‘ವಾರಿಸು’ ಯಶಸ್ಸಿನ ಬಳಿಕ 50 ಕೋಟಿ ರೂಪಾಯಿ ಸಂಭಾವನೆ ಹೆಚ್ಚಿಸಿಕೊಂಡ ದಳಪತಿ ವಿಜಯ್

Thalapathy Vijay: ದಳಪತಿ ವಿಜಯ್ ಅವರ 68ನೇ ಸಿನಿಮಾಗೆ ವೆಂಕಟ್ ಪ್ರಭು ಅವರು ನಿರ್ದೇಶನ ಮಾಡುತ್ತಿದ್ದು, ಎಜಿಎಸ್​ ಎಂಟರ್​ಟೇನ್​ಮೆಂಟ್ ನಿರ್ಮಿಸುತ್ತಿದೆ. ಈ ಸಿನಿಮಾಗಾಗಿ ವಿಜಯ್ ಅವರು ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ.

‘ವಾರಿಸು’ ಯಶಸ್ಸಿನ ಬಳಿಕ 50 ಕೋಟಿ ರೂಪಾಯಿ ಸಂಭಾವನೆ ಹೆಚ್ಚಿಸಿಕೊಂಡ ದಳಪತಿ ವಿಜಯ್
ವಿಜಯ್
Follow us
ರಾಜೇಶ್ ದುಗ್ಗುಮನೆ
|

Updated on: May 18, 2023 | 10:56 AM

ದಳಪತಿ ವಿಜಯ್ ಅವರು ಸಿನಿಮಾ ಮಾಡುವುದರಲ್ಲಿ ಸಖತ್ ಫಾಸ್ಟ್. ಒಂದು ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಮತ್ತೊಂದು ಸಿನಿಮಾ ಘೋಷಿಸುತ್ತಾರೆ. ಸಂಕ್ರಾಂತಿ ಸಂದರ್ಭದಲ್ಲಿ ಅವರ ನಟನೆಯ ‘ವಾರಿಸು’ ಸಿನಿಮಾ (Varisu Movie) ಸೂಪರ್ ಹಿಟ್ ಆಯಿತು. ಈ ಚಿತ್ರ ತೆರೆಕಂಡ ಬೆನ್ನಲ್ಲೇ ಅವರು ‘ಲಿಯೋ’ ಸಿನಿಮಾ (Leo Movie) ಘೋಷಿಸಿದರು. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಹೀಗಿರುವಾಗಲೇ ಅವರ 68ನೇ ಸಿನಿಮಾ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ಈ ಚಿತ್ರದಲ್ಲಿ ದಳಪತಿ ವಿಜಯ್ ಪಡೆಯುತ್ತಿರುವ ಸಂಭಾವನೆ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ದಳಪತಿ ವಿಜಯ್ ಅವರ 68ನೇ ಸಿನಿಮಾ ಘೋಷಣೆ ಆಗಿಲ್ಲ. ಆದರೆ, ಇದಕ್ಕೆ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ವೆಂಕಟ್ ಪ್ರಭು ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಎಜಿಎಸ್​ ಎಂಟರ್​ಟೇನ್​ಮೆಂಟ್ ನಿರ್ಮಿಸುತ್ತಿದೆ. ಈ ಸಿನಿಮಾಗಾಗಿ ವಿಜಯ್ ಅವರು ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 150 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.

ದಕ್ಷಿಣ ಭಾರತದಲ್ಲಿ 100 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಹೀರೋಗಳಿದ್ದಾರೆ. ಆದರೆ, ಓರ್ವ ಹೀರೋಗೆ 150 ಕೋಟಿ ರೂಪಾಯಿ ಕೊಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಈ ಮೂಲಕ ದಳಪತಿ ವಿಜಯ್ ಅವರು ಹೊಸ ದಾಖಲೆ ಬರೆದಿದ್ದಾರೆ. ಅವರ ಸಂಭಾವನೆ ಮೊತ್ತ ಅನೇಕರಿಗೆ ಅಚ್ಚರಿ ಮುಡಿಸಿದೆ.

ಈ ವರ್ಷ ರಿಲೀಸ್ ಆದ ‘ವಾರಿಸು’ ಹಾಗೂ ಈಗ ಸಿದ್ಧಗೊಳ್ಳುತ್ತಿರುವ ‘ಲಿಯೋ’ ಚಿತ್ರಕ್ಕೆ ಅವರು 100 ಕೋಟಿ ರೂಪಾಯಿ ಪಡೆದಿದ್ದಾರೆ. ಈಗ ಹೊಸ ಚಿತ್ರಕ್ಕೆ ಅವರು ಭರ್ಜರಿ ಹಣ ಪಡೆಯುತ್ತಿದ್ದಾರೆ. ವಿಜಯ್ ಅವರು ಅನೇಕ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಇದರಿಂದ ಅವರಿಗೆ ವರ್ಷಕ್ಕೆ 10+ ಕೋಟಿ ರೂಪಾಯಿ ಬರುತ್ತದೆ. ದಳಪತಿ ವಿಜಯ್ ಅವರ ಒಟ್ಟೂ ಆಸ್ತಿ 500+ ಕೋಟಿ ರೂಪಾಯಿ ಇದೆ.

ಇದನ್ನೂ ಓದಿ: ‘ಲಿಯೋ’ ನಿರ್ದೇಶಕನಿಗೆ ದಳಪತಿ ವಿಜಯ್​ ಅಭಿಮಾನಿಗಳಿಂದ ಬಹಿರಂಗ ಪತ್ರ; ಏನಿದೆ ಇದರಲ್ಲಿ?

ದಳಪತಿ ವಿಜಯ್ ಅವರ ಸಿನಿಮಾಗಳು ಮಿನಿಮಮ್ ಬಿಸ್ನೆಸ್ ಮಾಡುತ್ತವೆ. ಸಿನಿಮಾ ರಿಲೀಸ್​ಗೂ ಮೊದಲೇ ಸ್ಯಾಟಲೈಟ್ ಹಕ್ಕು, ಒಟಿಟಿ ಹಕ್ಕು ಮತ್ತಿತ್ಯಾದಿಗಳಿಂದ ಸಿನಿಮಾ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತದೆ. ಹೀಗಾಗಿ ಸಿನಿಮಾ ರಿಲೀಸ್​ಗೂ ಮೊದಲೇ ನಿರ್ಮಾಪಕರು ಸೇಫ್ ಆಗುತ್ತಾರೆ. ಹೀಗಾಗಿ ವಿಜಯ್ ಕೇಳಿದಷ್ಟು ಹಣ ಕೊಡಲು ನಿರ್ಮಾಪಕರು ರೆಡಿ ಇರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ