Varisu Movie: ‘ವಾರಿಸು’ ಚಿತ್ರದ ಒಟಿಟಿ ರಿಲೀಸ್​ಗೆ ದಿನಾಂಕ ನಿಗದಿ; ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಪ್ರಸಾರ

Varisu OTT Release Date: ದಳಪತಿ ವಿಜಯ್​ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚಿನ ಕಲೆಕ್ಷನ್​ ಮಾಡಿದ ಸಿನಿಮಾ ಎಂಬ ಖ್ಯಾತಿ ‘ವಾರಿಸು’ ಚಿತ್ರಕ್ಕಿದೆ. ಈ ಸಿನಿಮಾ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿದೆ.

Varisu Movie: ‘ವಾರಿಸು’ ಚಿತ್ರದ ಒಟಿಟಿ ರಿಲೀಸ್​ಗೆ ದಿನಾಂಕ ನಿಗದಿ; ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಪ್ರಸಾರ
ದಳಪತಿ ವಿಜಯ್, ರಶ್ಮಿಕಾ ಮಂದಣ್ಣ
Follow us
ಮದನ್​ ಕುಮಾರ್​
|

Updated on:Feb 17, 2023 | 3:32 PM

ಕಾಲಿವುಡ್​ ನಟ ದಳಪತಿ ವಿಜಯ್​ (Thalapathy Vijay) ಅವರು ಈ ವರ್ಷ ಆರಂಭದಲ್ಲೇ ದೊಡ್ಡ ಗೆಲುವು ಪಡೆದರು. ಅವರು ನಟಿಸಿದ ‘ವಾರಿಸು’ ಸಿನಿಮಾ (Varisu Movie) ಸೂಪರ್​ ಹಿಟ್​ ಆಯಿತು. ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ದಳಪತಿ ವಿಜಯ್​ಗೆ ಜೋಡಿಯಾಗಿ ನಟಿಸಿದರು. ಇಬ್ಬರ ಕಾಂಬಿನೇಷನ್​ ಕಂಡು ಪ್ರೇಕ್ಷಕರು ಇಷ್ಟಪಟ್ಟರು. ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡ ‘ವಾರಿಸು’ ಚಿತ್ರ ಈಗ ಒಟಿಟಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ. ಅಮೇಜಾನ್​ ಪ್ರೈಂ ವಿಡಿಯೋ (Amazon Prime Video) ಮೂಲಕ ಈ ಸಿನಿಮಾದ ಸ್ಟ್ರೀಮಿಂಗ್​ ಆಗಲಿದೆ. ಫೆಬ್ರವರಿ 22ರಿಂದ ‘ವಾರಿಸು’ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ. ಈ ಸಿನಿಮಾಗೆ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ.

‘ವಾರಿಸು’ ಸಿನಿಮಾ ರಿಲೀಸ್​ ಆಗಿದ್ದು ಜನವರಿ 11ರಂದು. ಸಂಕ್ರಾಂತಿ ಪ್ರಯುಕ್ತ ಬಿಡುಗಡೆ ಆದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಫ್ಯಾಮಿಲಿ ಕಥಾಹಂದರದ ಜೊತೆಗೆ ಸಾಹಸ ದೃಶ್ಯಗಳು ಕೂಡ ಭರ್ಜರಿಯಾಗಿ ಇದ್ದಿದ್ದರಿಂದ ಜನರಿಗೆ ಈ ಸಿನಿಮಾ ಇಷ್ಟ ಆಯಿತು. ಅದರಲ್ಲೂ ವಿಶೇಷವಾಗಿ ದಳಪತಿ ವಿಜಯ್​ ಅಭಿಮಾನಿಗಳು ‘ವಾರಿಸು’ ಸಿನಿಮಾಗೆ ಭರ್ಜರಿ ಸ್ವಾಗತ ನೀಡಿದರು. ಈಗ ಒಟಿಟಿಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಇದನ್ನೂ ಓದಿ: ದಳಪತಿ ವಿಜಯ್ ಕರಿಯರ್​​ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ‘ವಾರಿಸು’

ರಶ್ಮಿಕಾ ಮಂದಣ್ಣ ಅವರಿಗೆ ಪರಭಾಷೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿ ಆಗಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರು ಫೇಮಸ್​ ಆಗಿದ್ದಾರೆ. ‘ವಾರಿಸು’ ಸಿನಿಮಾ ತೆಲುಗು, ತಮಿಳು, ಮಲಯಾಳಂನಲ್ಲೂ ವೀಕ್ಷಣೆಗೆ ಲಭ್ಯವಾಗುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 300 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ದಳಪತಿ ವಿಜಯ್​ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚಿನ ಕಲೆಕ್ಷನ್​ ಮಾಡಿದ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ಪ್ರಕಾಶ್​ ರಾಜ್​, ಜಯಸುಧಾ, ಆರ್. ಶರತ್​ ಕುಮಾರ್​ ಮುಂತಾದವರು ನಟಿಸಿದ್ದಾರೆ. ತುಂಬ ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ.

ದಳಪತಿ ವಿಜಯ್​ ಅವರು ಬಹಳ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುತ್ತಿದ್ದಾರೆ. ‘ವಾರಿಸು’ ಸಿನಿಮಾದ ಬಿಡುಗಡೆಗೂ ಮುನ್ನವೇ ಅವರು ಹೊಸ ಸಿನಿಮಾ ಶುರು ಮಾಡಿದರು. ಆ ಚಿತ್ರಕ್ಕೆ ‘ಲಿಯೋ’ ಎಂದು ಹೆಸರು ಇಡಲಾಗಿದೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ವಿಜಯ್​ಗೆ ಜೋಡಿಯಾಗಿ ತ್ರಿಷಾ ಕೃಷ್ಣನ್​ ನಟಿಸುತ್ತಿದ್ದಾರೆ. ಈಗಾಗಲೇ ಟೀಸರ್​ ಬಿಡುಗಡೆ ಆಗಿದ್ದು ಸಖತ್​ ಹೈಪ್​ ಸೃಷ್ಟಿ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:32 pm, Fri, 17 February 23