AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ತೆಲುಗು ವರ್ಷನ್​ನಲ್ಲಿ ರಮ್ಯಾ ಇಲ್ಲ; ‘ಬಾಯ್ಸ್​ ಹಾಸ್ಟೆಲ್​’ನಲ್ಲಿ ರಶ್ಮಿ ಗೌತಮ್​ಗೆ ಚಾನ್ಸ್​

ತೆಲುಗಿನಲ್ಲಿ ‘ಬಾಯ್ಸ್ ಹಾಸ್ಟೆಲ್’ ಸಿನಿಮಾವನ್ನು ‘ಚಾಯ್ ಬಿಸ್ಕೆಟ್ ಫಿಲ್ಮ್ಸ್’ ಮತ್ತು ‘ಅನ್ನಪೂರ್ಣ ಸ್ಟುಡಿಯೋಸ್’ ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡುತ್ತಿವೆ. ಆಗಸ್ಟ್ 26ರಂದು ಈ ಸಿನಿಮಾಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಮೂಡಿದೆ. ಈ ಸಿನಿಮಾಗೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಹಾಡುಗಳು ಸೂಪರ್ ಹಿಟ್​ ಆಗಿವೆ.

‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ತೆಲುಗು ವರ್ಷನ್​ನಲ್ಲಿ ರಮ್ಯಾ ಇಲ್ಲ; ‘ಬಾಯ್ಸ್​ ಹಾಸ್ಟೆಲ್​’ನಲ್ಲಿ ರಶ್ಮಿ ಗೌತಮ್​ಗೆ ಚಾನ್ಸ್​
ರಶ್ಮಿ ಗೌತಮ್​
ಮದನ್​ ಕುಮಾರ್​
|

Updated on: Aug 16, 2023 | 2:32 PM

Share

ಜುಲೈ 21ರಂದು ಬಿಡುಗಡೆ ಆದ ಕನ್ನಡದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾ ಸಖತ್​ ಸದ್ದು ಮಾಡಿತು. ಈಗ ಈ ಸಿನಿಮಾ ತೆಲುಗು ಮಂದಿಗೂ ಮನರಂಜನೆ ನೀಡಲು ಸಜ್ಜಾಗಿದೆ. ಈಗಾಗಲೇ ಸುದ್ದಿ ಆಗಿರುವಂತೆ ಈ ಸಿನಿಮಾ ತೆಲುಗಿಗೆ ‘ಬಾಯ್ಸ್​ ಹಾಸ್ಟೆಲ್​’ (Boys Hostel) ಹೆಸರಿನಲ್ಲಿ ಡಬ್​ ಆಗಿದೆ. ಕನ್ನಡದಲ್ಲಿ ರಿಲೀಸ್​ ಆದಾಗ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದರಿಂದ ಈ ಚಿತ್ರಕ್ಕೆ ಪಕ್ಕದ ರಾಜ್ಯದಿಂದಲೂ ಬೇಡಿಕೆ ಬಂತು. ಆಗಸ್ಟ್​ 26ರಂದು ಆಂಧ್ರ ಹಾಗೂ ತೆಲಂಗಾಣದಲ್ಲಿ ‘ಬಾಯ್ಸ್ ಹಾಸ್ಟೆಲ್’ ಬಿಡುಗಡೆ ಆಗಲಿದೆ. ಕನ್ನಡ ವರ್ಷನ್​ನಲ್ಲಿ ರಮ್ಯಾ ಅವರ ಅತಿಥಿ ಪಾತ್ರ ಹೈಲೈಟ್​ ಆಯಿತು. ಆದರೆ ತೆಲುಗಿನಲ್ಲಿ ರಮ್ಯಾ ಬದಲು ಬೇರೆ ನಟಿಯ ಆಗಮನ ಆಗಿದೆ. ಹೌದು, ನಿರೂಪಕಿಯೂ ಆಗಿರುವ ರಶ್ಮಿ ಗೌತಮ್​ (Rashmi Gautham) ಅವರು ಆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ಪ್ರಯತ್ನವಾಗಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಮೂಡಿಬಂತು. ರಮ್ಯಾ, ದಿಗಂತ್​, ಪವನ್​ ಕುಮಾರ್​, ರಿಷಬ್​ ಶೆಟ್ಟಿ ಮುಂತಾದವರು ಅತಿಥಿ ಪಾತ್ರ ಮಾಡಿದ್ದರಿಂದ ಸಿನಿಮಾದ ಹೈಪ್​ ಹೆಚ್ಚಿತು. ಚಿತ್ರದ ಬಿಡುಗಡೆಗೂ ಮುನ್ನ ರಮ್ಯಾ ಅವರು ಕೋರ್ಟ್​ ಮೆಟ್ಟಿಲೇರಿದ್ದರು. ಈಗ ತೆಲುಗು ವರ್ಷನಲ್ಲಿ ರಮ್ಯಾ ಅವರು ಕಾಣಿಸಿಕೊಳ್ಳುವುದೇ ಇಲ್ಲ. ರಮ್ಯಾ ಬದಲು ರಶ್ಮಿ ಗೌತಮ್​ ಅವರನ್ನು ಕರೆತರಲಾಗಿದೆ. ಅವರು ಈ ಸಿನಿಮಾದಲ್ಲಿ ಲೆಕ್ಚರರ್​ ಆಗಿ ಮನರಂಜನೆ ನೀಡಲಿದ್ದಾರೆ.

ಇದನ್ನೂ ಓದಿ: Hostel Hudugaru Bekagiddare: ಹಾಸ್ಟೆಲ್ ಹುಡುಗರು ಸಿನಿಮಾ ನೋಡಿ ಕೊಂಡಾಡಿದ ರಮೇಶ್

ತೆಲುಗಿನಲ್ಲಿ ‘ಬಾಯ್ಸ್ ಹಾಸ್ಟೆಲ್’ ಸಿನಿಮಾವನ್ನು ‘ಚಾಯ್ ಬಿಸ್ಕೆಟ್ ಫಿಲ್ಮ್ಸ್’ ಮತ್ತು ‘ಅನ್ನಪೂರ್ಣ ಸ್ಟುಡಿಯೋಸ್’ ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡುತ್ತಿವೆ. ಆಗಸ್ಟ್ 26ರಂದು ಈ ಸಿನಿಮಾಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಮೂಡಿದೆ. ಈ ಸಿನಿಮಾಗೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಹಾಡುಗಳು ಸೂಪರ್ ಹಿಟ್​ ಆಗಿವೆ.

ಇದನ್ನೂ ಓದಿ: ಭಿನ್ನವಾಗಿದೆ ಬಾಯ್ಸ್​ ವರ್ಸಸ್​ ವಾರ್ಡನ್​ ಸನ್ನಿವೇಶ; ನಗಿಸುವುದೇ ಹಾಸ್ಟೆಲ್​ ಹುಡುಗರ ಮುಖ್ಯ ಉದ್ದೇಶ

‘ಗುಲ್ಮೊಹರ್ ಫಿಲ್ಮ್ಸ್’ ಹಾಗೂ ‘ವರುಣ್ ಸ್ಟುಡಿಯೋಸ್’ ಜೊತೆಯಾಗಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿರ್ಮಿಸಿವೆ. ಕರ್ನಾಟಕದ ಅಕ್ಕ ಪಕ್ಕದ ರಾಜ್ಯಗಳು ಮಾತ್ರವಲ್ಲದೇ ವಿದೇಶದಲ್ಲಿಯೂ ಬಿಡುಗಡೆ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಈಗ ತೆಲುಗು ವರ್ಷನ್​ ಕೂಡ ಅಷ್ಟೇ ಪ್ರಮಾಣದಲ್ಲಿ ಸದ್ದು ಮಾಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಎಂಟಿಆರ್ ಮ್ಯೂಸಿಕ್ ಮೂಲಕ ‘ಬಾಯ್ಸ್ ಹಾಸ್ಟೆಲ್’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಆಗಿದೆ. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ತರಲೆ ತಮಾಷೆಯನ್ನು ನೋಡಿ ಟಾಲಿವುಡ್​ ಮಂದಿ ಏನ್​ ಹೇಳ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More