ಮುಂದಿನ ಮುಂಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ‘ಭಾಗ್ಯದ ಬಳೆಗಾರ ಬಾ ನನ್ನ​ ತವರಿಗೆ’ ಧಾಟಿಯಲ್ಲಿ ರಚಿಸಿ, ಸುಶ್ರಾವ್ಯವಾಗಿ ಹಾಡಿದ ಶ್ರೀನಿವಾಸಪುರ ಅಕ್ಬರ್​!

ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದ್ದು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಿಂದ ಯಾರು ಸಿಎಂ ಆಗಬೇಕು ಅನ್ನೋ ಜಟಾಪಟಿ ನಡೆಯುತ್ತಿರುವಾಗಲೇ ಸಿಎಂ ರೇಸ್‌ನಲ್ಲಿರುವ ಸಿದ್ದರಾಮಯ್ಯ ಅವರಿಗೆ ಶ್ರೀನಿವಾಸಪುರ ಮೂಲದ ಅವರ ಅಭಿಮಾನಿಯೊಬ್ಬ ಅರ್ಥಪೂರ್ಣ ಹಾಡೊಂದು ರಚಿಸಿ ಸಿದ್ದುಗೆ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಿದ್ದರಾಮಯ್ಯ ಕುರಿತು ಅರ್ಥಪೂರ್ಣ ಹಾಡಿಗೆ ಸಾಹಿತ್ಯ ರಚನೆ ಮಾಡಿ, ಜಾನಪದ ಶೈಲಿಯ ಹಾಡೊಂದನ್ನು ಹಾಡುವ ಮೂಲಕ ಸಿದ್ದರಾಮಯ್ಯ ಅಭಿಮಾನಿಯೊಬ್ಬ ಗಮನ ಸೆಳೆದಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಯಡಗಾನಪಲ್ಲಿ ಗ್ರಾಮದ […]

ಮುಂದಿನ ಮುಂಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ‘ಭಾಗ್ಯದ ಬಳೆಗಾರ ಬಾ ನನ್ನ​ ತವರಿಗೆ’ ಧಾಟಿಯಲ್ಲಿ ರಚಿಸಿ, ಸುಶ್ರಾವ್ಯವಾಗಿ ಹಾಡಿದ ಶ್ರೀನಿವಾಸಪುರ ಅಕ್ಬರ್​!
ಸಿದ್ದರಾಮಯ್ಯ ಕುರಿತು ‘ಭಾಗ್ಯದ ಬಳೆಗಾರ ಬಾ ನನ್ನ​ ತವರಿಗೆ’ ಧಾಟಿಯಲ್ಲಿ ರಚಿಸಿ, ಸುಶ್ರಾವ್ಯವಾಗಿ ಹಾಡಿದ ಶ್ರೀನಿವಾಸಪುರ ಅಕ್ಬರ್​!
Follow us
ಸಾಧು ಶ್ರೀನಾಥ್​
|

Updated on: May 18, 2023 | 10:45 AM

ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದ್ದು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಿಂದ ಯಾರು ಸಿಎಂ ಆಗಬೇಕು ಅನ್ನೋ ಜಟಾಪಟಿ ನಡೆಯುತ್ತಿರುವಾಗಲೇ ಸಿಎಂ ರೇಸ್‌ನಲ್ಲಿರುವ ಸಿದ್ದರಾಮಯ್ಯ ಅವರಿಗೆ ಶ್ರೀನಿವಾಸಪುರ ಮೂಲದ ಅವರ ಅಭಿಮಾನಿಯೊಬ್ಬ ಅರ್ಥಪೂರ್ಣ ಹಾಡೊಂದು ರಚಿಸಿ ಸಿದ್ದುಗೆ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಿದ್ದರಾಮಯ್ಯ ಕುರಿತು ಅರ್ಥಪೂರ್ಣ ಹಾಡಿಗೆ ಸಾಹಿತ್ಯ ರಚನೆ ಮಾಡಿ, ಜಾನಪದ ಶೈಲಿಯ ಹಾಡೊಂದನ್ನು ಹಾಡುವ ಮೂಲಕ ಸಿದ್ದರಾಮಯ್ಯ ಅಭಿಮಾನಿಯೊಬ್ಬ ಗಮನ ಸೆಳೆದಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಯಡಗಾನಪಲ್ಲಿ ಗ್ರಾಮದ ಪ್ರಖ್ಯಾತ ಹಾಡುಗಾರ ಅಕ್ಬರ್ ಅವರು ಸಿದ್ದರಾಮಯ್ಯ ಅವರ ಮೇಲೆ ಹಾಡೊಂದನ್ನು ರಚಿಸಿ, ಹಾಡಿದ್ದಾರೆ.

ಅಕ್ಬರ್ ಮೂಲತ: ಒಳ್ಳೆಯ ಹಾಡುಗಾರ. ರಾಜ್ಯದ ಹಲವು ಭಾಗಗಳಲ್ಲಿ ವಿವಿಧ ಸಂಗೀತ ಕಾರ್ಯಕ್ರಮಗಳ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಅದರಲ್ಲೂ ಹೆಚ್ಚಾಗಿ ಪೊಲೀಸ್ ಇಲಾಖೆಯ ಕಾರ್ಯಕ್ರಮಗಳಲ್ಲಿ ಅಕ್ಬರ್ ಅವರ ಹಾಡುಗಾರಿಕೆ ಇದ್ದೇ ಇರುತ್ತದೆ. ಅದೆಲ್ಲದಕ್ಕೂ ಮುಖ್ಯವಾಗಿ ಸಂಗೀತ ಲೋಕದ ದೈತ್ಯ ಹಾಡುಗಾರ ಪ್ರಪಂಚದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಎಸ್​.ಪಿ. ಬಾಲಸುಬ್ರಮಣ್ಯಂ ಅವರ ಶಿಷ್ಯ ಅನ್ನೋದು ವಿಶೇಷ.

ಅಕ್ಬರ್ ಅವರು ತೆಲುಗು ಭಾಷೆಯ ಸೂಪರ್ ಡೂಪರ್​ ಕ್ಲಾಸಿಕಲ್​​ ಮೂವಿ ಶಂಕರಾಭರಣಂ ಇತ್ತೀಚೆಗೆ ಕನ್ನಡ ಅವತರಣಿಕೆ ರಿಲೀಸ್​ ಆಗಿದೆ. ಅದರಲ್ಲಿ ಅಕ್ಬರ್ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ ಅನ್ನೋದು ಕೋಲಾರ ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ವಿಚಾರ. ಅಷ್ಟೇ ಅಲ್ಲದೆ ಕೆ ವಿಶ್ವನಾಥ್​​ ಅವರ ಅಪ್ಪ್ಟ ಅಭಿಮಾನಿಯಾದ ಅಕ್ಬರ್​​, ವಿಶ್ವನಾಥ್​​ ಅವರ ಬಹಗಳಷ್ಟು ಕನ್ನಡ ಸಿನಿಮಾ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಹೀಗೆ ಹಲವು ವಿಚಾರಗಳಲ್ಲಿ ತಮ್ಮದೇ ಆದ ಹೆಸರು ಮಾಡಿರುವ ಅಕ್ಬರ್ ಅವರು ಸಿದ್ದರಾಮಯ್ಯ ಅವರ ವಿಶೇಷ ಅಭಿಮಾನಿ. ಹಾಗಾಗಿ ಭಾಗ್ಯದ ಬಳೆಗಾರ ಹೋಗಿ ಬಾ ನನ್​ ತವರಿಗೆ ಅನ್ನೋ ಜಾನಪದ ಶೈಲಿಯ ಹಾಡಿಗೆ, ಸಿದ್ದರಾಮಯ್ಯ ಅವರ ಕುರಿತು ಸಾಹಿತ್ಯದ ಸಾಲುಗಳನ್ನು ಜೋಡಿಸಿ ಅದ್ಭುತವಾಗಿ, ಅರ್ಥಪೂರ್ಣವಾಗಿ ಹಾಡಿದ್ದಾರೆ ಅಕ್ಬರ್​.

ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ