AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thalapathy Vijay: ಮತ್ತೆ ಒಂದಾಗಲಿದೆ ‘ವಾರಿಸು’ ಟೀಂ; ಹೊಸ ಚಿತ್ರಕ್ಕೆ ದಳಪತಿ ವಿಜಯ್ ಗ್ರೀನ್ ಸಿಗ್ನಲ್

ಇತ್ತೀಚೆಗೆ ವಂಶಿ ಪೈಡಿಪಲ್ಲಿ ಜೊತೆ ದಿಲ್ ರಾಜು ಅವರು ಮಾತುಕತೆ ನಡೆಸಿದ್ದಾರೆ. ಇಬ್ಬರೂ ಸೇರಿ ವಿಜಯ್ ಅವರನ್ನು ಮತ್ತೆ ಭೇಟಿ ಮಾಡಿದ್ದು, ಅವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

Thalapathy Vijay: ಮತ್ತೆ ಒಂದಾಗಲಿದೆ ‘ವಾರಿಸು’ ಟೀಂ; ಹೊಸ ಚಿತ್ರಕ್ಕೆ ದಳಪತಿ ವಿಜಯ್ ಗ್ರೀನ್ ಸಿಗ್ನಲ್
ರಶ್ಮಿಕಾ-ವಿಜಯ್
ರಾಜೇಶ್ ದುಗ್ಗುಮನೆ
|

Updated on:Feb 21, 2023 | 3:16 PM

Share

ನಟ ದಳಪತಿ ವಿಜಯ್ (Thalapathy Vijay), ನಿರ್ದೇಶಕ ವಂಶಿ ಪೈಡಿಪಲ್ಲಿ ಹಾಗೂ ನಿರ್ಮಾಪಕ ದಿಲ್ ರಾಜು ಕಾಂಬಿನೇಷನ್​ನಲ್ಲಿ ಮೂಡಿ ಬಂದ ‘ವಾರಿಸು’ ಸಿನಿಮಾ ಹಿಟ್ ಆಯಿತು. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರ ಒಟಿಟಿಯಲ್ಲೂ ಅಬ್ಬರಿಸಲು ರೆಡಿ ಆಗಿದೆ. ಹೀಗಿರುವಾಗಲೇ ಇವರ ಕಾಂಬಿನೇಷನ್​ ಹೊಸ ಸಿನಿಮಾ ಬಗ್ಗೆ ಹೊಸ ಸುದ್ದಿ ಸಿಕ್ಕಿದೆ. ‘ವಾರಿಸು’ ಚಿತ್ರವನ್ನು ನಿರ್ಮಿಸಿದ್ದ ದಿಲ್ ರಾಜು, ನಟ ದಳಪತಿ ವಿಜಯ್ ಹಾಗೂ ನಿರ್ದೇಶಕ ವಂಶಿ ಪೈಡಿಪಲ್ಲಿ ಹೊಸ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಯಾವುದಾದರೂ ಒಂದು ಕಾಂಬಿನೇಷನ್ ಹಿಟ್ ಆಯಿತು ಎಂದರೆ ಆ ಟೀಂ ಮತ್ತೆ ಮತ್ತೆ ಒಂದಾಗೋದು ಚಿತ್ರರಂಗದಲ್ಲಿ ಹೊಸದೇನು ಅಲ್ಲ. ದಳಪತಿ ವಿಜಯ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಖ್ಯಾತ ನಿರ್ದೇಶಕ ಅಟ್ಲೀ ಜತೆ ಮೂರು ಚಿತ್ರಗಳನ್ನು ಮಾಡಿದ್ದರು. ಈಗ ವಂಶಿ ಪೈಡಿಪಲ್ಲಿ ಹಾಗೂ ದಿಲ್ ರಾಜು ಜೊತೆ ಮತ್ತೆ ಕೈ ಜೋಡಿಸಲು ಅವರು ರೆಡಿ ಆಗಿದ್ದಾರೆ.

ದಿಲ್ ರಾಜು ಅವರು ತೆಲುಗು ನಿರ್ದೇಶಕರು. ತೆಲುಗಿನಲ್ಲಿ ಅವರಿಗೆ ಒಳ್ಳೆಯ ಹಿಡಿತ ಇದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ‘ಫಿದಾ’, ‘ಯೆವಡು’ ಸೇರಿ ಅನೇಕ ಸಿನಿಮಾಗಳು ಅವರ ನಿರ್ಮಾಣದಲ್ಲಿ ಮೂಡಿ ಬಂದಿವೆ. ಈ ಬಾರಿ ಅವರು ತಮಿಳು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದರು. ಅವರ ನಿರ್ಮಾಣದ ‘ವಾರಿಸು’ ಸಿನಿಮಾ ಒಳ್ಳೆಯ ಲಾಭ ತಂದುಕೊಟ್ಟಿದೆ. ಹೀಗಾಗಿ, ವಿಜಯ್ ಜೊತೆ ಮತ್ತೆ ಸಿನಿಮಾ ಮಾಡೋಕೆ ದಿಲ್ ರಾಜು ಆಸಕ್ತಿ ತೋರಿದ್ದಾರೆ.

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಇತ್ತೀಚೆಗೆ ವಂಶಿ ಪೈಡಿಪಲ್ಲಿ ಜೊತೆ ದಿಲ್ ರಾಜು ಅವರು ಮಾತುಕತೆ ನಡೆಸಿದ್ದಾರೆ. ಇಬ್ಬರೂ ಸೇರಿ ವಿಜಯ್ ಅವರನ್ನು ಮತ್ತೆ ಭೇಟಿ ಮಾಡಿದ್ದು, ಅವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ, ವಿಜಯ್ 68ನೇ ಸಿನಿಮಾಗೆ ಈ ಹಿಟ್ ಕಾಂಬಿನೇಷನ್ ಒಂದಾಗಲಿದೆ ಎನ್ನುವ ಮಾತಿದೆ. ಈ ಬಗ್ಗೆ ನಿರ್ಮಾಪಕರಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸೋಕೆ ದಳಪತಿ ವಿಜಯ್ ಎತ್ತಿದ ಕೈ. ‘ವಾರಿಸು’ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಅವರ 67ನೇ ಸಿನಿಮಾ ‘ಲಿಯೋ’ ಕೈಗೆತ್ತಿಕೊಂಡರು. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿರುವಾಗಲೇ ಮತ್ತೊಂದು ಚಿತ್ರವನ್ನು ಅವರು ಓಕೆ ಮಾಡಿದ್ದಾರೆ. ‘ಲಿಯೋ’ ತೆರೆಗೆ ಬರುತ್ತಿದ್ದಂತೆ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸ್ತಾರಾ ಅನ್ನೋದು ಕಾದು ನೋಡಬೇಕಿದೆ.

ಇದನ್ನೂ ಓದಿ: Trisha: ದಳಪತಿ ವಿಜಯ್​ ಜತೆಗಿನ ‘ಲಿಯೋ’ ಚಿತ್ರದ ಸೆಟ್​ನಿಂದ ತ್ರಿಷಾ ವಾಪಸ್​ ಬಂದಿದ್ದೇಕೆ? ಇಲ್ಲಿದೆ ಅಸಲಿ ವಿಷಯ

‘ಲಿಯೋ’ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರು ತಮ್ಮದೇ ಸಿನಿಮಾ ಯೂನಿವರ್ಸ್ ಮಾಡಿಕೊಂಡಿದ್ದಾರೆ. ‘ಕೈದಿ’, ‘ವಿಕ್ರಮ್​’ ಚಿತ್ರಗಳು ಲೋಕೇಶ್ ಯೂನಿವರ್ಸ್​​ನಲ್ಲಿ ಮೂಡಿಬಂದಿವೆ. ‘ಲಿಯೋ’ ಚಿತ್ರಕ್ಕೂ ಈ ಹಿಂದಿನ ಚಿತ್ರಕ್ಕೂ ಕನೆಕ್ಷನ್ ಇದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆದ ಶೀರ್ಷಿಕೆ ಅನಾವರಣದ ಟೀಸರ್​ನಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಆದರೆ, ಇದನ್ನು ಲೋಕೇಶ್ ಅವರು ಖಚಿತಪಡಿಸಿಲ್ಲ.

ಶ್ರೀಲಕ್ಷ್ಮಿ ಎಚ್​.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:15 pm, Tue, 21 February 23

ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ