ಇನ್​ಸ್ಟಾಗ್ರಾಮ್​ನಲ್ಲಿ ಸುನಾಮಿ ಎಬ್ಬಿಸಿದ ದಳಪತಿ ವಿಜಯ್​; ಒಂದೇ ದಿನದಲ್ಲಿ ಮೋಡಿ ಮಾಡಿದ ನಟ

Thalapathy Vijay Instagram Account: ದಳಪತಿ ವಿಜಯ್​ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈವರೆಗೂ ಅಪ್​ಲೋಡ್​ ಮಾಡಿರುವುದು ಒಂದು ಫೋಟೋ ಹಾಗೂ ಇನ್ನೊಂದು ಸ್ಟೋರಿ ಮಾತ್ರ. ಅದಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಭರ್ಜರಿ ಆಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಸುನಾಮಿ ಎಬ್ಬಿಸಿದ ದಳಪತಿ ವಿಜಯ್​; ಒಂದೇ ದಿನದಲ್ಲಿ ಮೋಡಿ ಮಾಡಿದ ನಟ
ದಳಪತಿ ವಿಜಯ್
Follow us
ಮದನ್​ ಕುಮಾರ್​
|

Updated on:Apr 03, 2023 | 1:35 PM

ನಟ ದಳಪತಿ ವಿಜಯ್​ (Thalapathy Vijay) ಅವರಿಗೆ ಇರುವ ಅಭಿಮಾನಿ ಬಳಗ ಬಹುದೊಡ್ಡದು. ಅದಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಇರುವ ಫಾಲೋವರ್ಸ್​ ಸಂಖ್ಯೆಯೇ ಸಾಕ್ಷಿ. ಇಷ್ಟು ದಿನ ಕೇವಲ ಟ್ವಿಟರ್​ ಮತ್ತು ಫೇಸ್​ಬುಕ್​ನಲ್ಲಿ ಖಾತೆ ಹೊಂದಿದ್ದ ದಳಪತಿ ವಿಜಯ್​ ಅವರು ಈಗ ಇನ್​ಸ್ಟಾಗ್ರಾಮ್​ (Thalapathy Vijay Instagram) ಲೋಕಕ್ಕೂ ಕಾಲಿಟ್ಟಿದ್ದಾರೆ. ಬರುಬರುತ್ತಿದ್ದಂತೆಯೇ ಅವರು ಈ ಸೋಶಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ನಲ್ಲಿ ಸುನಾಮಿ ಎಬ್ಬಿಸಿದ್ದಾರೆ. ಅತಿ ವೇಗವಾಗಿ ಒಂದು ಮಿಲಿಯನ್​ (10 ಲಕ್ಷ) ಹಿಂಬಾಲಕರನ್ನು ಪಡೆದ ಭಾರತದ ಸೆಲೆಬ್ರಿಟಿ ಎಂಬ ದಾಖಲೆ ವಿಜಯ್​ ಹೆಸರಿನಲ್ಲಿದೆ. ಒಂದು ದಿನ ಕಳೆಯುವುದರೊಳಗೆ ಅವರನ್ನು 45 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡಲು ಆರಂಭಿಸಿದ್ದಾರೆ.

ಏಪ್ರಿಲ್​ 2ರಂದು ದಳಪತಿ ವಿಜಯ್​ ಅವರು ಇನ್​ಸ್ಟಾಗ್ರಾಮ್​ ಖಾತೆ ತೆರೆದರು. ಅದರಲ್ಲಿ ಅವರು ಈವರೆಗೂ ಅಪ್​ಲೋಡ್​ ಮಾಡಿರುವುದು ಒಂದೇ ಒಂದು ಫೋಟೋ ಮಾತ್ರ. 20 ಗಂಟೆ ಕಳೆಯುವುದರೊಳಗೆ ಈ ಫೋಟೋವನ್ನು 45 ಲಕ್ಷ ಮಂದಿ ಲೈಕ್​ ಮಾಡಿದ್ದಾರೆ. ಐದು ಲಕ್ಷಕ್ಕೂ ಅಧಿಕ ಕಮೆಂಟ್​ಗಳ ಮೂಲಕ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ. ಅಭಿಮಾನಿಗಳ ಪ್ರೀತಿ ಕಂಡು ಫಿದಾ ಆಗಿರುವ ದಳಪತಿ ವಿಜಯ್​ ಅವರು ಸ್ಟೋರಿಯಲ್ಲಿ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ. ಅದು ‘ಲಿಯೋ’ ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ಕ್ಲಿಕ್ಕಿಸಿದ ಫೋಟೋ ಎಂಬುದು ವಿಶೇಷ.

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು
View this post on Instagram

A post shared by Vijay (@actorvijay)

ದಳಪತಿ ವಿಜಯ್​ ಅವರು ಇನ್​ಸ್ಟಾಗ್ರಾಮ್​ಗೆ ಬರಬೇಕು ಎಂಬುದು ಅಭಿಮಾನಿಗಳ ಬಹುದಿನಗಳ ಆಸೆ ಆಗಿತ್ತು. ಅದು ಈಡೇರಿದ ಖುಷಿಯಲ್ಲಿ ಎಲ್ಲರೂ ಅವರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಪ್ರತಿ ಗಂಟೆಯೂ ಲಕ್ಷಾಂತರ ಹಿಂಬಾಲಕರು ಸೇರ್ಪಡೆ ಆಗುತ್ತಿದ್ದಾರೆ. ಮ್ಯಾಜಿಕ್​ ರೀತಿಯಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚುತ್ತಿದೆ.

ಇದನ್ನೂ ಓದಿ: Trisha: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ

ಚಿತ್ರರಂಗದಲ್ಲಿ ದಳಪತಿ ವಿಜಯ್​ ಅವರಿಗೆ ಇರುವ ಅನುಭವ ಅಪಾರ. ಬಾಲನಟನಾಗಿ 1984ರಲ್ಲೇ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಹೀರೋ ಆದ ನಂತರವೂ ಅವರು ಅಭಿಮಾನಿಗಳ ಹೃದಯದಲ್ಲಿ ಜಾಗ ಪಡೆದುಕೊಂಡರು. ಇಂದಿಗೂ ಅವರು ಅದೇ ಚಾರ್ಮ್​ ಕಾಪಾಡಿಕೊಂಡಿದ್ದಾರೆ. ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತ, ಬಾಕ್ಸ್​ ಆಫೀಸ್​ನಲ್ಲಿ ಜಾದೂ ಮಾಡುತ್ತ ಅವರು ಮುನ್ನುಗ್ಗುತ್ತಿದ್ದಾರೆ. ಅವರ ಜೊತೆ ಸಿನಿಮಾ ಮಾಡಲು ಅನೇಕ ನಿರ್ಮಾಪಕರು, ನಿರ್ದೇಶಕರು ಕಾಯುತ್ತಿದ್ದಾರೆ.

ಪ್ರಸ್ತುತ ವಿಜಯ್​ ಅವರು ‘ಲಿಯೋ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಬಹುತಾರಾಗಣ ಇರುವ ಈ ಸಿನಿಮಾದ ಶೂಟಿಂಗ್​ ಕಾಶ್ಮೀರದಲ್ಲಿ ನಡೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:35 pm, Mon, 3 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ