Thalapathy Vijay: ದಳಪತಿ ವಿಜಯ್​ ನಟನೆಯ 67ನೇ ಚಿತ್ರಕ್ಕೆ ‘ಲಿಯೋ’ ಎಂದು ಹೆಸರಿಟ್ಟ ನಿರ್ದೇಶಕ ಲೋಕೇಶ್​ ಕನಗರಾಜ್​​

Thalapathy 67 | Leo Movie: ‘ಲಿಯೋ’ ಸಿನಿಮಾದ ಟೀಸರ್​ ನೋಡಿದ ಎಲ್ಲರಿಗೂ ‘ವಿಕ್ರಮ್​’ ಚಿತ್ರದ ಛಾಯೆ ಕಾಣಿಸಿದೆ. ಈ ಶೀರ್ಷಿಕೆ ಜೊತೆ ‘ಬ್ಲಡಿ ಸ್ವೀಟ್​’ ಎಂಬ ಟ್ಯಾಗ್​ ಲೈನ್​ ಇದೆ.

Thalapathy Vijay: ದಳಪತಿ ವಿಜಯ್​ ನಟನೆಯ 67ನೇ ಚಿತ್ರಕ್ಕೆ ‘ಲಿಯೋ’ ಎಂದು ಹೆಸರಿಟ್ಟ ನಿರ್ದೇಶಕ ಲೋಕೇಶ್​ ಕನಗರಾಜ್​​
ದಳಪತಿ ವಿಜಯ್
Follow us
ಮದನ್​ ಕುಮಾರ್​
|

Updated on: Feb 03, 2023 | 6:12 PM

ಖ್ಯಾತ ನಟ ದಳಪತಿ ವಿಜಯ್​ (Thalapathy Vijay) ಅವರ ಹೊಸ ಸಿನಿಮಾ ಬಗ್ಗೆ ಬ್ಯಾಕ್​ ಟು ಬ್ಯಾಕ್​ ಅಪ್​ಡೇಟ್​ ಸಿಗುತ್ತಿದೆ. ಇದು ವಿಜಯ್​ ನಟನೆಯ 67ನೇ ಸಿನಿಮಾ. ಹಾಗಾಗಿ ಇಷ್ಟು ದಿನ ತಾತ್ಕಾಲಿಕವಾಗಿ ‘ದಳಪತಿ 67’ ಎಂದು ಕರೆಯಲಾಗುತ್ತಿತ್ತು. ಈಗ ಈ ಚಿತ್ರಕ್ಕೆ ಅಧಿಕೃತವಾಗಿ ಶೀರ್ಷಿಕೆ ಅನಾವರಣ ಮಾಡಲಾಗಿದೆ. ಅದಕ್ಕಾಗಿ ಹೊಸ ಟೀಸರ್​ ಹಂಚಿಕೊಳ್ಳಲಾಗಿದ್ದು, ಆ ಮೂಲಕ ಟೈಟಲ್​ ಏನೆಂಬುದು ಬಹಿರಂಗ ಆಗಿದೆ. ಈ ಸಿನಿಮಾಗೆ ‘ಲಿಯೋ’ (Leo Movie) ಎಂದು ಹೆಸರು ಇಡಲಾಗಿದೆ. ಸದ್ಯ ಬಿಡುಗಡೆ ಆಗಿರುವ ಟೀಸರ್​ ಸಖತ್​ ವೈರಲ್​ ಆಗುತ್ತಿದೆ. ಈ ಸಿನಿಮಾಗೆ ಲೋಕೇಶ್​ ಕನಗರಾಜ್ (Lokesh Kanagaraj)​ ನಿರ್ದೇಶನ ಮಾಡುತ್ತಿದ್ದಾರೆ. ‘ವಿಕ್ರಮ್​’ ಸಿನಿಮಾದ ಭಾರಿ ಗೆಲುವಿನ ಬಳಿಕ ಅವರು ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

‘ಲಿಯೋ’ ಸಿನಿಮಾದ ಟೀಸರ್​ ನೋಡಿದ ಎಲ್ಲರಿಗೂ ‘ವಿಕ್ರಮ್​’ ಚಿತ್ರದ ಫೀಲ್​ ಸಿಗುತ್ತಿದೆ. ದಳಪತಿ ವಿಜಯ್​ ಅವರು ಒಂಟಿ ಮನೆಯಲ್ಲಿ ಚಾಕೊಲೇಟ್​ ಮತ್ತು ಖಡ್ಗ ತಯಾರಿಸುತ್ತಿರುವ ದೃಶ್ಯ ಈ ಟೀಸರ್​ನಲ್ಲಿ ಹೈಲೈಟ್​ ಆಗಿದೆ. ‘ಲಿಯೋ’ ಶೀರ್ಷಿಕೆಗೆ ‘ಬ್ಲಡಿ ಸ್ವೀಟ್​’ ಎಂಬ ಟ್ಯಾಗ್​ ಲೈನ್​ ಇದೆ. ಈ ಎಲ್ಲ ಕಾರಣಗಳಿಂದಾಗಿ ನಿರೀಕ್ಷೆ ಹೆಚ್ಚಾಗಿದೆ. ಇದು ಭರ್ಜರಿ ಸಾಹಸಪ್ರಧಾನ ಸಿನಿಮಾ ಎಂಬುದಕ್ಕೆ ಈ ಟೀಸರ್​ ಸಾಕ್ಷಿ ನೀಡುತ್ತಿದೆ.

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಇದನ್ನೂ ಓದಿ: ಯುವ ನಟಿಯ ಜತೆ ದಳಪತಿ ವಿಜಯ್ ಡೇಟಿಂಗ್​? ವಿಚ್ಛೇದನ ಸುದ್ದಿ ಹುಟ್ಟಲು ಇದುವೇ ಕಾರಣ

‘ಲಿಯೋ’ ಸಿನಿಮಾದಲ್ಲಿ ವಿಜಯ್​ಗೆ ಜೋಡಿಯಾಗಿ ತ್ರಿಷಾ ಕೃಷ್ಣನ್​ ನಟಿಸಲಿದ್ದಾರೆ. ಫೆಬ್ರವರಿ 1ರಂದು ಈ ಸಿನಿಮಾಗೆ ಮುಹೂರ್ತ ನೆರವೇರಿತು. ಈ ವೇಳೆ ಚಿತ್ರತಂಡದ ಹಲವರು ಭಾಗಿ ಆಗಿದ್ದರು. ಈ ಸಿನಿಮಾದಲ್ಲಿ ವಿಜಯ್​ ಮತ್ತು ತ್ರಿಷಾ ಜೊತೆ ಸಂಜಯ್​ ದತ್​, ಗೌತಮ್​ ವಾಸುದೇವ ಮೆನನ್​, ಮಿಸ್ಕಿನ್​, ಮನ್ಸೂರ್​ ಅಲಿ ಖಾನ್​, ಪ್ರಿಯಾ ಆನಂದ್​ ಮುಂತಾದವರು ನಟಿಸಲಿದ್ದಾರೆ. ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ‘ಲಿಯೋ’ ಸಿನಿಮಾ ಮೂಡಿಬರಲಿದೆ.

ಲೋಕೇಶ್​ ಕನಗರಾಜ್​ ಅವರು ದಳಪತಿ ವಿಜಯ್​ ಜೊತೆ ಈ ಹಿಂದೆ ‘ಮಾಸ್ಟರ್​’ ಸಿನಿಮಾ ಮಾಡಿದ್ದರು. ಅಲ್ಲದೇ ಅವರು ನಿರ್ದೇಶನ ಮಾಡಿದ್ದ ‘ಕೈದಿ’ ಹಾಗೂ ‘ವಿಕ್ರಮ್​’ ಸಿನಿಮಾಗಳ ಕಥೆಗೆ ಲಿಂಕ್​ ನೀಡಲಾಗಿತ್ತು. ಈಗ ಆ ಚಿತ್ರಗಳ ಜೊತೆಗೆ ‘ಲಿಯೋ’ ಕಥೆ ಕೂಡ ಕನೆಕ್ಟ್​ ಆಗಲಿದೆ ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ. ಆ ಬಗ್ಗೆ ಚಿತ್ರತಂಡದವರು ಇನ್ನಷ್ಟೇ ಬಾಯಿ ಬಿಡಬೇಕಿದೆ.

‘ಸೆವೆನ್​ ಗ್ರೀನ್​ ಸ್ಟುಡಿಯೋ’ ಮೂಲಕ ‘ಲಿಯೋ’ ಸಿನಿಮಾ ನಿರ್ಮಾಣ ಆಗುತ್ತಿದೆ. ಈಗಾಗಲೇ ಚಿತ್ರಕ್ಕೆ ಶೂಟಿಂಗ್​ ಮಾಡಲಾಗುತ್ತಿದೆ. ಚಿತ್ರೀಕರಣದ ಹಂತದಲ್ಲೇ ಒಟಿಟಿ ಮತ್ತು ಕಿರುತೆರೆ ಪ್ರಸಾರ ಹಕ್ಕುಗಳ ಬಿಸ್ನೆಸ್​ ನಡೆಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ