ಹೇಗಿದೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕಥೆಯ ಮೊದಲಾರ್ಧ? ಇಲ್ಲಿದೆ ರಿಪೋರ್ಟ್

Hostel Hudugaru Bekagiddare Review: ಈ ಚಿತ್ರ ತಂಡ ಪ್ರಮೋಷನ್​ಗಳ ಮೂಲಕ ಸಾಕಷ್ಟು ಗಮನ ಸೆಳೆದಿತ್ತು. ಹಾಗಾದರೆ ಈ ಚಿತ್ರದ ಮೊದಲಾರ್ಧ ಹೇಗಿದೆ? ಹಾಸ್ಟೆಲ್ ಹುಡುಗರು ಮೊದಲಾರ್ಧದಲ್ಲಿ ಏನೆಲ್ಲ ಮಾಡಿದ್ರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಹೇಗಿದೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕಥೆಯ ಮೊದಲಾರ್ಧ? ಇಲ್ಲಿದೆ ರಿಪೋರ್ಟ್
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Jul 21, 2023 | 9:41 AM

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾ ಎಲ್ಲಾ ವಿಘ್ನಗಳನ್ನು ನಿವಾರಿಸಿಕೊಂಡು ಇಂದು (ಜುಲೈ 21) ರಿಲೀಸ್ ಆಗಿದೆ. ಹಾಸ್ಟೆಲ್ ಹುಡುಗರ ಜೀವನದ ಕಥೆಯನ್ನು ತೆರೆದಿಡುವ ಸಿನಿಮಾ ಇದಾಗಿದೆ. ರಮ್ಯಾ, ರಿಷಬ್ ಶೆಟ್ಟಿ (Rishab Shetty) ಮೊದಲಾದವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ ಮತ್ತು ಕೆಲಸ ಮಾಡಿದ್ದಾರೆ. ಈ ಚಿತ್ರ ತಂಡ ಪ್ರಮೋಷನ್​ಗಳ ಮೂಲಕ ಸಾಕಷ್ಟು ಗಮನ ಸೆಳೆದಿತ್ತು. ಹಾಗಾದರೆ ಈ ಚಿತ್ರದ ಮೊದಲಾರ್ಧ ಹೇಗಿದೆ? ಹಾಸ್ಟೆಲ್ ಹುಡುಗರು ಮೊದಲಾರ್ಧದಲ್ಲಿ ಏನೆಲ್ಲ ಮಾಡಿದ್ರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ರಮ್ಯಾ ಅವರು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಒಪ್ಪಿಗೆ ಇಲ್ಲದೆ ತಮ್ಮ ಕ್ಲಿಪ್​ನ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದರು. ಜುಲೈ 20ರಂದು ಕೋರ್ಟ್ ಸಿನಿಮಾ ತಂಡದ ಪರವಾಗಿ ತೀರ್ಪು ನೀಡಿತ್ತು. ಈ ಕಾರಣದಿಂದಲೂ ಸಿನಿಮಾ ಸುದ್ದಿ ಆಗಿದೆ.

  1. ರಮ್ಯಾ ನಟಿಸಿದ್ದರು ಎನ್ನುವ ಕಾರಣಕ್ಕೆ ಸಾಕಷ್ಟು ಹೈಪ್ ಸೃಷ್ಟಿ ಆಗಿತ್ತು. ಮೊದಲ ದೃಶ್ಯದಲ್ಲೇ ಅವರ ಎಂಟ್ರಿ ಆಗುತ್ತದೆ.
  2.  ಕಾಲೇಜ್​ನ ಪ್ರಾಧ್ಯಾಪಕಿ ಆಗಿ ಕಾಣಿಸಿಕೊಳ್ಳುವ ಅವರು ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ.
  3.  ಮೊದಲ ದೃಶ್ಯ ಹೊರತುಪಡಿಸಿ ಮೊದಲಾರ್ಧದ ಎಲ್ಲೂ ರಮ್ಯಾ ಕಾಣಿಸಿಕೊಳ್ಳುವುದಿಲ್ಲ. ದ್ವೀತಿಯಾರ್ಧದಲ್ಲಿ ಅವರು ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ.
  4. ಶಾರ್ಟ್ ಫಿಲ್ಮ್ ಮಾಡುವ ಸಲುವಾಗಿ ಕಸರತ್ತು ಮಾಡುವ ಹಾಸ್ಟೆಲ್ ಹುಡುಗರು. ಇದು ಸಿನಿಮಾದೊಳಗೊಂದು ಸಿನಿಮಾದ ಕಥೆ.
  5. ಮೊದಲಾರ್ಧದಲ್ಲಿ ಸಿನಿಮಾದ ಪೂರ್ಣ ಕಥೆ ಹಾಸ್ಟೆಲ್​ನಲ್ಲೇ ಸಾಗುತ್ತದೆ. ಅದನ್ನು ಬಿಟ್ಟು ಕಥೆ ಬೇರೆ ಎಲ್ಲೂ ಸಾಗುವುದಿಲ್ಲ.
  6. ಹಾಸ್ಟೆಲ್ ವಾರ್ಡ್​​ನ ಸಾವಿನ ಘಟನೆ ಇಟ್ಟುಕೊಂಡು ಮೊದಲಾರ್ಧ ಸಾಗುತ್ತದೆ. ಇಂಟರ್​​ವಲ್​ನಲ್ಲಿ ಒಂದು ಟ್ವಿಸ್ಟ್​ ನೀಡಲಾಗಿದೆ.
  7. ಪವನ್ ಕುಮಾರ್ ಹಾಗೂ ರಿಷಬ್ ಶೆಟ್ಟಿ ಎಂಟ್ರಿ ಮೊದಲಾರ್ಧದಲ್ಲೇ ಆಗುತ್ತದೆ. ಅವರ ಪಾತ್ರ ಯಾವ ರೀತಿ ಇದೆ, ಎಷ್ಟು ಹೊತ್ತು ಬರುತ್ತದೆ ಎಂಬುದಕ್ಕೆ ಸಿನಿಮಾ ನೋಡಬೇಕು.
  8. ಫ್ಯಾಂಟಸಿ ರೀತಿಯಲ್ಲಿ ಕಥೆ ಸಾಗುತ್ತದೆ. ಇಲ್ಲಿ ಲಾಜಿಕ್​ಗಳಿಗೆ ಅವಕಾಶ ಇಲ್ಲ. ಹಾಸ್ಟೆಲ್ ಹುಡುಗರ ಕೀಟಲೆ, ತರಲೆಗಳೇ ಮೊದಲಾರ್ಧದ ಜೀವಾಳ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ