AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ajith Kumar: ‘ಅಜಿತ್​ ಒಳ್ಳೆಯ ಮನುಷ್ಯ ಅಲ್ಲ, ನನ್ನ ದುಡ್ಡು ವಾಪಸ್​ ಕೊಟ್ಟಿಲ್ಲ’: ನಿರ್ಮಾಪಕನ ಗಂಭೀರ ಆರೋಪ

Manickam Narayanan: ‘ತನ್ನನ್ನು ತಾನು ಒಳ್ಳೆಯವನು ಅಂತ ಅಜಿತ್​ ಕುಮಾರ್​ ಹೇಳಿಕೊಳ್ಳುತ್ತಾರೆ. ಆದರೆ ಅವರು ಒಳ್ಳೆಯ ಮನುಷ್ಯ ಅಲ್ಲ’ ಎಂದು ನಿರ್ಮಾಪಕ ಮಾಣಿಕಂ ನಾರಾಯಣನ್​ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

Ajith Kumar: ‘ಅಜಿತ್​ ಒಳ್ಳೆಯ ಮನುಷ್ಯ ಅಲ್ಲ, ನನ್ನ ದುಡ್ಡು ವಾಪಸ್​ ಕೊಟ್ಟಿಲ್ಲ’: ನಿರ್ಮಾಪಕನ ಗಂಭೀರ ಆರೋಪ
ಅಜಿತ್​ ಕುಮಾರ್​
ಮದನ್​ ಕುಮಾರ್​
|

Updated on: Jul 11, 2023 | 7:00 PM

Share

ಸ್ಯಾಂಡಲ್​ವುಡ್​ ನಟ ಸುದೀಪ್​ ಅವರ ಮೇಲೆ ನಿರ್ಮಾಪಕ ಎಂ.ಎನ್​. ಕುಮಾರ್​ ಅವರು ಆರೋಪ ಮಾಡಿದ್ದು ಇತ್ತೀಚೆಗೆ ದೊಡ್ಡ ಸುದ್ದಿ ಆಯಿತು. ಸುದೀಪ್​ ಅವರು ಅಡ್ವಾನ್ಸ್​ ಹಣ ಪಡೆದು ಕಾಲ್​ಶೀಟ್​ ನೀಡಿಲ್ಲ ಎಂದು ಕುಮಾರ್​ ಅವರು ಆರೋಪಿಸಿದರು. ಈಗ ಕಾಲಿವುಡ್​ನಲ್ಲೂ (Kollywood) ಅದೇ ರೀತಿಯು ವಿವಾದ ಭುಗಿಲೆದ್ದಿದೆ. ತಮಿಳು ಚಿತ್ರರಂಗದ ಸ್ಟಾರ್​ ನಟ ಅಜಿತ್​ ಕುಮಾರ್​ (Ajith Kumar) ಅವರು ತಮಗೆ ಮೋಸ ಮಾಡಿದ್ದಾರೆ ಎಂದು ಮಾಣಿಕಂ ನಾರಾಯಣನ್​ (Manickam Narayanan) ಆರೋಪ ಹೊರಿಸಿದ್ದಾರೆ. ತಮ್ಮಿಂದ ಹಣ ಪಡೆದು, ಸಿನಿಮಾ ಮಾಡದೇ ಸತಾಯಿಸಿದ್ದಾರೆ ಎಂದು ನಾರಾಯಣನ್​ ಹೇಳಿರುವುದು ಸಂಚಲನ ಸೃಷ್ಟಿ ಮಾಡಿದೆ.

ಕಮಲ್​ ಹಾಸನ್​ ಅವರಂತಹ ಸ್ಟಾರ್​ ನಟರ ಅನೇಕ ಸಿನಿಮಾಗಳಿಗೆ ಮಾಣಿಕಂ ನಾರಾಯಣನ್​ ಅವರು ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಜಿತ್​ ಕುಮಾರ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಅಜಿತ್​ ಅವರು ಬಹಳ ವರ್ಷಗಳ ಹಿಂದೆ ತಂದೆ-ತಾಯಿಯನ್ನು ಮಲೇಷಿಯಾಗೆ ಕಳಿಸಲು ನನ್ನಿಂದ ಹಣ ಪಡೆದಿದ್ದರು. ಮುಂದಿನ ದಿನಗಳಲ್ಲಿ ಒಟ್ಟಿಗೆ ಸಿನಿಮಾ ಮಾಡೋಣ, ಈ ಹಣವನ್ನು ಸಂಭಾವನೆಗೆ ಸರಿ ಮಾಡಿಕೊಳ್ಳೋಣ ಅಂತ ಅವರು ಹೇಳಿದ್ದರು. ಇಂದಿನ ತನಕ ಅವರ ನನ್ನ ಜೊತೆ ಸಿನಿಮಾವನ್ನೂ ಮಾಡಿಲ್ಲ, ಹಣವನ್ನೂ ಹಿಂದಿರುಗಿಸಿಲ್ಲ’ ಎಂದು ಮಾಣಿಕಂ ನಾರಾಯಣನ್​ ಅವರು ಹೇಳಿದ್ದಾರೆ.

Sudeep: ನಿರ್ಮಾಪಕರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಪ್ರತಿಭಟನೆ ಮಾಡಿದ ಕಿಚ್ಚ ಸುದೀಪ್​ ಅಭಿಮಾನಿಗಳು

‘ಈ ಬಗ್ಗೆ ಅಜಿತ್​ ಅವರು ಇಷ್ಟು ವರ್ಷಗಳ ತನಕ ಮಾತನಾಡಿಲ್ಲ. ತನ್ನನ್ನು ತಾನು ಒಳ್ಳೆಯವನು ಅಂತ ಅವರು ಹೇಳಿಕೊಳ್ಳುತ್ತಾರೆ. ಆದರೆ ಅವರು ಒಳ್ಳೆಯ ಮನುಷ್ಯ ಅಲ್ಲ. ಅವರದ್ದು ಒಳ್ಳೆಯ ಕುಟುಂಬ. ವರ್ಷಕ್ಕೆ ಅವರು 50 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ. ಹೀಗಿರುವಾಗ ಅವರು ಜನರಿಗೆ ಯಾಕೆ ಮೋಸ ಮಾಡಬೇಕು? ಅವರ ಜೊತೆ ಸಿನಿಮಾ ಮಾಡಿದ ನಿರ್ಮಾಪಕರಿಗೆ ನಷ್ಟ ಆಗಿದೆ. ಹಾಗಿದ್ದರೂ ಕೂಡ ಅವರು ನಿರ್ಮಾಪಕರಿಗೆ ಸಹಾಯ ಮಾಡಿಲ್ಲ’ ಎಂದು ಮಾಣಿಕಂ ನಾರಾಯಣನ್​ ಹೇಳಿದ್ದಾರೆ.

​ಕೀಳು ಮಟ್ಟಕ್ಕೆ ಬಂತು ಫ್ಯಾನ್ಸ್​ ವಾರ್​; ದಳಪತಿ ವಿಜಯ್​ ನಿಧನ ಎಂದು ಫೇಕ್​ ನ್ಯೂಸ್​ ಹಬ್ಬಿಸಿದ ಅಜಿತ್​ ಫ್ಯಾನ್ಸ್​

ಅಜಿತ್​ ಅವರು ಸಿನಿಮಾಗಳ ಜೊತೆಗೆ ಪ್ರವಾಸಕ್ಕೆ ಹೆಚ್ಚು ಸಮಯ ನೀಡುತ್ತಾರೆ. ವಿಶ್ವದ ಹಲವು ದೇಶಗಳಲ್ಲಿ ಅವರು ಬೈಕ್​ ರೈಡ್​ ಮಾಡಿದ್ದಾರೆ. ಪ್ರಸ್ತುತ ಅವರು ಸ್ವಿಡ್ಜರ್​ಲ್ಯಾಂಡ್​ನಲ್ಲಿದ್ದಾರೆ. ಮಾಣಿಕಂ ನಾರಾಯಣನ್​ ಹೊರಿಸಿದ ಆರೋಪಗಳಿಗೆ ಅಜಿತ್​ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮಾಣಿಕಂ ನಾರಾಯಣನ್​ ಅವರ ಸಂದರ್ಶನದ ವಿಡಿಯೋ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?