Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೆಗಾ ಸ್ಟಾರ್​’ ಚಿರಂಜೀವಿಗೆ ದೆಹಲಿಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ; ಬೇಕಿದೆ ಒಂದು ವಾರ ವಿಶ್ರಾಂತಿ

ನಟ ಚಿರಂಜೀವಿ ಅವರ ಆರೋಗ್ಯದ ಬಗ್ಗೆ ಗಾಸಿಪ್​ಗಳು ಕೇಳಿಬಂದಿದ್ದರಿಂದ ಅಭಿಮಾನಿಗಳು ಚಿಂತೆಗೆ ಒಳಗಾಗಿದ್ದರು. ಬೆಂಗಳೂರಿನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು ಎಂದು ಕೂಡ ಹೇಳಲಾಗಿತ್ತು. ಆದರೆ ಈಗ ಅವರು ದೆಹಲಿಯಲ್ಲಿ ಆಪರೇಷನ್​ ಮಾಡಿಸಿಕೊಂಡಿರುವುದು ಖಚಿತವಾಗಿದೆ. ಸದ್ಯಕ್ಕೆ ಅಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.

‘ಮೆಗಾ ಸ್ಟಾರ್​’ ಚಿರಂಜೀವಿಗೆ ದೆಹಲಿಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ; ಬೇಕಿದೆ ಒಂದು ವಾರ ವಿಶ್ರಾಂತಿ
ಮೆಗಾಸ್ಟಾರ್​ ಚಿರಂಜೀವಿ
Follow us
ಮದನ್​ ಕುಮಾರ್​
|

Updated on: Aug 16, 2023 | 3:19 PM

ಟಾಲಿವುಡ್​ನ ಖ್ಯಾತ ನಟ ‘ಮೆಗಾ ಸ್ಟಾರ್’ ಚಿರಂಜೀವಿ (Mega Star Chiranjeevi) ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್​ ಮಾಡಲಾಗಿದೆ. ಒಂದು ವಾರಗಳ ಕಾಲ ಅವರು ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಒಂದು ವಾರದ ನಂತರ ಹೈದರಾಬಾದ್‌ಗೆ ವಾಪಸ್​ ಬರಲಿದ್ದಾರೆ ಎಂದು ಸುದ್ದಿ ಆಗಿದೆ. ಚಿರಂಜೀವಿ ಅವರಿಗೆ ಆಗಾಗ ಮೊಣಕಾಲು ನೋವು (Knee Pain) ಕಾಣಿಸಿಕೊಳ್ಳುತ್ತಿತ್ತು. ಆ ಕಾರಣದಿಂದ ಅವರು ಪರೀಕ್ಷೆ ಮಾಡಿಸಿದ್ದರು. ನೋವು ನಿವಾರಣೆಗಾಗಿ ಅವರು ನೀ ವಾಶ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೊಣಕಾಲು ಚಿಪ್ಪಿನಲ್ಲಿ ಇರುವ ಸೋಂಕನ್ನು ನಿವಾರಿಸುವ ಸಲುವಾಗಿ ಈ ಶಸ್ತ್ರಚಿಕಿತ್ಸೆ (Knee Surgery) ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಅವರು ಮತ್ತೆ ಹೈದರಾಬಾದ್​ಗೆ ಮರಳಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

ಆಗಸ್ಟ್​ 11ರಂದು ಚಿರಂಜೀವಿ ನಟನೆಯ ‘ಭೋಲಾ ಶಂಕರ್​’ ಸಿನಿಮಾ ಬಿಡುಗಡೆ ಆಯಿತು. ಅದರ ಜೊತೆಗೆ ಕೆಲವು ಗಾಸಿಪ್​ ಹಬ್ಬಿತ್ತು. ಇತ್ತೀಚೆಗೆ ಚಿರಂಜೀವಿ ಅವರ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಕುರಿತಂತೆ ಅನೇಕ ಅಂತೆ-ಕಂತೆಗಳು ಹರಿದಾಡಿದ್ದವು. ನೆಚ್ಚಿನ ನಟನ ಆರೋಗ್ಯದ ಬಗ್ಗೆ ಗಾಸಿಪ್​ಗಳು ಕೇಳಿಬಂದಿದ್ದರಿಂದ ಅಭಿಮಾನಿಗಳು ಚಿಂತೆಗೆ ಒಳಗಾಗಿದ್ದರು. ಬೆಂಗಳೂರಿನಲ್ಲಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬಹುದು ಎಂದು ಕೂಡ ಹೇಳಲಾಗಿತ್ತು. ಆದರೆ ಈಗ ಅವರು ದೆಹಲಿಯಲ್ಲಿ ಆಪರೇಷನ್​ ಮಾಡಿಸಿಕೊಂಡಿರುವುದು ಖಚಿತವಾಗಿದೆ.

ಇದನ್ನೂ ಓದಿ: ಚಿರಂಜೀವಿ ವಿರುದ್ಧ ಸುಳ್ಳು ಆರೋಪ: ನಟ ರಾಜಶೇಖರ್, ಪತ್ನಿ ಜೀವಿತಾಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಇನ್ನು, ಸಿನಿಮಾದ ವಿಚಾರಕ್ಕೆ ಬರುವುದಾದರೆ ‘ಭೋಲಾ ಶಂಕರ್’ ಸಿನಿಮಾಗೆ ಮೆಹರ್ ರಮೇಶ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಹೀನಾಯವಾಗಿ ಸೋತಿದೆ. ಅಭಿಮಾನಿಗಳ ನಿರೀಕ್ಷೆಯನ್ನು ಈ ಚಿತ್ರ ಹುಸಿಗೊಳಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಮುಗ್ಗರಿಸಿದೆ. ಈ ಚಿತ್ರದಲ್ಲಿ ಯಾವುದೇ ಹೊಸತನ ಇಲ್ಲ ಎಂದು ವಿಮರ್ಶಕರು ಜರಿದಿದ್ದಾರೆ. ಅಲ್ಲದೇ, ‘ಜೈಲರ್’, ‘ಗದರ್​ 2’, ‘ಒಎಂಜಿ 2’ ಮುಂತಾದ ಸಿನಿಮಾಗಳ ಪೈಪೋಟಿ ಎದುರು ‘ಭೋಲಾ ಶಂಕರ್​’ ಚಿತ್ರ ಸೋತಿದೆ.

ಇದನ್ನೂ ಓದಿ: ಚಿರಂಜೀವಿ ತೊಟ್ಟ ಈ ವಾಚ್​​ನಲ್ಲಿ ಎರಡು ಐಷಾರಾಮಿ ಕಾರು ಖರೀದಿಸಬಹುದು

‘ಭೋಲಾ ಶಂಕರ್​’ ಸಿನಿಮಾ ಸೋತರೂ ಕೂಡ ನಿರ್ಮಾಪಕ ಉತ್ಸಾಹ ಕಡಿಮೆ ಆಗಿಲ್ಲ. ‘ಎಕೆ ಎಂಟರ್ಟೈನ್ಮೆಂಟ್ಸ್’ ಬ್ಯಾನರ್ ಅಡಿಯಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಹಿಂದಿಯಲ್ಲಿ ರಿಲೀಸ್​ ಮಾಡಲು ತಯಾರಿ ನಡೆದಿದೆ. ಆಗಸ್ಟ್ 25ರಂದು ಚಿತ್ರವು ಹಿಂದಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಈಗಾಗಲೇ ಹಿಂದಿ ಅವತರಣಿಕೆಯ ಟೀಸರ್ ಕೂಡ ಬಿಡುಗಡೆ ಆಗಿದೆ. ತಮನ್ನಾ ಭಾಟಿಯಾ, ಕೀರ್ತಿ ಸುರೇಶ್, ಸುಶಾಂತ್, ತರುಣ್ ಅರೋರಾ, ಮುರಳಿ ಶರ್ಮಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ