- Kannada News Photo gallery upasana kamineni konidela Shares Baby Klin Kaara Photo Fans Says She looks Like Ram Charan
‘ಮಗು ರಾಮ್ ಚರಣ್ ರೀತಿಯೇ ಇದೆ’; ಕ್ಲಿನ್ಕಾರ ಫೋಟೋ ನೋಡಿ ಘೋಷಿಸಿದ ಫ್ಯಾನ್ಸ್
ಆಗಸ್ಟ್ 15ರಂದು ಧ್ವಜಾರೋಹಣ ಮಾಡುತ್ತಿರುವ ಫೋಟೋನ ಉಪಾಸನಾ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಕ್ಲಿನ್ಕಾರಳ ಮುಖ ಕಾಣಿಸಿದೆ. ಈ ಫೋಟೋ ನೋಡಿದ ಅನೇಕರು ‘ಮಗು ರಾಮ್ ಚರಣ್ ರೀತಿಯೇ ಇದೆ’ ಎಂದು ಘೋಷಣೆ ಮಾಡಿದ್ದಾರೆ. ಇನ್ನೂ ಕೆಲವರು ಮಗುವಿನ ಸಂಪೂರ್ಣ ಮುಖ ತೋರಿಸಿ ಎಂದು ಕೋರಿದ್ದಾರೆ.
Updated on: Aug 16, 2023 | 2:14 PM

ನಟ ರಾಮ್ ಚರಣ್ ಹಾಗೂ ಉಪಾಸನಾ ಕೊನಿಡೆಲಾ ಅವರ ಮನೆಗೆ ಹೊಸ ಸದಸ್ಯೆಯ ಆಗಮನ ಆಗಿದೆ. ಉಪಾಸನಾ ಅವರು ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ಈಗ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಮಗು ಜನಿಸಿದ ಬಳಿಕ ಅದರ ಮುಖವನ್ನು ತೋರಿಸಬಾರದು ಎಂದು ಅನೇಕರು ನಿರ್ಧರಿಸಿರುತ್ತಾರೆ. ಆದರೆ, ಉಪಾಸನಾ-ರಾಮ್ ಚರಣ್ ಆ ರೀತಿಯ ನಿರ್ಧಾರ ತೆಗೆದುಕೊಂಡಿಲ್ಲ.

ಆಗಸ್ಟ್ 15ರಂದು ಧ್ವಜಾರೋಹಣ ಮಾಡುತ್ತಿರುವ ಫೋಟೋನ ಉಪಾಸನಾ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಕ್ಲಿನ್ಕಾರಳ ಮುಖ ಕಾಣಿಸಿದೆ.

ಈ ಫೋಟೋ ನೋಡಿದ ಅನೇಕರು ‘ಮಗು ರಾಮ್ ಚರಣ್ ರೀತಿಯೇ ಇದೆ’ ಎಂದು ಘೋಷಣೆ ಮಾಡಿದ್ದಾರೆ. ಇನ್ನೂ ಕೆಲವರು ಮಗುವಿನ ಸಂಪೂರ್ಣ ಮುಖ ತೋರಿಸಿ ಎಂದು ಕೋರಿದ್ದಾರೆ.

ರಾಮ್ ಚರಣ್ ಹಾಗೂ ಉಪಾಸನಾ ಮದುವೆ ಆಗಿ 11 ವರ್ಷ ಕಳೆದಿದೆ. ಈಗ ಅವರಿಗೆ ಹೆಣ್ಣು ಮಗು ಜನಿಸಿದ್ದು, ಕುಟುಂಬದವರು ಖುಷಿಪಟ್ಟಿದ್ದಾರೆ.

ರಾಮ್ ಚರಣ್ ಅವರಿಗೆ ಈ ವರ್ಷ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿ ಸಿಕ್ಕಿದೆ. ಅವರ ನಟನೆಯ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ಜೊತೆಗೆ ಮಗಳು ಹುಟ್ಟಿದ್ದಾಳೆ.

ಉಪಾಸನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಾವು ಪ್ರಗ್ನೆಂಟ್ ಎಂಬ ವಿಚಾರವನ್ನು ಕಳೆದ ವರ್ಷ ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು.



















