‘ನಾಟು ನಾಟು..’ ಹಾಡಿನ ಸೆಳೆತಕ್ಕೆ ಸಿಕ್ಕ ಆಲಿಯಾ ಭಟ್; ರಶ್ಮಿಕಾ ಜೊತೆ ಹೆಜ್ಜೆ ಹಾಕಿದ ಸುಂದರಿ
NMACC Event: ಕಲರ್ಫುಲ್ ಕಾರ್ಯಕ್ರಮದಲ್ಲಿ ‘ನಾಟು ನಾಟು..’ ಹಾಡಿಗೆ ಡ್ಯಾನ್ಸ್ ಮಾಡಲು ರಶ್ಮಿಕಾ ಮಂದಣ್ಣ ಅವರು ವೇದಿಕೆ ಏರಿದರು. ಅವರ ಜೊತೆ ಆಲಿಯಾ ಭಟ್ ಕೂಡ ಸಾಥ್ ನೀಡಿದರು.

ಎಂಎಂ ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ‘ನಾಟು ನಾಟು..’ (Naatu Naatu) ಹಾಡಿನ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಈ ಹಾಡು ವಿಶ್ವಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ‘ಆರ್ಆರ್ಆರ್’ ಸಿನಿಮಾ ರಿಲೀಸ್ ಆದಾಗಲೇ ಭಾರತದಲ್ಲಿ ‘ನಾಟು ನಾಟು..’ ಹಾಡಿನ ಹವಾ ಜೋರಾಗಿತ್ತು. ಇದೇ ಗೀತೆಯ ಹಿಂದಿ ವರ್ಷನ್ ‘ನಾಚೋ ನಾಚೋ..’ ಕೂಡ ಸಿಕ್ಕಾಪಟ್ಟೆ ಫೇಮಸ್. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ‘ನಾಟು ನಾಟು..’ ಗೀತೆಯ ಸೆಳೆತದಿಂದ ನಟಿ ಆಲಿಯಾ ಭಟ್ (Alia Bhatt) ಕೂಡ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇತ್ತೀಚೆಗೆ ನಡೆದ ಒಂದು ಕಲರ್ಫುಲ್ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಆಲಿಯಾ ಭಟ್ ಅವರು ಈ ಹಾಡಿಗೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್’ ಉದ್ಘಾಟನಾ ಸಮಾರಂಭ ಬಹಳ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ಕಲಾವಿದರು ಕೂಡ ಭಾಗಿ ಆಗಿದ್ದಾರೆ. ಇದರಲ್ಲಿ ಹಲವು ಬಗೆಯ ಮನರಂಜನಾ ಕಾರ್ಯಕ್ರಮಗಳು, ಫ್ಯಾಷನ್ ಶೋಗಳು ನಡೆದಿವೆ. ಇದೇ ಇವೆಂಟ್ನಲ್ಲಿ ‘ನಾಟು ನಾಟು..’ ಹಾಡಿಗೆ ಡ್ಯಾನ್ಸ್ ಮಾಡಲು ರಶ್ಮಿಕಾ ಮಂದಣ್ಣ ಅವರು ವೇದಿಕೆ ಏರಿದರು. ಅವರ ಜೊತೆ ಆಲಿಯಾ ಭಟ್ ಕೂಡ ಸಾಥ್ ನೀಡಿದರು.
‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲೋಕೆ ನಾನೇ ಕಾರಣ ಎಂದ ಅಜಯ್ ದೇವಗನ್
‘ನಾಚೋ ನಾಚೋ..’ ಹಾಡು ಕೇಳುತ್ತಿದ್ದಂತೆಯೇ ಆಲಿಯಾ ಭಟ್ ಅವರಿಗೆ ಎಗ್ಸೈಟ್ಮೆಂಟ್ ತಡೆದುಕೊಳ್ಳಲು ಆಗಲಿಲ್ಲ. ತಾವು ಹಾಕಿಕೊಂಡಿದ್ದ ಹೈ ಹೀಲ್ಸ್ ಚಪ್ಪಲಿಯನ್ನು ಕೂಡಲೇ ಕಿತ್ತೆಸೆದು, ವೇದಿಕೆಯಲ್ಲಿ ಡ್ಯಾನ್ಸ್ ಮಾಡಲು ಆರಂಭಿಸಿದರು. ಅವರ ಜೊತೆ ರಶ್ಮಿಕಾ ಮಂದಣ್ಣ ಮತ್ತು ಇತರೆ ಡ್ಯಾನ್ಸರ್ಸ್ ಕೂಡ ಹೆಜ್ಜೆ ಹಾಕಿದರು. ‘ನಾಟು ನಾಟು..’ ಹಾಡಿನ ಕ್ರೇಜ್ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
#Rashmika dominating #Aliya in #dance. Is there anyone to compete with #RashmikaMandanna? This is Rashika’s hot Era in Indian film industry.#Rashmikamandanahot #telugu #hindi #telugu #moviescene #tollywood #bollywood #Dasara #AlluArjun #Rashmikahot #IPL2023 #ipl #RamCharan pic.twitter.com/hR19DusstA
— Film Media (@9BlueRedMedia) April 2, 2023
ಆಲಿಯಾ ಭಟ್ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿದ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚಿದ್ದಾರೆ. ಕೆಲವೇ ತಿಂಗಳ ಹಿಂದೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಬಳಿಕ ಅವರು ಬ್ರೇಕ್ ತೆಗೆದುಕೊಳ್ಳಬಹುದು ಎಂದು ಊಹಿಸಲಾಗಿತ್ತು. ಆದರೆ ಅವರು ಹೆಚ್ಚು ಗ್ಯಾಪ್ ಮಾಡಿಲ್ಲ. ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದ್ದಾರೆ. ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಅವರ ರಣವೀರ್ ಸಿಂಗ್ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.