‘ವಾರಿಸು’, ‘ತುನಿವು’ ಒಟಿಟಿ ರಿಲೀಸ್ ದಿನಾಂಕ ರಿವೀಲ್​; ಇಲ್ಲಿದೆ ಮಾಹಿತಿ

‘ತುನಿವು’ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಮೊದಲೇ ಒಟಿಟಿಯತ್ತ ಹೆಜ್ಜೆ ಇಟ್ಟರೆ ‘ವಾರಿಸು’ 40 ದಿನಗಳ ಬಳಿಕ ಒಟಿಟಿಗೆ ಕಾಲಿಡಲಿದೆ.

‘ವಾರಿಸು’, ‘ತುನಿವು’ ಒಟಿಟಿ ರಿಲೀಸ್ ದಿನಾಂಕ ರಿವೀಲ್​; ಇಲ್ಲಿದೆ ಮಾಹಿತಿ
ದಳಪತಿ ವಿಜಯ್-ಅಜಿತ್ ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on: Feb 03, 2023 | 2:48 PM

ಸಂಕ್ರಾಂತಿ ಹಬ್ಬಕ್ಕೆ ದಳಪತಿ ವಿಜಯ್ (Thalapathy Vijay) ನಟನೆಯ ‘ವಾರಿಸು’ ಸಿನಿಮಾ ಹಾಗೂ ಅಜಿತ್ ಕುಮಾರ್ ನಟನೆಯ ‘ತುನಿವು’ ಸಿನಿಮಾಗಳು ತೆರೆಗೆ ಬಂದವು. ಎರಡೂ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿವೆ. ಈ ಎರಡೂ ಚಿತ್ರಗಳು ತಮಿಳುನಾಡಿನ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿವೆ. ಈಗ ಈ ಚಿತ್ರಗಳು ಒಟಿಟಿಗೆ ಕಾಲಿಡೋಕೆ ರೆಡಿ ಆಗಿವೆ. ತುನಿವು’ ಸಿನಿಮಾ (Thunivu Movie) ರಿಲೀಸ್ ಆಗಿ ಒಂದು ತಿಂಗಳು ಮೊದಲೇ ಒಟಿಟಿಯತ್ತ ಹೆಜ್ಜೆ ಇಟ್ಟರೆ ‘ವಾರಿಸು’ 40 ದಿನಗಳ ಬಳಿಕ ಒಟಿಟಿಗೆ ಕಾಲಿಡಲಿದೆ.

ಫೆಬ್ರವರಿ 8ಕ್ಕೆ ‘ತುನಿವು’

ಅಜಿತ್ ಕುಮಾರ್ ಹಾಗೂ ಎಚ್​. ವಿನೋದ್ ಕಾಂಬಿನೇಷನ್​ನಲ್ಲಿ ‘ತುನಿವು’ ಸಿನಿಮಾ ಮೂಡಿಬಂತು. ಇವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಮೂರನೇ ಚಿತ್ರ ಇದಾಗಿದೆ. ‘ನೇರ್ಕೊಂಡ ಪಾರ್ವೈ’, ‘ವಲಿಮೈ’ ಹಾಗೂ ‘ತುನಿವು’ ಚಿತ್ರಗಳು ಇವರ ಕಾಂಬಿನೇಷನ್​ನಲ್ಲಿ ಮೂಡಿ ಬಂದಿವೆ. ‘ತುನಿವು’ ಚಿತ್ರದಲ್ಲಿ ಮಂಜು ವಾರಿಯರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಫೆಬ್ರವರಿ 8ಕ್ಕೆ ಒಟಿಟಿಗೆ ಕಾಲಿಡುತ್ತಿರುವ ಬಗ್ಗೆ ನೆಟ್​ಫ್ಲಿಕ್ಸ್​ ತನ್ನ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಪ್ರಸಾರ ಕಾಣುತ್ತಿದೆ.

ವಾರಿಸು ಯಾವಾಗ?

‘ವಾರಿಸು’ ಸಿನಿಮಾ ಕೂಡ ಜನವರಿ 11ರಂದು ತೆರೆಗೆ ಬಂದಿತ್ತು. ಈ ಚಿತ್ರ ಸುಮಾರು 40 ದಿನಗಳ ಬಳಿಕ ಅಂದರೆ ಫೆಬ್ರವರಿ 22ರಂದು ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗುತ್ತಿದೆ. ‘ವಾರಿಸು’ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ವಿಜಯ್​ಗೆ ಜತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಪಕ್ಕಾ ಫ್ಯಾಮಿಲಿ ಎಂಟರ್​ಟೇನ್ ಮಾದರಿಯಲ್ಲಿ ಸಿನಿಮಾ ಮೂಡಿ ಬಂದಿತ್ತು.

ಇದನ್ನೂ ಓದಿ
Image
ಪೊಲೀಸ್ ಅಧಿಕಾರಿಯಾಗಿ ವಿಜಯ್ ದೇವರಕೊಂಡ ಕಂಬ್ಯಾಕ್; ಖ್ಯಾತ ನಿರ್ದೇಶಕನ ಜತೆ ಸಿನಿಮಾ
Image
Sapthami Gowda: ಬಾಲಿವುಡ್​ಗೆ ಕಾಲಿಟ್ಟ ಸಪ್ತಮಿ ಗೌಡ; ವಿವೇಕ್​ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದಲ್ಲಿ ‘ಕಾಂತಾರ’ ನಟಿ
Image
ಬಾಕ್ಸ್ ಆಫೀಸ್​​ನಲ್ಲಿ ‘ತುನಿವು’ ಚಿತ್ರ ಹಿಂದಿಕ್ಕಿದ ವಿಜಯ್ ಸಿನಿಮಾ ‘ವಾರಿಸು’

ಉಳಿದ ಚಿತ್ರಗಳು ಯಾವಾಗ?

ಸಂಕ್ರಾಂತಿ ಸಮಯದಲ್ಲಿ ತೆಲುಗಿನಲ್ಲಿ ‘ವೀರ ಸಿಂಹ ರೆಡ್ಡಿ’ ಹಾಗೂ ‘ವಾಲ್ತೇರು ವೀರಯ್ಯ’ ಚಿತ್ರಗಳು ತೆರೆಗೆ ಬಂದಿದ್ದವು. ಎರಡೂ ಚಿತ್ರಗಳನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಈ ಚಿತ್ರಗಳು ಒಳ್ಳೆಯ ಕಮಾಯಿ ಮಾಡಿವೆ. ಇವುಗಳ ಒಟಿಟಿ ರಿಲೀಸ್ ದಿನಾಂಕ ಇನ್ನಷ್ಟೇ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ