
‘ಆದಿಪುರುಷ್’ ಸಿನಿಮಾ (Adipurush Movie) ರಿಲೀಸ್ಗೆ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಜೂನ್ 16ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರ 3ಡಿಯಲ್ಲೂ ಲಭ್ಯ ಇದೆ ಅನ್ನೋದು ವಿಶೇಷ. ಈ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿಯಲ್ಲಿ ಸ್ವೀಕರಿಸಲಿದ್ದಾರೆ? ಮೊದಲ ದಿನ ಸಿನಿಮಾ ಎಷ್ಟು ಗಳಿಕೆ ಮಾಡಲಿದೆ? ಒಟ್ಟಾರೆ ಕಲೆಕ್ಷನ್ ಎಷ್ಟಾಗಬಹುದು? ನಿರ್ಮಾಪಕರು ಲಾಭ ಕಾಣಲಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತಿವೆ. ಈ ಮಧ್ಯೆ ಸಿನಿಮಾ ಬಗ್ಗೆ ಹೊಸಹೊಸ ಅಪ್ಡೇಟ್ ಕೇಳಿ ಬರುತ್ತಿದೆ. ಈಗ ಪ್ರಭಾಸ್ (Prabhas) ನಟನೆಯ ಈ ಚಿತ್ರದ 10 ಸಾವಿರ ಟಿಕೆಟ್ ಉಚಿತವಾಗಿ ಹಂಚಲು ನಿರ್ಮಾಪಕರೊಬ್ಬರು ಮುಂದಾಗಿದ್ದಾರೆ.
‘ಆದಿಪುರುಷ್’ ಸಿನಿಮಾ ಟೀಕೆ ಹಾಗೂ ಮೆಚ್ಚುಗೆ ಎರಡನ್ನೂ ಗಳಿಸುತ್ತಿದೆ. ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಓಂ ರಾವತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟೀಸರ್ ಮೂಲಕ ಟೀಕೆಗೆ ಒಳಗಾಗಿದ್ದ ಈ ಸಿನಿಮಾ ಸದ್ಯ ಮೆಚ್ಚುಗೆ ಪಡಯುತ್ತಿದೆ. ಈ ಮಧ್ಯೆ ‘ಕಾರ್ತಿಕೇಯ 2’, ‘ದಿ ಕಾಶ್ಮೀರ್ ಫೈಲ್ಸ್’ ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅಭಿಷೇಕ್ ಅಗರ್ವಾಲ್ ಅವರು ಈ ಚಿತ್ರದ 10 ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.
ರಾಮನ ಬಗ್ಗೆ ಅಭಿಷೇಕ್ಗೆ ಅಪಾರವಾದ ಭಕ್ತಿ ಇದೆ. ಈಗ ರಾಮಾಯಣ ಆಧರಿಸಿ ಸಿನಿಮಾ ಬರುತ್ತಿದ್ದು, ಹೀಗಾಗಿ ಉಚಿತ ಟಿಕೆಟ್ ಹಂಚುವ ನಿರ್ಧಾರಕ್ಕೆ ಬಂದಿದ್ದಾರೆ. ‘ಆದಿಪುರುಷ್ ಜೀವಮಾನದಲ್ಲಿ ಒಮ್ಮೆ ನೋಡಲೇಬೇಕಾದ ಸಿನಿಮಾ. ಇದನ್ನು ಎಲ್ಲರೂ ಸಂಭ್ರಮಿಸಲೇಬೇಕು. ಭಗವಾನ್ ಶ್ರೀರಾಮನ ಮೇಲಿನ ಅಪಾರ ಭಕ್ತಿಯಿಂದ ತೆಲಂಗಾಣದಾದ್ಯಂತ ಇರುವ ಸರ್ಕಾರಿ ಶಾಲೆಗಳು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ 10,000+ ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇನೆ. ಟಿಕೆಟ್‌ಗಳನ್ನು ಪಡೆಯಲು ನಿಮ್ಮ ವಿವರಗಳೊಂದಿಗೆ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಿ. ಜೈ ಶ್ರೀರಾಮ್ ಘೋಷಣೆಗಳು ಎಲ್ಲಾ ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಲಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
#Adipurush is a once in a lifetime movie which needs to be celebrated by one and all.
Out of my devotion for Lord Shree Ram, I have decided to give 10,000+ tickets to the Government schools, Orphanages & Old Age Homes across Telangana for free.
Fill the Google form with your… pic.twitter.com/1PbqpW9Eh6
— Abhishek Agarwal ?? (@AbhishekOfficl) June 7, 2023
ಇದನ್ನೂ ಓದಿ: Adipurush: ‘ಆದಿಪುರುಷ್’ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರದಲ್ಲಿ ಹನುಮನಿಗೆ ಒಂದು ಸೀಟು ಮೀಸಲು; ಏನಿದು ನಂಬಿಕೆ?
ಈ ಟ್ವೀಟ್ನಲ್ಲಿ ಗೂಗಲ್ ಫಾರ್ಮ್ನ ಲಿಂಕ್ ಶೇರ್ ಮಾಡಿಕೊಂಡಿದ್ದಾರೆ ಅಭಿಷೇಕ್ ಅಗರ್ವಾಲ್. ಸದ್ಯ ಅಭಿಷೇಕ್ ಅಗರ್ವಾಲ್ ಅವರು ‘ದಿ ಇಂಡಿಯನ್ ಹೌಸ್’ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿ ಇದ್ದಾರೆ. ವೀರ ಸಾವರ್ಕರ್ ಕುರಿತ ಸಿನಿಮಾ ಇದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ