Lokesh Kanagaraj: ‘ಲಿಯೋ’ ನಿರ್ದೇಶಕನಿಗೆ ದಳಪತಿ ವಿಜಯ್​ ಅಭಿಮಾನಿಗಳಿಂದ ಬಹಿರಂಗ ಪತ್ರ; ಏನಿದೆ ಇದರಲ್ಲಿ?

Lokesh Kanagaraj | Leo Movie: ಕೇರಳದಲ್ಲಿನ ಅಭಿಮಾನಿಗಳು ಈ ಪತ್ರ ಬರೆದಿ​ದ್ದಾರೆ. ಆ ಮೂಲಕ ಲೋಕೇಶ್​ ಕನಗರಾಜ್​ ಅವರ ಮುಂದೆ ಒಂದು ವಿಶೇಷ ಮನವಿ ಇಡಲಾಗಿದೆ.

Lokesh Kanagaraj: ‘ಲಿಯೋ’ ನಿರ್ದೇಶಕನಿಗೆ ದಳಪತಿ ವಿಜಯ್​ ಅಭಿಮಾನಿಗಳಿಂದ ಬಹಿರಂಗ ಪತ್ರ; ಏನಿದೆ ಇದರಲ್ಲಿ?
ದಳಪತಿ ವಿಜಯ್, ಲೋಕೇಶ್ ಕನಗರಾಜ್
Follow us
ಮದನ್​ ಕುಮಾರ್​
|

Updated on: Apr 30, 2023 | 1:00 PM

ನಟ ದಳಪತಿ ವಿಜಯ್​ (Thalapathy Vijay) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಪ್ರತಿ ಸಿನಿಮಾ ರೀಲೀಸ್​ ಆಗುವಾಗಲೂ ಕ್ರೇಜ್​ ಜೋರಾಗಿರುತ್ತದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ದಳಪತಿ ವಿಜಯ್​ ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರು ಬಹುನಿರೀಕ್ಷಿತ ‘ಲಿಯೋ’ ಸಿನಿಮಾದ (Leo Movie) ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ಬಹುಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದೆ. ಅನೇಕ ಸ್ಟಾರ್​ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ (Lokesh Kanagaraj) ಅವರು ‘ಲಿಯೋ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಜನರಿಗೆ ಎಷ್ಟು ಕ್ರೇಜ್​ ಇದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿ ಆಗಿದೆ. ಕೇರಳದಲ್ಲಿ ಇರುವ ದಳಪತಿ ವಿಜಯ್​ ಅಭಿಮಾನಿಗಳು ನಿರ್ದೇಶಕ ಲೋಕೇಶ್​ ಕನಗರಾಜ್​ಗೆ ಬಹಿರಂಗ ಪತ್ರ ಬರೆದಿದ್ದಾರೆ. ಆ ಮೂಲಕ ಒಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಕೇರಳದಲ್ಲಿ ದಳಪತಿ ವಿಜಯ್​ ಅವರನ್ನು ಇಷ್ಟಪಡುವ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಬೇಕು ಎಂಬುದು ಅಲ್ಲಿನ ಫ್ಯಾನ್ಸ್​ ಆಸೆ. ಹಾಗಾಗಿ ದಳಪತಿ ವಿಜಯ್​ ಅವರು ಕೇರಳಕ್ಕೆ ಬರಬೇಕು ಎಂದು ಅವರೆಲ್ಲರೂ ಬಯಸುತ್ತಿದ್ದಾರೆ. ಅದಕ್ಕಾಗಿ ‘ಲಿಯೋ’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ಕೇರಳದಲ್ಲೇ ನಡೆಯಲಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಬಹಿರಂಗ ಪತ್ರದಲ್ಲಿ ಈ ವಿಚಾರ ಪ್ರಸ್ತಾಪ ಆಗಿದೆ.

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಇನ್​ಸ್ಟಾಗ್ರಾಮ್​ನಲ್ಲಿ ಸುನಾಮಿ ಎಬ್ಬಿಸಿದ ದಳಪತಿ ವಿಜಯ್​; ಒಂದೇ ದಿನದಲ್ಲಿ ಮೋಡಿ ಮಾಡಿದ ನಟ

‘ನಾವೆಲ್ಲರೂ ಲಿಯೋ ಸಿನಿಮಾಗಾಗಿ ಕಾಯುತ್ತಿದ್ದೇವೆ. ಕೇರಳದಲ್ಲಿ ನೀವು ಈ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ಮಾಡಿದರೆ ಚೆನ್ನಾಗಿರುತ್ತದೆ. ವಿಜಯ್​ ಅವರು ತುಂಬ ಬ್ಯುಸಿ ಆಗಿರುವ ಕಲಾವಿದ ಎಂಬುದು ನಮಗೆ ತಿಳಿದಿದೆ. ಆದರೂ ಕೂಡ ಅವರು ಕೇರಳಕ್ಕೆ ಬಂದು ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಭಾಗವಹಿಸಿದರೆ ನಮಗೆಲ್ಲ ಸ್ಮರಣೀಯ ದಿನವಾಗಲಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Trisha: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ

‘ನಿಮಗೆ ಈಗಾಗಲೇ ತಿಳಿದಿರುವಂತೆ ಕೇರಳದಲ್ಲಿ ದಳಪತಿ ವಿಜಯ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ನೇರವಾಗಿ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾದಿದ್ದಾರೆ. ನಮ್ಮ ಮನವಿಯನ್ನು ಪರಿಗಣಿಸಿ ನೀವು ಕೇರಳದಲ್ಲಿ ಪ್ರೀ-ರಿಲೀಸ್​ ಇವೆಂಟ್​ ಆಯೋಜನೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ. ಆ ಕಾರ್ಯಕ್ರಮ ದೊಡ್ಡ ಯಶಸ್ಸು ಕಾಣಲಿದೆ ಅಂತ ನಾವು ನಿಮಗೆ ಭರವಸೆ ನೀಡುತ್ತೇವೆ. ವೇದಿಕೆ ಮೇಲೆ ದಳಪತಿ ವಿಜಯ್​ ಅವರ ಮೋಡಿಯನ್ನು ನೋಡಲು ಕೇರಳದ ಅಭಿಮಾನಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಂತೆ ಆಗುತ್ತೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ಬಿಡುವು ಮಾಡಿಕೊಂಡು ಈ ಪತ್ರ ಓದಿದ್ದಕ್ಕೆ ಧನ್ಯವಾದಗಳು. ನಿಮ್ಮಿಂದ ಉತ್ತರ ನಿರೀಕ್ಷಿಸಿದ್ದೇವೆ’ ಎಂದು ಅಭಿಮಾನಿಗಳು ಪತ್ರವನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೆ ‘ಲಿಯೋ’ ಚಿತ್ರತಂಡದ ಕಡೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕು. ಅಕ್ಟೋಬರ್​ 19ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.