ಜಸ್​ಪ್ರೀತ್ ಬುಮ್ರಾ ಟಿ20 ತಂಡದ 11ನೇ ನಾಯಕ: ಉಳಿದ 10 ಕ್ಯಾಪ್ಟನ್​ಗಳ ಪಟ್ಟಿ ಇಲ್ಲಿದೆ

Jasprit Bumrah: ಟೀಮ್ ಇಂಡಿಯಾದ 11ನೇ ಟಿ20 ನಾಯಕನಾಗಿ ಕಣಕ್ಕಿಳಿಯಲು ಜಸ್​​ಪ್ರೀತ್ ಬುಮ್ರಾ ಸಜ್ಜಾಗಿದ್ದಾರೆ. ಆಗಸ್ಟ್​ 18 ರಂದು ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಭಾರತ ಟಿ20 ತಂಡದ ನಾಯಕರಾಗಿ ಬುಮ್ರಾ ಪಾದಾರ್ಪಣೆ ಮಾಡಲಿದ್ದಾರೆ.

| Updated By: ಝಾಹಿರ್ ಯೂಸುಫ್

Updated on: Aug 16, 2023 | 8:38 PM

ಭಾರತ-ಐರ್ಲೆಂಡ್ ನಡುವಣ ಟಿ20 ಸರಣಿ ಆಗಸ್ಟ್ 18 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ ಭಾರತ ಟಿ20 ತಂಡದ 11ನೇ ನಾಯಕ ಎಂಬ ಹೆಗ್ಗಳಿಕೆ ಬುಮ್ರಾ ಪಾತ್ರರಾಗಲಿದ್ದಾರೆ.

1 / 13
ಇದಕ್ಕೂ ಮುನ್ನ ಭಾರತ ಟಿ20 ತಂಡವನ್ನು 10 ಕ್ಯಾಪ್ಟನ್​ಗಳು ಮುನ್ನಡೆಸಿದ್ದಾರೆ. ಆ ಆಟಗಾರರು ಯಾರು? ಎಷ್ಟು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

2 / 13
1- ವೀರೇಂದ್ರ ಸೆಹ್ವಾಗ್: ಭಾರತ ಟಿ20 ತಂಡದ ಮೊದಲ ನಾಯಕ ವೀರೇಂದ್ರ ಸೆಹ್ವಾಗ್. 2006 ರಲ್ಲಿ ಸೆಹ್ವಾಗ್ ಒಂದು ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಅಲ್ಲದೆ ಮೊದಲ ಪಂದ್ಯದಲ್ಲೇ ಭಾರತ ತಂಡ ಜಯ ಸಾಧಿಸಿತ್ತು.

3 / 13
2- ಮಹೇಂದ್ರ ಸಿಂಗ್ ಧೋನಿ: 2007 ರಿಂದ 2016 ರವರೆಗೆ ಧೋನಿ ಭಾರತ ಟಿ20 ತಂಡವನ್ನು 72 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಟೀಮ್ ಇಂಡಿಯಾ 41 ಜಯ ಸಾಧಿಸಿದರೆ, 28 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಇನ್ನು ಒಂದು ಪಂದ್ಯ ಟೈ ಆದರೆ, 2 ಪಂದ್ಯ ರದ್ದಾಗಿತ್ತು.

4 / 13
3- ಸುರೇಶ್ ರೈನಾ: 2010-11 ರ ನಡುವೆ ಧೋನಿ ಅನುಪಸ್ಥಿತಿಯಲ್ಲಿ ರೈನಾ 3 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಮೂರು ಪಂದ್ಯಗಳಲ್ಲೂ ಭಾರತ ಜಯ ಸಾಧಿಸಿತ್ತು.

5 / 13
4- ಅಜಿಂಕ್ಯ ರಹಾನೆ: 2015 ರಲ್ಲಿ ಅಜಿಂಕ್ಯ ರಹಾನೆ 2 ಪಂದ್ಯಗಳಲ್ಲಿ ಭಾರತ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ಎರಡೂ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿತ್ತು.

6 / 13
5- ವಿರಾಟ್ ಕೊಹ್ಲಿ: 2017 ರಿಂದ 2021ರವರೆಗೆ 50 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಈ ವೇಳೆ ಭಾರತ ತಂಡವು 30 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇನ್ನು 16 ಪಂದ್ಯಗಳಲ್ಲಿ ಸೋತರೆ, 2 ಪಂದ್ಯ ಟೈ ಹಾಗೂ 2 ಪಂದ್ಯ ರದ್ದಾಗಿತ್ತು.

7 / 13
6- ರೋಹಿತ್ ಶರ್ಮಾ: ಟೀಮ್ ಇಂಡಿಯಾವನ್ನು 51 ಪಂದ್ಯಗಳಲ್ಲಿ ಮುನ್ನಡೆಸಿರುವ ರೋಹಿತ್ ಶರ್ಮಾ 39 ಗೆಲುವು ತಂದುಕೊಟ್ಟಿದ್ದಾರೆ. ಇದೇ ವೇಳೆ ಸೋತಿರುವುದು ಕೇವಲ 12 ಪಂದ್ಯಗಳಲ್ಲಿ ಮಾತ್ರ.

8 / 13
7- ಶಿಖರ್ ಧವನ್: ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಶಿಖರ್ ಧವನ್ 3 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಸೋತರೆ, 1 ಪಂದ್ಯದಲ್ಲಿ ಜಯ ಸಾಧಿಸಿತ್ತು.

9 / 13
8- ರಿಷಭ್ ಪಂತ್: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 5 ಪಂದ್ಯಗಳಲ್ಲಿ ತಂಡದ ಸಾರಥ್ಯವಹಿಸಿಕೊಂಡಿದ್ದರು. ಈ ವೇಳೆ 2 ಜಯ ಸಾಧಿಸಿದರೆ, ಮತ್ತೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿತ್ತು. ಇನ್ನು ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

10 / 13
9- ಕೆಎಲ್ ರಾಹುಲ್: ಏಕೈಕ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು.

11 / 13
10- ಹಾರ್ದಿಕ್ ಪಾಂಡ್ಯ: ಪ್ರಸ್ತುತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇದುವರೆಗೆ 16 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ವೇಳೆ ಭಾರತ ಗೆದ್ದಿರುವುದು 10 ಪಂದ್ಯಗಳಲ್ಲಿ ಮಾತ್ರ. ಇನ್ನು 5 ಪಂದ್ಯಗಳಲ್ಲಿ ಸೋತರೆ, 1 ಪಂದ್ಯವು ಟೈ ಆಗಿದೆ.

12 / 13
11- ಜಸ್​ಪ್ರೀತ್ ಬುಮ್ರಾ: ಇದೀಗ ಟೀಮ್ ಇಂಡಿಯಾದ 11ನೇ ಟಿ20 ನಾಯಕನಾಗಿ ಕಣಕ್ಕಿಳಿಯಲು ಜಸ್​​ಪ್ರೀತ್ ಬುಮ್ರಾ ಸಜ್ಜಾಗಿದ್ದಾರೆ. ಆಗಸ್ಟ್​ 18 ರಂದು ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಭಾರತ ಟಿ20 ತಂಡದ ನಾಯಕರಾಗಿ ಬುಮ್ರಾ ಪಾದಾರ್ಪಣೆ ಮಾಡಲಿದ್ದಾರೆ.

13 / 13
Follow us
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ

ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ

ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ

ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ

ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ

ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ

VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!