Blind Movie Review: ಚುಟುಕಾದ, ಚುರುಕಾದ ಕಳ್ಳ-ಪೊಲೀಸ್​ ಕಹಾನಿ; ‘ಬ್ಲೈಂಡ್​’ ಚಿತ್ರದ ಪ್ಲಸ್ ಏನು? ಮೈನಸ್ ಏನು?

Sonam Kapoor: ಒಂದು ಕಳ್ಳ-ಪೊಲೀಸ್ ಕಥೆಯ ಹಾಗೆ ‘ಬ್ಲೈಂಡ್​’ ಚಿತ್ರ ಇಷ್ಟವಾಗುತ್ತದೆ. ಆ್ಯಕ್ಷನ್​ ಬಯಸುವ ಪ್ರೇಕ್ಷಕರಿಗೂ ಇಲ್ಲಿ ಮನರಂಜನೆ ಸಿಗುತ್ತದೆ.

Blind Movie Review: ಚುಟುಕಾದ, ಚುರುಕಾದ ಕಳ್ಳ-ಪೊಲೀಸ್​ ಕಹಾನಿ; ‘ಬ್ಲೈಂಡ್​’ ಚಿತ್ರದ ಪ್ಲಸ್ ಏನು? ಮೈನಸ್ ಏನು?
ಸೋನಮ್​ ಕಪೂರ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Jul 07, 2023 | 9:21 AM

ಚಿತ್ರ: ಬ್ಲೈಂಡ್​

ನಿರ್ಮಾಣ: ಸುಜಯ್​ ಘೋಶ್​

ನಿರ್ದೇಶನ: ಶೋಮೆ ಮಖಿಜಾ

ಪಾತ್ರವರ್ಗ: ಸೋನಮ್ ಕಪೂರ್​, ಪೂರಬ್​ ಕೊಹ್ಲಿ, ವಿನಯ್​ ಪಾಠಕ್​, ಶುಭಂ ಸರಫ್​ ಮುಂತಾದವರು.

ಸ್ಟಾರ್​: 3/5

ನಟಿ ಸೋನಮ್​ ಕಪೂರ್​ (Sonam Kapoor) ಅವರು ಇತ್ತೀಚಿನ ವರ್ಷಗಳಲ್ಲಿ ಸಖತ್​ ಚ್ಯೂಸಿ ಆಗಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಅವರು ಅವಸರ ತೋರಿಸುತ್ತಿಲ್ಲ. ಅವರನ್ನು ಮಿಸ್​ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಈಗೊಂದು ಚಾನ್ಸ್​ ಸಿಕ್ಕಿದೆ. ‘ಬ್ಲೈಂಡ್​’ ಸಿನಿಮಾದಲ್ಲಿ ಸೋನಮ್​ ಕಪೂರ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ‘ಜಿಯೋ ಸಿನಿಮಾ’ (Jio Cinema) ಮೂಲಕ ಜುಲೈ 7ರಂದು ಬಿಡುಗಡೆ ಆಗಿರುವ ಈ ಚಿತ್ರದಲ್ಲಿ ಅವರಿಗೆ ಚಾಲೆಂಜಿಂಗ್​ ಆದಂತಹ ಪಾತ್ರವಿದೆ. ಅಪಘಾತದಲ್ಲಿ ದೃಷ್ಟಿ ಕಳೆದುಕೊಂಡು ಕಷ್ಟಪಡುವ ಯುವತಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಸಸ್ಪೆನ್ಸ್​-ಥ್ರಿಲ್ಲರ್ ಮಾದರಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಒಟಿಟಿ ಪ್ರೇಕ್ಷಕರು ಇಷ್ಟಪಡುವಂತಹ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಸೋನಮ್ ಕಪೂರ್​ ಅವರ ವೃತ್ತಿಜೀವನದಲ್ಲಿ ‘ಬ್ಲೈಂಡ್​’ ಸಿನಿಮಾ (Blind Movie) ಒಂದು ಡಿಫರೆಂಟ್​ ಪ್ರಯತ್ನವಾಗಿದೆ.

ಸಿನಿಮಾದ ಆರಂಭದಲ್ಲಿ ಸೋನಮ್​ ಕಪೂರ್​ ಅವರು ಪೊಲೀಸ್​ ಆಫೀಸರ್​ ಆಗಿ ಕಾಣಿಸಿಕೊಳ್ಳುತ್ತಾರೆ. ಶಾರ್ಪ್​ ಶೂಟರ್​ ಆದ ಅವರು ನಂತರದ ದೃಶ್ಯಗಳಲ್ಲಿ ಕಣ್ಣಿಲ್ಲದ ಯುವತಿಯಾಗಿ ಪ್ರೇಕ್ಷಕರ ಎದುರು ಬರುತ್ತಾರೆ. ಈ ಬದಲಾವಣೆಗೆ ಕಾರಣ ಆಗುವುದು ಒಂದು ಅಪಘಾತ. ಆ ದುರಂತ ಸಂಭವಿಸಿದ ಬಳಿಕ ಕಥಾನಾಯಕಿ ತನ್ನ ಕೆಲಸ ಕಳೆದುಕೊಳ್ಳುತ್ತಾಳೆ. ಆದರೂ ಆಕೆಯಲ್ಲಿ ಹೋರಾಟದ ಛಲ ಕಡಿಮೆ ಆಗಿರುವುದಿಲ್ಲ. ಸೈಕೋ ಕಿಲ್ಲರ್​ ಒಬ್ಬನನ್ನು ಹಿಡಿಯಲು ಅವಳು ಪಣ ತೊಡುತ್ತಾಳೆ. ಆಕೆಯ ಹೋರಾಟದ ಕಥೆಯೇ ‘ಬ್ಲೈಂಡ್’ ಸಿನಿಮಾದ ಸಾರಾಂಶ.

ಇದನ್ನೂ ಓದಿ: Adipurush Review: ಗ್ರಾಫಿಕ್ಸ್​ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ; ಇದು ಓಂ ರಾವತ್​ ರಾಮಾಯಣ

ಕಣ್ಣಿಲ್ಲದ ಯುವತಿಯ ಪಾತ್ರ ಮಾಡುವುದು ಅಷ್ಟು ಸುಲಭವಲ್ಲ. ಅಂಥ ಪಾತ್ರಕ್ಕೆ ಜೀವ ತುಂಬಲು ಸೋನಮ್​ ಕಪೂರ್ ಪ್ರಯತ್ನಿಸಿದ್ದಾರೆ. ಇಡೀ ಸಿನಿಮಾದ ಕಥೆ ವಿದೇಶದಲ್ಲಿ ಸಾಗುತ್ತದೆ. ಹಾಗಾಗಿ ಈ ಚಿತ್ರದಲ್ಲಿ ಬರುವ ಪೊಲೀಸ್​ ತನಿಖೆಯ ಸನ್ನಿವೇಶಗಳು ಭಾರತೀಯ ಸಿನಿಮಾಗಳಲ್ಲಿ ತೋರಿಸುವ ದೃಶ್ಯಗಳಿಗಿಂತ ಭಿನ್ನವೇ ಆಗಿದೆ. ಸೈಕೋ ಕಿಲ್ಲರ್​ ಪಾತ್ರದಲ್ಲಿ ಪೂರಬ್​ ಕೊಹ್ಲಿ ನಟಿಸಿದ್ದಾರೆ. ಅವರ ಅಭಿನಯ ಕೂಡ ಗಮನ ಸೆಳೆಯತ್ತದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿನಯ್​ ಪಾಠಕ್​ ಅವರಿಗೂ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಶುಭಂ ಸರಫ್ ಅವರು ಇಷ್ಟವಾಗುತ್ತಾರೆ.

ಇದನ್ನೂ ಓದಿ: Dhoomam Review: ಸಿಗರೇಟ್​ ಬಗ್ಗೆ ಸಂದೇಶ ನೀಡಲು ಎಷ್ಟೆಲ್ಲ ಸರ್ಕಸ್​; ಸರಳವಾಗಿಲ್ಲ ‘ಧೂಮಂ’

2011ರಲ್ಲಿ ತೆರೆಕಂಡ ಕೊರಿಯನ್​ ಭಾಷೆಯ ‘ಬ್ಲೈಂಡ್​’ ಸಿನಿಮಾವನ್ನು ಅದೇ ಶೀರ್ಷಿಕೆಯಡಿ ಹಿಂದಿಯಲ್ಲಿ ರಿಮೇಕ್​ ಮಾಡಲಾಗಿದೆ. ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳನ್ನು ಹೊಂದಿರುವ ಕಥೆಯೇ ಈ ಸಿನಿಮಾದ ಪ್ಲಸ್​ ಪಾಯಿಂಟ್​. ಚಿತ್ರದ ಅವಧಿ ಕೇವಲ 2 ಗಂಟೆ 4 ನಿಮಿಷ ಇದೆ. ಅನಗತ್ಯವಾದ ಹಾಡು, ಹಾಸ್ಯ ಇತ್ಯಾದಿಗಳಿಗೆ ಇಲ್ಲಿ ಜಾಗವಿಲ್ಲ. ಪಟಪಟನೆ ಸಾಗುವ ದೃಶ್ಯಗಳಿಂದಾಗಿ ನೋಡಿಸಿಕೊಂಡು ಹೋಗುವ ಗುಣ ಈ ಚಿತ್ರಕ್ಕಿದೆ. ಈ ದೃಷ್ಟಿಯಲ್ಲಿ ನೋಡಿದರೆ ಈ ಚಿತ್ರ ಚುಟುಕಾಗಿದೆ ಮತ್ತು ಚುರುಕಾಗಿದೆ. ಇನ್ನು, ಆ್ಯಕ್ಷನ್​ ಬಯಸುವ ಪ್ರೇಕ್ಷಕರಿಗೂ ಇಲ್ಲಿ ಮನರಂಜನೆ ಸಿಗುತ್ತದೆ. ಕಥಾನಾಯಕಿ ಕಣ್ಣು ಕಾಣದೆಯೂ ಫೈಟ್​ ಮಾಡುವ ದೃಶ್ಯಗಳು ರೋಚಕವಾಗಿವೆ.

ಇದನ್ನೂ ಓದಿ: Nanu Kusuma Review: ರಿಯಲಿಸ್ಟಿಕ್​ ಶೈಲಿಯಲ್ಲಿ ಮೂಡಿಬಂದ ‘ನಾನು ಕುಸುಮ’; ಅಸಹಾಯಕ ಹೆಣ್ಣಿನ ನೋವಿಗೆ ಹಿಡಿದ ಕನ್ನಡಿ

ಒಂದಷ್ಟು ದೃಶ್ಯಗಳು ಗೊಂದಲ ಮೂಡಿಸುತ್ತವೆ. ಇನ್ನೂ ಕೆಲವು ಕಡೆಗಳಲ್ಲಿ ಲಾಜಿಕ್​ನ ಕೊರತೆ ಎದ್ದು ಕಾಣುತ್ತದೆ. ಕಣ್ಣು ಕಳೆದುಕೊಂಡ ಕೆಲವೇ ದಿನಗಳಲ್ಲಿ ಕಥಾನಾಯಕಿಯು ಸೂಪರ್​ ಹೀರೋ ರೀತಿಯಲ್ಲಿ ವರ್ತಿಸುವುದು ಕೊಂಚ ಅಸಹಜ ಎನಿಸುತ್ತದೆ. ಅಂಥ ದೃಶ್ಯಗಳನ್ನು ಪ್ರೇಕ್ಷಕರು ನಂಬುವ ರೀತಿಯಲ್ಲಿ ಚಿತ್ರಿಸುವ ಅಗತ್ಯವಿತ್ತು ಎನಿಸುತ್ತದೆ. ಒಂದು ಕಳ್ಳ-ಪೊಲೀಸ್ ಕಥೆಯ ಹಾಗೆ ‘ಬ್ಲೈಂಡ್​’ ಚಿತ್ರವು ಮನರಂಜನೆ ನೀಡುತ್ತದೆ. ಅದರಾಚೆಗೆ ಹೆಚ್ಚೇನನ್ನೂ ನಿರೀಕ್ಷಿಸಲಾಗದು. ಒಮ್ಮೆ ನೋಡಿ ಎಂಜಾಯ್​ ಮಾಡಬಹುದಾದ ಚಿತ್ರಗಳ ಪಟ್ಟಿಗೆ ‘ಬ್ಲೈಂಡ್​’ ಕೂಡ ಸೇರುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:07 am, Fri, 7 July 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು