Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಮಂದಿಗೆ ಮೆಚ್ಚುಗೆ ಆಯ್ತು ‘ಹಾಸ್ಟೆಲ್’ ಕಥೆ; ಯುವಕರನ್ನು ಸೆಳೆದ ಸಿನಿಮಾಗೆ ಮಸ್ತ್ ಆಫರ್

ಇಂದು (ಆಗಸ್ಟ್ 30) ರಕ್ಷಾ ಬಂಧನ. ಈ ಕಾರಣಕ್ಕೆ ಚಿತ್ರತಂಡದಿಂದ ಆಫರ್ ನೀಡಲಾಗಿದೆ. ಚಿತ್ರಮಂದಿರದಲ್ಲಿ ಒಂದು ಟಿಕೆಟ್ ಖರೀದಿ ಮಾಡಿದರೆ ಮತ್ತೊಂದು ಟಿಕೆಟ್ ಉಚಿತವಾಗಿ ಸಿಗಲಿದೆ. ಈ ಮೂಲಕ ಯುವಜನತೆಯ ಆಕರ್ಷಿಸಲು ಸಿನಿಮಾ ತಂಡ ಹೊಸ ಪ್ಲ್ಯಾನ್ ಮಾಡಿದೆ.

ತೆಲುಗು ಮಂದಿಗೆ ಮೆಚ್ಚುಗೆ ಆಯ್ತು ‘ಹಾಸ್ಟೆಲ್’ ಕಥೆ; ಯುವಕರನ್ನು ಸೆಳೆದ ಸಿನಿಮಾಗೆ ಮಸ್ತ್ ಆಫರ್
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
Follow us
ರಾಜೇಶ್ ದುಗ್ಗುಮನೆ
|

Updated on: Aug 30, 2023 | 2:38 PM

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕನ್ನಡದಲ್ಲಿ ಹಿಟ್ ಆಯಿತು. ಈ ಚಿತ್ರ ಕಳೆದ ವಾರ ‘ಬಾಯ್ಸ್ ಹಾಸ್ಟೆಲ್’ (Boys Hostel Movie) ಆಗಿ ತೆಲುಗಿನಲ್ಲೂ ರಿಲೀಸ್ ಆಗಿದೆ. ಅಲ್ಲಿನ ಯುವಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಒಳ್ಳೆಯ ಕಮಾಯಿ ಮಾಡುತ್ತಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದ ಚಿತ್ರ ಯುವಜನತೆಯ ಸೆಳೆದಿದೆ. ಮುಂದಿನ ದಿನಗಳಲ್ಲಿ ಕನ್ನಡದ ಮತ್ತಷ್ಟು ಸಿನಿಮಾಗಳು ಪರಭಾಷೆಯಲ್ಲಿ ಮಿಂಚಲು ರೆಡಿ ಆಗಿವೆ.

ಚಿತ್ರತಂಡದಿಂದ ಆಫರ್

ಇಂದು (ಆಗಸ್ಟ್ 30) ರಕ್ಷಾ ಬಂಧನ. ಈ ಕಾರಣಕ್ಕೆ ಚಿತ್ರತಂಡದಿಂದ ಆಫರ್ ನೀಡಲಾಗಿದೆ. ಚಿತ್ರಮಂದಿರದಲ್ಲಿ ಒಂದು ಟಿಕೆಟ್ ಖರೀದಿ ಮಾಡಿದರೆ ಮತ್ತೊಂದು ಟಿಕೆಟ್ ಉಚಿತವಾಗಿ ಸಿಗಲಿದೆ. ಈ ಮೂಲಕ ಯುವಜನತೆಯ ಆಕರ್ಷಿಸಲು ಸಿನಿಮಾ ತಂಡ ಹೊಸ ಪ್ಲ್ಯಾನ್ ಮಾಡಿದೆ.

ಸೆಲೆಬ್ರಿಟಿಗಳಿಂದ ಸಿನಿಮಾಗೆ ಮೆಚ್ಚುಗೆ

‘ಬಾಯ್ಸ್ ಹಾಸ್ಟೆಲ್’ ಚಿತ್ರವನ್ನು ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಅಕ್ಕಿನೇನಿ ನಾಗಾರ್ಜುನ ಅವರು ಸಿನಿಮಾ ನೋಡಿದ್ದರು. ‘ನಾನು ಬಾಯ್ಸ್ ಹಾಸ್ಟೆಲ್ ಸಿನಿಮಾ ನೋಡಿದೆ. ಕ್ರೇಜಿ ಆಗಿದೆ. ನನ್ನ ಹಾಸ್ಟೆಲ್ ದಿನಗಳು ನೆನಪಾದವು’ ಎಂದು ಅಕ್ಕಿನೇನಿ ನಾಗಾರ್ಜುನ ಅವರು ಬರೆದುಕೊಂಡಿದ್ದರು.

ಎರಡನೇ ವಾರವೂ ಉತ್ತಮ ಪ್ರದರ್ಶನ

‘ಹಾಸ್ಟೆಲ್ ಹುಡುಗರು’ ಎರಡನೇ ವಾರಕ್ಕೆ ಕಾಲಿಟ್ಟಿದೆ. ಎಲ್ಲರೂ ಚಿತ್ರವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಟಾಲಿವುಡ್​ನಲ್ಲೂ ಒಳ್ಳೆಯ ಬಾಯಿ ಮಾತಿನ ಪ್ರಚಾರ ಸಿಗುತ್ತಿದೆ. ಇದು ಚಿತ್ರಕ್ಕೆ ಸಹಕಾರಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ತೆಲುಗು ವರ್ಷನ್​ನಲ್ಲಿ ರಮ್ಯಾ ಇಲ್ಲ; ‘ಬಾಯ್ಸ್​ ಹಾಸ್ಟೆಲ್​’ನಲ್ಲಿ ರಶ್ಮಿ ಗೌತಮ್​ಗೆ ಚಾನ್ಸ್​

ಸಿನಿಮಾ ಬಗ್ಗೆ

‘ಗುಲ್ಮೊಹರ್ ಫಿಲ್ಮ್ಸ್’ ಹಾಗೂ ‘ವರುಣ್ ಸ್ಟುಡಿಯೋಸ್’ ಸಂಸ್ಥೆಗಳು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾನ ನಿರ್ಮಿಸಿವೆ. ವಿದೇಶದಲ್ಲಿಯೂ ಬಿಡುಗಡೆ ಆಗಿ ಚಿತ್ರ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತು. ತೆಲುಗಿನಲ್ಲಿ ‘ಚಾಯ್ ಬಿಸ್ಕೆಟ್ ಫಿಲ್ಮ್ಸ್’ ಮತ್ತು ‘ಅನ್ನಪೂರ್ಣ ಸ್ಟುಡಿಯೋಸ್’ ಸಂಸ್ಥೆ ಜಂಟಿಯಾಗಿ ‘ಬಾಯ್ಸ್ ಹಾಸ್ಟೆಲ್’ ಸಿನಿಮಾ ಅನ್ನು ಆಗಸ್ಟ್ 26ರಂದು ಬಿಡುಗಡೆ ಮಾಡಿವೆ. ರಮ್ಯಾ ಬದಲು ರಶ್ಮಿ ಗೌತಮ್ ತೆಲುಗಿನಲ್ಲಿ ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !