Harry Styles: ಶೂ ಒಳಗೆ ನೀರು ಹಾಕಿಕೊಂಡು ಕುಡಿದ ಗಾಯಕ ಹ್ಯಾರಿ ಸ್ಟೈಲ್ಸ್​; ವಿಡಿಯೋ ನೋಡಿ ಅಸಹ್ಯ ಎಂದ ನೆಟ್ಟಿಗರು

Harry Styles Viral Video: ‘ಇದು ಅತಿ ಅಸಹ್ಯ ಪದ್ಧತಿಗಳಲ್ಲಿ ಒಂದು’ ಎಂದು ಸ್ವತಃ ಹ್ಯಾರಿ ಸ್ಟೈಲ್ಸ್​ ಅವರೇ ಹೇಳಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಅವರ ವರ್ತನೆ ಕಂಡು ಎಲ್ಲರಿಗೂ ಶಾಕ್​ ಆಗಿದೆ.

Harry Styles: ಶೂ ಒಳಗೆ ನೀರು ಹಾಕಿಕೊಂಡು ಕುಡಿದ ಗಾಯಕ ಹ್ಯಾರಿ ಸ್ಟೈಲ್ಸ್​; ವಿಡಿಯೋ ನೋಡಿ ಅಸಹ್ಯ ಎಂದ ನೆಟ್ಟಿಗರು
ಹ್ಯಾರಿ ಸ್ಟೈಲ್ಸ್
Follow us
ಮದನ್​ ಕುಮಾರ್​
|

Updated on:Feb 21, 2023 | 4:44 PM

ಇಂಗ್ಲೆಂಡ್​ನ ಜನಪ್ರಿಯ ಗಾಯಕ, ನಟ, ಗೀತರಚನಕಾರ ಹ್ಯಾರಿ ಸ್ಟೈಲ್ಸ್​ (Harry Styles) ಅವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. 29ರ ಪ್ರಾಯದ ಈ ಗಾಯಕನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಗ್ರ್ಯಾಮಿ ಅವಾರ್ಡ್ಸ್​ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಹ್ಯಾರಿ ಸ್ಟೈಲ್ಸ್​ ಅವರು ಪ್ರಪಂಚದ ವಿವಿಧ ನಗರಗಳಿಗೆ ತೆರಳಿ ಸಂಗೀತ ಕಾರ್ಯಕ್ರಮ (Harry Styles Music Concert) ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಆಸ್ಟ್ರೇಲಿಯಾದಲ್ಲಿ ವೇದಿಕೆ ಏರಿ ಅಭಿಮಾನಿಗಳನ್ನು ರಂಜಿಸಿದರು. ಈ ವೇಳೆ ಅವರು ನಡೆದುಕೊಂಡ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಶೂ ಒಳಗೆ ನೀರು ಹಾಕಿಕೊಂಡು ಅವರು ಕುಡಿದಿದ್ದಾರೆ. ಹ್ಯಾರಿ ಸ್ಟೈಲ್​ ಅವರ ಈ ವೈರಲ್​ ವಿಡಿಯೋ (Harry Styles Viral Video) ನೋಡಿ ಬಹುತೇಕರು ಅಸಹ್ಯ ಪಟ್ಟುಕೊಂಡಿದ್ದಾರೆ. ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಸೆಲೆಬ್ರಿಟಿಗಳು ಈ ರೀತಿ ಮಾಡುವ ಪದ್ಧತಿ ಇದೆ. ಇದನ್ನು ಹ್ಯಾರಿ ಸ್ಟೈಲ್ಸ್​ ಕೂಡ ಮುಂದುವರಿಸಿದ್ದಾರೆ. ‘ಇದು ಅತಿ ಅಸಹ್ಯ ಪದ್ಧತಿಗಳಲ್ಲಿ ಒಂದು’ ಎಂದು ಅವರೇ ಹೇಳಿದ್ದಾರೆ. ಈ ರೀತಿ ಮಾಡಿದ ಬಳಿಕ ತಾವು ಹೊಸ ವ್ಯಕ್ತಿ ಎಂದು ಅವರಿಗೆ ಅನಿಸಿದೆಯಂತೆ. ಟ್ವಿಟರ್​ನಲ್ಲಿ ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಹ್ಯಾರಿ ಸ್ಟೈಲ್ಸ್​​ ಅವರ ಇಂಥ ವರ್ತನೆ ಕಂಡು ಎಲ್ಲರಿಗೂ ಶಾಕ್​ ಆಗಿದೆ.

ಇದನ್ನೂ ಓದಿ
Image
Bruce Willis: ಖ್ಯಾತ ಹಾಲಿವುಡ್​ ನಟನಿಗೆ ಬುದ್ಧಿಮಾಂದ್ಯತೆ; ಇದಕ್ಕೆ ಔಷಧಿಯೇ ಇಲ್ಲ ಎಂದ ವೈದ್ಯರು
Image
Grammy Awards 2023: ಗ್ರ್ಯಾಮಿ ಅವಾರ್ಡ್ ರೆಡ್ ಕಾರ್ಪೆಟ್​​​ನಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಂಡಿದ್ದು ಹೀಗೆ
Image
Ricky Kej: ಬೆಂಗಳೂರು ಮೂಲದ ರಿಕ್ಕಿ ಕೇಜ್​ಗೆ ಗ್ರ್ಯಾಮಿ ಅವಾರ್ಡ್​; 3 ಬಾರಿ ಪ್ರಶಸ್ತಿ ಗೆದ್ದ ಭಾರತೀಯ
Image
Miley Cyrus: ಬೆತ್ತಲೆಯಾಗಿ ಬಾತ್​ ರೂಂ ವಿಡಿಯೋ ಹಂಚಿಕೊಂಡ ನಟಿ ಮೈಲಿ ಸೈರಸ್​; ನೆಟ್ಟಿಗರಿಂದ ಕಟು ಟೀಕೆ

ಇದನ್ನೂ ಓದಿ: Video: ವೇದಿಕೆ ಮೇಲೆ ಪ್ಯಾಂಟ್​ ಬಿಚ್ಚಿ ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಗಾಯಕಿ; ವಿಕೃತಿ ವಿರುದ್ಧ ನೆಟ್ಟಿಗರ ಆಕ್ರೋಶ

ಹ್ಯಾರಿ ಸ್ಟೈಲ್ಸ್​ ಅವರು ಆಸ್ಟ್ರೇಲಿಯಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು ಇದೇ ಮೊದಲು. ಹಾಗಾಗಿ ಅವರು ಅಲ್ಲಿನ ಜನರ ಜೊತೆ ಬೆರೆಯುವ ಪ್ರಯತ್ನ ಮಾಡಿದ್ದಾರೆ. ಶೂ ಒಳಗೆ ನೀರು ಹಾಕಿಕೊಂಡು ಕುಡಿದರೆ ಹೆಚ್ಚು ಜನರನ್ನು ಆಕರ್ಷಿಸಬಹುದು ಎಂಬ ಕಾರಣದಿಂದಲೇ ಅವರು ಈ ರೀತಿ ಮಾಡಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

2010ರಲ್ಲಿ ಹ್ಯಾರಿ ಸ್ಟೈಲ್ಸ್​ ಅವರ ಸಂಗೀತ ಪಯಣ ಆರಂಭ ಆಯಿತು. ‘ಒನ್​ ಡೈರೆಕ್ಷನ್​’ ಮ್ಯೂಸಿಕ್​ ಬ್ಯಾಂಡ್​ ಜೊತೆ ಅವರು ಗುರುತಿಸಿಕೊಂಡಿದ್ದಾರೆ. ಹಲವು ಸೂಪರ್​ ಹಿಟ್​ ಗೀತೆಗಳನ್ನು ಅವರು ನೀಡಿದ್ದಾರೆ. ಜಾಗತಿಕ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡು ಅವರು ಫೇಮಸ್​ ಆಗಿದ್ದಾರೆ.

ಅಮೆರಿಕನ್​ ಮ್ಯೂಸಿ​ಕ್​ ಅವಾರ್ಡ್​, ಆರ್ಟ್​ ಡೈರೆಕ್ಟರ್ಸ್​ ಗಿಲ್ಡ್​ ಅವಾರ್ಡ್​, ಬಿಲ್​ಬೋರ್ಡ್​ ಮ್ಯೂಸಿಕ್​ ಅವಾರ್ಡ್​, ಬಿಎಂಐ ಲಂಡನ್​ ಅವಾರ್ಡ್ಸ್​, ಬಿಎಂಐ ಪಾಪ್​ ಅವಾರ್ಡ್ಸ್​, ದಿ ಫ್ಯಾಷನ್​ ಅವಾರ್ಡ್ಸ್​, ಗ್ರ್ಯಾಮಿ ಅವಾರ್ಡ್​ ಸೇರಿದಂತೆ ಹಲವು ಪ್ರಶಸ್ತಿಗಳು ಹ್ಯಾರಿ ಸ್ಟೈಲ್ಸ್​ ಅವರನ್ನು ಅರಸಿ ಬಂದಿವೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 4.8 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:39 pm, Tue, 21 February 23

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ