AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಳಪತಿ ವಿಜಯ್ ಕರಿಯರ್​​ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ‘ವಾರಿಸು’

ಸಂಕ್ರಾಂತಿ ರಿಲೀಸ್ ಸಂದರ್ಭದಲ್ಲಿ ‘ವಾರಿಸು’ ಹಾಗೂ ಅಜಿತ್ ಕುಮಾರ್ ನಟನೆಯ ‘ತುನಿವು’ ಚಿತ್ರಗಳು ರಿಲೀಸ್ ಆದವು. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದವು. ಅಂತಿಮವಾಗಿ ವಿಜಯ್ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ.

ದಳಪತಿ ವಿಜಯ್ ಕರಿಯರ್​​ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ‘ವಾರಿಸು’
ದಳಪತಿ ವಿಜಯ್
ರಾಜೇಶ್ ದುಗ್ಗುಮನೆ
|

Updated on: Feb 07, 2023 | 12:39 PM

Share

‘ದಳಪತಿ’ ವಿಜಯ್ (Thalapathy Vijay) ನಟನೆಯ ‘ವಾರಿಸು’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ತೆರೆಗೆ ಬಂದು ಒಂದು ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಆದಾಗ್ಯೂ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಗಳಿಕೆ ಈಗ 300 ಕೋಟಿ ರೂಪಾಯಿ ದಾಟಿದೆ. ದಳಪತಿ ವಿಜಯ್ ವೃತ್ತಿ ಜೀವನದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಅನ್ನೋ ಖ್ಯಾತಿ ‘ವಾರಿಸು’ ಚಿತ್ರಕ್ಕೆ ಸಿಕ್ಕಿದೆ. ಈ ಚಿತ್ರದಿಂದ ದಳಪತಿ ವಿಜಯ್ ಅವರು ಗೆದ್ದು ಬೀಗಿದ್ದಾರೆ.

ಸಂಕ್ರಾಂತಿ ರಿಲೀಸ್ ಸಂದರ್ಭದಲ್ಲಿ ‘ವಾರಿಸು’ ಹಾಗೂ ಅಜಿತ್ ಕುಮಾರ್ ನಟನೆಯ ‘ತುನಿವು’ ಚಿತ್ರಗಳು ರಿಲೀಸ್ ಆದವು. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದವು. ಅಂತಿಮವಾಗಿ ವಿಜಯ್ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ. ವಿಜಯ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಶ್ರಮಿಸುತ್ತಿದ್ದಾರೆ. ಈಗ ಅವರ ನಟನೆಯ ಸಿನಿಮಾ 300 ಕೋಟಿ ರೂ. ಬಾಚಿ ಬೀಗಿದೆ.

‘ವಾರಿಸು’ ಸಿನಿಮಾ ತಮಿಳು ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ರಿಲೀಸ್ ಆಯಿತು. ಈ ಚಿತ್ರ ಅಲ್ಲಿ ಒಳ್ಳೆಯ ಬಿಸ್ನೆಸ್ ಮಾಡಿದೆ. ವಿದೇಶದಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಚಿತ್ರ ಒಟಿಟಿಗೆ ಬರೋಕೆ ಇನ್ನೂ ಕೆಲವು ದಿನಗಳು ಬೇಕಾಗಬಹುದು. ಅಲ್ಲಿಯವರೆಗೆ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮುಂದುವರಿಸಲಿದೆ.

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ದಳಪತಿ ವಿಜಯ್ ನಟನೆಯ ‘ವಾರಿಸು’ ಸಿನಿಮಾನ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ನಾಯಕಿ ಪಾತ್ರ ಮಾಡಿದ್ದಾರೆ. ಫ್ಯಾಮಿಲಿ ಎಂಟರ್​​ಟೇನ್​ಮೆಂಟ್ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ.

ಇದನ್ನೂ ಓದಿ: ‘ವಾರಿಸು’, ‘ತುನಿವು’ ಒಟಿಟಿ ರಿಲೀಸ್ ದಿನಾಂಕ ರಿವೀಲ್​; ಇಲ್ಲಿದೆ ಮಾಹಿತಿ

‘ವಾರಿಸು’ ಸಿನಿಮಾದಲ್ಲಿ ರಶ್ಮಿಕಾ ಆರಂಭದಲ್ಲಿ ಕೆಲವು ದೃಶ್ಯಗಳಲ್ಲಿ ಬರುತ್ತಾರೆ. ಮರಸುತ್ತುವ ಪಾತ್ರಕ್ಕೆ ಅವರು ಸೀಮಿತವಾಗಿದ್ದಾರೆ. ಒಂದೆರಡು ಹಾಡುಗಳಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ‘ರಂಜಿದಮೆ..’ ಹಾಡು ಹಿಟ್ ಆಗಿದೆ. ಈಗ ಅವರು ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಕಾರಣ ನೀಡಿದ್ದಾರೆ. ‘ಈ ಚಿತ್ರವನ್ನು ನಾನೇ ಆಯ್ಕೆ ಮಾಡಿಕೊಂಡಿದ್ದು. ನನಗೆ ಗೊತ್ತಿತ್ತು ಈ ಸಿನಿಮಾದಲ್ಲಿ ನನಗಿರೋದು ಕೇವಲ ಎರಡು ಹಾಡುಗಳು ಮಾತ್ರ ಅಂತ. ಅದರಲ್ಲೇ ನಾನು ಗಮನಸೆಳೆಯಬೇಕು ಎಂದುಕೊಂಡಿದ್ದೆ. ನಾನು ವಿಜಯ್ ಅವರ ಬಳಿ ಈ ಮಾತನ್ನು ಹೇಳಿದ್ದೆ’ ಎಂದು ರಶ್ಮಿಕಾ ಮಂದಣ್ಣ ಈ ಮೊದಲು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ