ಚಿರಂಜೀವಿ ಜನ್ಮದಿನಕ್ಕೆ ಘೋಷಣೆ ಆಯ್ತು ಹೊಸ ಸಿನಿಮಾ; 157ನೇ ಚಿತ್ರಕ್ಕೆ ನಿರ್ದೇಶಕ ಯಾರು?

ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಯುವಿ ಕ್ರಿಯೇಷನ್ಸ್‌’ ಮೂಲಕ #Mega157 ಸಿನಿಮಾ ಮೂಡಿಬರಲಿದೆ. ‘ಮೆಗಾ ಸ್ಟಾರ್​’ ಚಿರಂಜೀವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾ ಅನೌನ್ಸ್​ ಆಗಿದೆ. ಸದ್ಯಕ್ಕೆ ಬಿಡುಗಡೆ ಆಗಿರುವ ಪೋಸ್ಟರ್​ ವಿನ್ಯಾಸ ಗಮನ ಸೆಳೆಯುತ್ತಿದೆ. ಇದು ಫ್ಯಾಂಟಸಿ ಕಥಾಹಂದರದ ಸಿನಿಮಾ ಆಗಿರಲಿದೆ.

ಚಿರಂಜೀವಿ ಜನ್ಮದಿನಕ್ಕೆ ಘೋಷಣೆ ಆಯ್ತು ಹೊಸ ಸಿನಿಮಾ; 157ನೇ ಚಿತ್ರಕ್ಕೆ ನಿರ್ದೇಶಕ ಯಾರು?
ಮೆಗಾಸ್ಟಾರ್​ ಚಿರಂಜೀವಿ
Follow us
ಮದನ್​ ಕುಮಾರ್​
|

Updated on: Aug 22, 2023 | 12:28 PM

ಖ್ಯಾತ ನಟ ಮೆಗಾ ಸ್ಟಾರ್​ ಚಿರಂಜೀವಿ (Megastar Chiranjeevi) ಅವರಿಗೆ ಇಂದು (ಆಗಸ್ಟ್​ 22) ಜನ್ಮದಿನದ ಸಂಭ್ರಮ. ಅಭಿಮಾನಿಗಳು ಈ ದಿನವನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಚಿರಂಜೀವಿ ಅವರ ಹೊಸ ಸಿನಿಮಾ ಬಗ್ಗೆ ಮಾಹಿತಿ ಬಹಿರಂಗ ಆಗಿದೆ. ನೂರಾರು ಸಿನಿಮಾಗಳ ಮೂಲಕ ಜನರನ್ನು ರಂಜಿಸಿರುವ ಚಿರಂಜೀವಿ ಅವರು ಈಗ 157ನೇ ಸಿನಿಮಾಗೆ (#Mega157) ಸಜ್ಜಾಗುತ್ತಿದ್ದಾರೆ. ಅವರ ಹುಟ್ಟುಹಬ್ಬದ (Chiranjeevi Birthday) ದಿನವೇ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ವಿಶೇಷ ವಿನ್ಯಾಸದಿಂದ ಈ ಪೋಸ್ಟರ್​ ಗಮನ ಸೆಳೆಯುತ್ತಿದೆ. ದೊಡ್ಡ ಬ್ಯಾನರ್​ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯುವ ನಿರ್ದೇಶಕ ವಸಿಷ್ಠ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ.

1990ರಲ್ಲಿ ಚಿರಂಜೀವಿ ಮತ್ತು ಶ್ರೀದೇವಿ ಅವರು ‘ಜಗದೇಕ ವೀರುಡು ಅತಿಲೋಕ ಸುಂದರಿ’ ಸಿನಿಮಾದಲ್ಲಿ ನಟಿಸಿದ್ದರು. ಫ್ಯಾಂಟಸಿ ಕಥಾಹಂದರ ಹೊಂದಿದ್ದ ಆ ಚಿತ್ರವನ್ನು ಪ್ರೇಕ್ಷಕರು ಬಹಳ ಮೆಚ್ಚಿಕೊಂಡಿದ್ದರು. ಟಾಲಿವುಡ್​ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದಾಗಿ ಈ ಸಿನಿಮಾ ಉಳಿದುಕೊಂಡಿದೆ. ಈಗ ಅದೇ ರೀತಿಯ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲು ಚಿರಂಜೀವಿ ತಯಾರಿ ಮಾಡಿಕೊಂಡಿದ್ದಾರೆ. ಅವರ 157ನೇ ಚಿತ್ರದಲ್ಲಿ ಅಂತಹ ಕಥಾಹಂದರ ಇರಲಿದೆ ಎಂಬುದು ವಿಶೇಷ. ಆ ಕಾರಣದಿಂದ ಅಭಿಮಾನಿಗಳಲ್ಲಿ ಈ ಪ್ರಾಜೆಕ್ಟ್​ ಬಗ್ಗೆ ಕುತೂಹಲ ಮೂಡಿದೆ.

ಯುವಿ ಕ್ರಿಯೇಷನ್ಸ್​ ಟ್ವೀಟ್​:

2022ರಲ್ಲಿ ತೆಲುಗಿನ ‘ಬಿಂಬಿಸಾರ’ ಸಿನಿಮಾ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದ ವಸಿಷ್ಠ ಅವರಿಗೆ ಈಗ ಬಂಪರ್​ ಚಾನ್ಸ್​ ಸಿಕ್ಕಿದೆ. ಚಿರಂಜೀವಿ ನಟನೆಯ 157ನೇ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುವ ಅವಕಾಶವನ್ನು ಅವರು ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಈ ಸಿನಿಮಾವನ್ನು #Mega157 ಎಂದು ಕರೆಯಲಾಗುತ್ತಿದೆ. ಶೀಘ್ರದಲ್ಲೇ ಶೀರ್ಷಿಕೆ ಏನು ಎಂಬುದು ಬಹಿರಂಗ ಆಗಲಿದೆ. ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಇದ್ದಾರೆ? ಚಿರಂಜೀವಿ ಜೊತೆ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ.

‘ಮೆಗಾ ಸ್ಟಾರ್​’ ಚಿರಂಜೀವಿಗೆ ದೆಹಲಿಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ; ಬೇಕಿದೆ ಒಂದು ವಾರ ವಿಶ್ರಾಂತಿ

ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಯುವಿ ಕ್ರಿಯೇಷನ್ಸ್‌’ ಮೂಲಕ ವಿ. ವಂಶಿಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಲಪಟ್ಟಿ ಹಾಗೂ ವಿಕ್ರಮ್ ರೆಡ್ಡಿ ಅವರು ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಚಿರಂಜೀವಿ ಅವರ ಸಿನಿಪಯಣದಲ್ಲಿ ಇದು ಅತ್ಯಂತ ದುಬಾರಿ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಿದೆ. ನಿರ್ದೇಶಕ ವಸಿಷ್ಠ ಈ ಚಿತ್ರದಲ್ಲಿ ಬೇರೆಯದೇ ಲೋಕವನ್ನು ಪರಿಚಯಿಸಲಿದ್ದಾರೆ. ಬೆಂಕಿ, ಭೂಮಿ, ಗಾಳಿ, ನೀರು, ಆಕಾಶ ಮುಂತಾದ ಅಂಶಗಳನ್ನು ಸೇರಿಸಿ, ತ್ರಿಶೂಲದೊಂದಿಗೆ ನಕ್ಷತ್ರಾಕಾರದಲ್ಲಿ ವಿನ್ಯಾಸಗೊಂಡಿರುವ #Mega157 ಸಿನಿಮಾದ ಪೋಸ್ಟರ್​ ಗಮನ ಸೆಳೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ