ಶಾಹಿದ್ ಅಫ್ರಿದಿ: ಶಾಹಿದ್ ಅಫ್ರಿದಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಅವಧಿಯಲ್ಲಿ ಒಟ್ಟು ಐದು ಬಾರಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ಮತ್ತೆ ತಂಡಕ್ಕೆ ಮರಳಿದ್ದರು. 2006 ರಲ್ಲಿ ಟೆಸ್ಟ್ ಕ್ರಿಕೆಟ್ ತೊರೆದ ಅಫ್ರಿದಿ, 2 ವಾರಗಳ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿದ್ದರು. ಅಂತಿಮವಾಗಿ 2010 ರಲ್ಲಿ ಅಫ್ರಿದಿ, ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದರು. ಬಳಿಕ ಮೇ 2011 ರಲ್ಲಿ ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಲು ನಿರ್ಧರಿಸಿದ ಅಫ್ರಿದಿ, ಐದು ತಿಂಗಳ ನಂತರ ತಮ್ಮ ನಿರ್ಧಾರದಿಂದ ಯು-ಟರ್ನ್ ಮಾಡಿದರು. 2015ರ ಏಕದಿನ ವಿಶ್ವಕಪ್ ಆಡಿದ ಅಫ್ರಿದಿ, ನಂತರ 2017 ರಲ್ಲಿ ಟಿ20 ಮಾದರಿಗೂ ವಿದಾಯ ಘೋಷಿಸಿದರು.