- Kannada News Photo gallery Kantara Rani Sarees: Pragathi Shetty, Kantara actor and custom designer reveals the secret of Kantara Rani sarees
ಕಾಂತಾರ ಸಿನಿಮಾದಲ್ಲಿ ಉಟ್ಟಿದ್ದ 32ವರ್ಷ ಹಳೆಯ ಸೀರೆಯ ಸೀಕ್ರೆಟ್ ಬಿಚ್ಚಿಟ್ಟ ರಿಷಬ್ ಪತ್ನಿ
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಸೂಪರ್ ಹಿಟ್ ಕಾಂತಾರ ಸಿನಿಮಾದಲ್ಲಿನ ಸೀರೆಯೊಂದರ ವಿಶೇಷತೆಯ ಬಗ್ಗೆ ರಿಷಬ್ ಪತ್ನಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
Updated on:Apr 30, 2023 | 11:45 AM

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಸೂಪರ್ ಹಿಟ್ ಕಾಂತಾರ ಸಿನಿಮಾದಲ್ಲಿನ ಸೀರೆಯೊಂದರ ವಿಶೇಷತೆಯ ಬಗ್ಗೆ ರಿಷಬ್ ಪತ್ನಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಕಾಂತಾರ ಸಿನಿಮಾದ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಹೌದು ಸಿನಿಮಾದ ಆರಂಭದಲ್ಲಿ ಕಾಣಿಸಿಕೊಳ್ಳುವ ರಾಜನ ಪತ್ನಿ ಅಂದರೆ ರಾಣಿಯ ಪಾತ್ರದಲ್ಲಿ ಪ್ರಗತಿ ಕಾಣಿಸಿಕೊಂಡಿದ್ದರು.

ಇದೀಗಾ ರಾಣಿಯ ಪಾತ್ರದಲ್ಲಿ ತಾನು ಉಟ್ಟಿದ್ದ ಸೀರೆಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಇದು ಸಿನಿಮಾಗಾಗಿ ಯಾವುದೋ ಮಳಿಗೆಯಿಂದ ಖರೀದಿಸಿದ ಸೀರೆಯಲ್ಲ. ಬದಲಾಗಿ ಈ ಸೀರೆಯ 32ವರ್ಷ ಹಳೆಯದ್ದು. ಜೊತೆಗೆ ಮತ್ತೊಂದು ವಿಶೇಷತೆಯೆಂದರೆ ಇದು ಪ್ರಗತಿಯವರ ಅಮ್ಮನ ಸೀರೆ.

'ನನ್ನ ಅಮ್ಮನ ಮದುವೆಯ ಸೀರೆಯನ್ನು ಮುವ್ವತ್ತೆರೆಡು ವರ್ಷದ ನಂತರ ಕಾಂತಾರ ಸಿನಿಮಾದಲ್ಲಿ ಉಟ್ಟಿದ್ದು ತುಂಬಾ ಸಂತಸ ತಂದಿತ್ತು' ಎಂದು ಸ್ವತ: ರಿಷಬ್ ಪತ್ನಿ ಪ್ರಗತಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಪತಿ ರಿಷಬ್ರವರ ಈ ಸಿನಿಮಾದಲ್ಲಿ ಕಾಸ್ಟೂಮ್ ಡಿಸೈನರ್ ಆಗಿ ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಬಟ್ಟೆಗಳನ್ನು ವಿನ್ಯಾಸಗೊಳಿಸಿ ಸೈ ಎಸಿಕೊಂಡಿದ್ದ ಪ್ರಗತಿ.
Published On - 11:45 am, Sun, 30 April 23




