Hostel Hudugaru Bekagiddare: ಭಿನ್ನವಾಗಿದೆ ಬಾಯ್ಸ್​ ವರ್ಸಸ್​ ವಾರ್ಡನ್​ ಸನ್ನಿವೇಶ; ನಗಿಸುವುದೇ ಹಾಸ್ಟೆಲ್​ ಹುಡುಗರ ಮುಖ್ಯ ಉದ್ದೇಶ

Hostel Hudugaru Bekagiddare Review: ಸಿನಿಮಾ ಎಂದರೆ ಹೀಗೆಯೇ ಇರಬೇಕು ಎಂಬ ಸಿದ್ಧಸೂತ್ರಗಳನ್ನು ಮುರಿದು, ಹೊಸ ಶೈಲಿಯಲ್ಲಿ ಕಥೆಯನ್ನು ನಿರೂಪಿಸಲಾಗಿದೆ. ಈ ಕಾರಣದಿಂದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರ ವಿಶೇಷ ಎನಿಸಿಕೊಳ್ಳುತ್ತದೆ.

Hostel Hudugaru Bekagiddare: ಭಿನ್ನವಾಗಿದೆ ಬಾಯ್ಸ್​ ವರ್ಸಸ್​ ವಾರ್ಡನ್​ ಸನ್ನಿವೇಶ; ನಗಿಸುವುದೇ ಹಾಸ್ಟೆಲ್​ ಹುಡುಗರ ಮುಖ್ಯ ಉದ್ದೇಶ
‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jul 21, 2023 | 1:09 PM

ಚಿತ್ರ: ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ

ನಿರ್ಮಾಣ: ಗುಲ್​ಮೊಹರ್​ ಫಿಲ್ಮ್ಸ್​, ವರುಣ್​ ಸ್ಟುಡಿಯೋಸ್​

ನಿರ್ದೇಶನ: ನಿತಿನ್​ ಕೃಷ್ಣಮೂರ್ತಿ

ಪಾತ್ರವರ್ಗ: ಚೇತನ್​ ದುರ್ಗಾ, ಪ್ರಜ್ವಲ್​, ಶ್ರೀವತ್ಸ, ಮಂಜುನಾಥ್​ ನಾಯಕ್​, ಅಭಿದಾಸ್​, ಅರ್ಚನಾ ಕೊಟ್ಟಿಗೆ, ರಮ್ಯಾ ದಿವ್ಯ

ಸ್ಪಂದನಾ, ದಿಗಂತ್​, ರಿಷಬ್​ ಶೆಟ್ಟಿ, ಪವನ್​ ಕುಮಾರ್​ ಮುಂತಾದವರು.

ಸ್ಟಾರ್​: 3.5/5

ಹೊಸಬರು ಚಿತ್ರರಂಗಕ್ಕೆ ಬಂದರೆ ಹೊಸತನ ಹೊತ್ತು ತರುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿದೆ. ಬಹುತೇಕ ಸಂದರ್ಭಗಳಲ್ಲಿ ಆ ಮಾತು ನಿಜವಾಗಿದೆ. ಈಗ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾ ತಂಡ ಕೂಡ ಹೊಸತನವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಸಖತ್​ ಸುದ್ದಿ ಆಗಿತ್ತು. ವಿವಾದದ ಮೂಲಕವೂ ಸೌಂಡು ಮಾಡಿತ್ತು. ಇಂದು (ಜುಲೈ 21) ಈ ಚಿತ್ರ ಬಿಡುಗಡೆ ಆಗಿದೆ. ಮೇಕಿಂಗ್​ ವಿಚಾರದಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರ ತುಂಬ ಡಿಫರೆಂಟ್​ ಆಗಿದೆ. ಸಿಕ್ಕಾಪಟ್ಟೆ ತರಲೆ, ತಮಾಷೆಯ ಮೂಲಕವೇ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಒಂದು ರಾತ್ರಿಯೊಳಗೆ ನಡೆಯುವ ಕಥೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಫನ್​ ಸೇರಿಸುವ ಪ್ರಯತ್ನ ಮಾಡಲಾಗಿದೆ. ರಮ್ಯಾ (Ramya Divya Spandana), ದಿಗಂತ್​ ಮುಂತಾದ ಸ್ಟಾರ್​ ಕಲಾವಿದರ ಗೆಸ್ಟ್​ ಅಪಿಯರೆನ್ಸ್​ ಕಾರಣದಿಂದ ಚಿತ್ರಕ್ಕೆ ಇನ್ನಷ್ಟು ಪ್ರಚಾರ ಸಿಕ್ಕಿದೆ. ಒಟ್ಟಾರೆ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಹೇಗಿದೆ ಎಂಬುದಕ್ಕೆ ಉತ್ತರ ಈ ವಿಮರ್ಶೆಯಲ್ಲಿದೆ.

ಸಿನಿಮಾ ಎಂದರೆ ಹೀಗೆಯೇ ಇರಬೇಕು ಎಂಬ ಕೆಲವು ಅಲಿಖಿತ ಸಿದ್ಧಸೂತ್ರಗಳು ಇವೆ. ಅವುಗಳನ್ನು ಮುರಿದು, ಹೊಸ ಶೈಲಿಯಲ್ಲಿ ಕಥೆಯನ್ನು ನಿರೂಪಿಸಿದ ಕಾರಣದಿಂದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರ ವಿಶೇಷ ಎನಿಸಿಕೊಳ್ಳುತ್ತದೆ. ಹಲವಾರು ಪಾತ್ರಗಳು ಈ ಸಿನಿಮಾದಲ್ಲಿ ಇವೆ. ಅವುಗಳಲ್ಲಿ ಯಾವುದೂ ಹೆಚ್ಚಲ್ಲ, ಕಡಿಮೆ ಅಲ್ಲ. ಸನ್ನಿವೇಶಕ್ಕೆ ತಕ್ಕಂತೆ ಎಲ್ಲ ಪಾತ್ರಗಳಿಗೂ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಸನ್ನಿವೇಶವೇ ಒಂದು ಪಾತ್ರವಾಗಿ ನೋಡುಗರನ್ನು ಸೆಳೆಯುತ್ತದೆ.

ಇದನ್ನೂ ಓದಿ: Dhoomam Review: ಸಿಗರೇಟ್​ ಬಗ್ಗೆ ಸಂದೇಶ ನೀಡಲು ಎಷ್ಟೆಲ್ಲ ಸರ್ಕಸ್​; ಸರಳವಾಗಿಲ್ಲ ‘ಧೂಮಂ’

ಒಂದು ಬಾಯ್ಸ್​ ಹಾಸ್ಟೆಲ್​. ಅಲ್ಲಿ ತುಂಬಿಕೊಂಡಿರುವ ಎಲ್ಲ ಹುಡುಗರು ಶುದ್ಧ ತರಲೆಗಳು. ಅವರನ್ನು ನಿಯಂತ್ರಿಸಲು ಓರ್ವ ಕಟ್ಟುನಿಟ್ಟಾದ ವಾರ್ಡನ್​. ಹುಡುಗರು ಮತ್ತು ವಾರ್ಡನ್​ ನಡುವಿನ ಕಿತ್ತಾಟವೇ ಈ ಚಿತ್ರದ ಕಥಾಹಂದರ. ಏನೋ ಮಾಡಲು ಹೋಗಿ ವಾರ್ಡನ್​ ಜೀವಕ್ಕೆ ಕುತ್ತುಬರುವಂತಹ ಘಟನೆ ನಡೆಯುತ್ತದೆ. ಆ ಸಂಕಷ್ಟದಿಂದ ಹೊರಬರಲು ಹಾಸ್ಟೆಲ್​ ಹುಡುಗರು ಹತ್ತಾರು ಕಸರತ್ತು ಮಾಡುತ್ತಾರೆ. ಆ ಸನ್ನಿವೇಶಗಳೇ ಇಲ್ಲಿ ಪ್ರೇಕ್ಷಕರಿಗೆ ನಗು ಉಕ್ಕಿಸುತ್ತವೆ. ಅಲ್ಲಲ್ಲಿ ಬರುವ ಟ್ವಿಸ್ಟ್​ಗಳಿಂದ ಮನರಂಜನೆಯ ಮಟ್ಟ ಹೆಚ್ಚಿದೆ.

ಇದನ್ನೂ ಓದಿ: Blind Movie Review: ಚುಟುಕಾದ, ಚುರುಕಾದ ಕಳ್ಳ-ಪೊಲೀಸ್​ ಕಹಾನಿ; ‘ಬ್ಲೈಂಡ್​’ ಚಿತ್ರದ ಪ್ಲಸ್ ಏನು? ಮೈನಸ್ ಏನು?

ಹಾಸ್ಟೆಲ್​ ಹುಡುಗರು ಮಾಡಿದ್ದೆಲ್ಲವೂ ಚೆನ್ನಾಗಿದೆಯೇ? ಹಾಗೇನೂ ಇಲ್ಲ. ಅವರ ತರಲೆ-ತಮಾಷೆಯನ್ನು ಒಪ್ಪಿಕೊಂಡರೆ ಮಾತ್ರ ಅದು ಫನ್​ ಎನಿಸುತ್ತದೆ. ಒಪ್ಪಿಕೊಳ್ಳದೇ ಇದ್ದರೆ ಕಿರಿಕಿರಿ ಎನಿಸುವ ಸಾಧ್ಯತೆ ಇದೆ. ನೋಡುಗರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಹೆಚ್ಚೇನೂ ಜವಾಬ್ದಾರಿ ಇಲ್ಲದ ಹುಡುಗರು ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ. ಅದೇ ರೀತಿ ಸಿನಿಮಾ ಕೂಡ ಕೆಲವೊಮ್ಮೆ ಎತ್ತೆತ್ತಲೋ ಸಾಗುತ್ತದೆ. ಅದರ ಹಿಂದೆ ಪ್ರೇಕ್ಷಕನೂ ಸುತ್ತಬೇಕು. ಕ್ಲೈಮ್ಯಾಕ್ಸ್​ನಲ್ಲಿ ಏನಾಗಲಿದೆ ಎಂಬ ಕೌತುಕವಂತೂ ಕೊನೆವರೆಗೂ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ.

ಇದನ್ನೂ ಓದಿ: Adipurush Review: ಗ್ರಾಫಿಕ್ಸ್​ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ; ಇದು ಓಂ ರಾವತ್​ ರಾಮಾಯಣ

ಆರಂಭದಲ್ಲೇ ಕಾಣಿಸಿಕೊಳ್ಳುವ ರಮ್ಯಾ ಅವರು ನಂತರ ಮಾಯವಾಗುತ್ತಾರೆ. ಮತ್ತೆ ಅವರು ಪ್ರತ್ಯಕ್ಷ ಆಗುವುದೇ ದ್ವಿತಿಯಾರ್ಧದಲ್ಲಿ. ಇದಕ್ಕೆಲ್ಲ ಕಾರಣ ಆಗುವುದು ದಿಗಂತ್​ ಮಂಚಾಲೆ ಪಾತ್ರ. ಯಾಕೆ, ಏನು, ಹೇಗೆ ಎಂಬುದನ್ನೆಲ್ಲ ಸಿನಿಮಾದಲ್ಲೇ ನೋಡಿ ತಿಳಿದರೆ ಚೆನ್ನ. ಒಂದಷ್ಟು ದೃಶ್ಯಗಳು ಎಳೆದಾಡಿದಂತಿವೆ. ಲಾಜಿಕ್​ಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಸಿನಿಮಾ ನೋಡಿದರೆ ಇನ್ನಷ್ಟು ಇಷ್ಟ ಆಗುತ್ತದೆ. ಪೂರ್ತಿ ಸಿನಿಮಾದ ಕಥೆ ಒಂದೇ ಲೊಕೇಷನ್​ನಲ್ಲಿ, ಒಂದೇ ರಾತ್ರಿಯಲ್ಲಿ ಸಾಗುತ್ತದೆ. ಅದರಿಂದ ಕೊಂಚ ಏಕತಾನತೆ ಕಾಡುತ್ತದೆ. ಆದರೆ ಪಟಪಟನೆ ಸಾಗುವ ದೃಶ್ಯಗಳಿಂದ ಈ ಚಿತ್ರಕ್ಕೆ ನೋಡಿಸಿಕೊಂಡು ಹೋಗುವ ಗುಣ ಇದೆ.

ಇದನ್ನೂ ಓದಿ: Pinki Elli Review: ನಾಟಕೀಯ ತಂತ್ರಗಳಿಲ್ಲದೆ ಮಂತ್ರಮುಗ್ಧ ಆಗಿಸುವ ನೈಜ ಸಿನಿಮಾ

ಇಡೀ ಸಿನಿಮಾದಲ್ಲಿ ಛಾಯಾಗ್ರಹಣವೇ ಹೈಲೈಟ್​. ಬಹುತೇಕ ದೃಶ್ಯಗಳು ಸೆರೆಯಾಗುವುದೇ ಹಾಸ್ಟೆಲ್​ ಹುಡುಗನ ಹ್ಯಾಂಡಿ ಕ್ಯಾಮ್​ ಮೂಲಕ. ಅದನ್ನು ನೈಜ ಎಂಬ ರೀತಿಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ಛಾಯಾಗ್ರಹಕ ಅರವಿಂದ್​ ಎಸ್​. ಕಶ್ಯಪ್​. ಅದಕ್ಕಾಗಿ ಅವರಿಗೆ ಸ್ಪೆಷಲ್​ ಚಪ್ಪಾಳೆ ಸಲ್ಲಲೇಬೇಕು. ಅಜನೀಶ್​ ಲೋಕನಾಥ್​ ಅವರು ಸಂಗೀತದಿಂದ ಹಾಸ್ಟೆಲ್​ ಹುಡುಗರಿಗೆ ಬಲ ತುಂಬಿದ್ದಾರೆ. ಎಲ್ಲ ಕಲಾವಿದರ ನಟನೆ ಚೆನ್ನಾಗಿದೆ. ವಾರ್ಡನ್​ ಪಾತ್ರ ಮಾಡಿದ ಮಂಜುನಾಥ್​ ನಾಯಕ್​ ಗಮನ ಸೆಳೆಯುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ