AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರಮಹಾಲಕ್ಷ್ಮಿ ಹಬ್ಬದ ಪ್ರಯಕ್ತ ‘ತುಕ್ರ-ತನಿಯ’ ಪೋಸ್ಟರ್​ ಬಿಡುಗಡೆ; ಏನು ಇದರ ಅರ್ಥ?

‘ಭೀಮ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿರುವ ನಟ ದುನಿಯಾ ವಿಜಯ್​ ಅವರು ‘ತುಕ್ರ ತನಿಯ’ ಚಿತ್ರದ ಟೈಟಲ್​ ಅನಾವರಣ ಮಾಡಿ ಶುಭ ಕೋರಿದ್ದಾರೆ. ಈ ಸಿನಿಮಾಗೆ ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ ನಿರ್ದೇಶನ ಮಾಡಲಿದ್ದಾರೆ. ಪ್ರವೀಣ್ ತೇಜ್ ಮತ್ತು ಅಚ್ಯುತ್ ಕುಮಾರ್ ಅವರು ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯಕ್ತ ‘ತುಕ್ರ-ತನಿಯ’ ಪೋಸ್ಟರ್​ ಬಿಡುಗಡೆ; ಏನು ಇದರ ಅರ್ಥ?
ರಾಘು ಶಿವಮೊಗ್ಗ, ದುನಿಯಾ ವಿಜಯ್​
ಮದನ್​ ಕುಮಾರ್​
|

Updated on: Aug 25, 2023 | 7:06 PM

Share

ಎಲ್ಲೆಡೆ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಇಂದು (ಆಗಸ್ಟ್​ 25) ಆಚರಿಸಲಾಗಿದೆ. ಚಿತ್ರರಂಗದ ಮಂದಿಗೂ ಈ ಹಬ್ಬ ತುಂಬ ಸ್ಪೆಷಲ್​. ಅನೇಕ ಹೊಸ ಸಿನಿಮಾಗಳು ಈ ಶುಭದಿನದಂದು ಅನೌನ್ಸ್​ ಆಗಿವೆ. ಹೊಸ ಪೋಸ್ಟರ್​ಗಳು, ನೂತನ ಟೈಟಲ್​ಗಳು ರಾರಾಜಿಸುತ್ತಿವೆ. ಆ ಪೈಕಿ ‘ತುಕ್ರ ತನಿಯ’ (Thukra Thaniya) ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್​ ಗಮನ ಸೆಳೆಯುತ್ತಿದೆ. ದುನಿಯಾ ವಿಜಯ್​ (Duniya Vijay) ಅವರು ಅನಾವರಣ ಮಾಡಿರುವ ಈ ಟೈಟಲ್​ ಸಖತ್​ ಡಿಫರೆಂಟ್​ ಆಗಿದೆ. ಇದರ ವಿನ್ಯಾಸ ಕೂಡ ಗಮನ ಸೆಳೆಯುತ್ತಿದೆ. ಶೀರ್ಷಿಕೆ ನೋಡಿದ ತಕ್ಷಣ ಇದರ ಅರ್ಥ ಏನು ಎಂಬ ಪ್ರಶ್ನೆ ಮೂಡುತ್ತದೆ. ಅಂಥ ಒಂದು ಅಪರೂಪದ ಹೆಸರು ಇರುವ ಈ ಚಿತ್ರವನ್ನು ರಾಘು ಶಿವಮೊಗ್ಗ (Raghu Shivamogga) ಅವರು ನಿರ್ದೇಶನ ಮಾಡಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮತ್ತು ನಿರ್ದೇಶಕನಾಗಿ ರಾಘು ಶಿವಮೊಗ್ಗ ಅವರು ಗುರುತಿಸಿಕೊಂಡಿದ್ದಾರೆ. ‘ಚೂರಿಕಟ್ಟೆ’, ‘ಪೆಂಟಗನ್’ ರೀತಿಯ ಡಿಫರೆಂಟ್​ ಚಿತ್ರಗಳಿಗೆ ಅವರು ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಅವರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಮೂರನೇ ಸಿನಿಮಾವಾಗಿ ‘ತುಕ್ರ ತನಿಯ’ ಮೂಡಿಬರಲಿದೆ. ಆ ಬಗ್ಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಭೀಮ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿರುವ ನಟ ದುನಿಯಾ ವಿಜಯ್​ ಅವರು ‘ತುಕ್ರ ತನಿಯ’ ಚಿತ್ರದ ಟೈಟಲ್​ ಅನಾವರಣ ಮಾಡಿ ಶುಭ ಕೋರಿದ್ದಾರೆ.

ತುಕ್ರ-ತನಿಯ ಎಂದರೆ ಏನು?

ಸಿನಿಮಾ ತಂಡ ಹಂಚಿಕೊಂಡಿರುವ ಮಾಹಿತಿ ಪ್ರಕಾರ ತುಕ್ರ ಎಂದರೆ ಶುಕ್ರವಾರ ಹುಟ್ಟಿದವನು ಎಂದರ್ಥ. ಅದೇ ರೀತಿ, ತನಿಯ ಅಂದರೆ ಶನಿವಾರ ಹುಟ್ಟಿದವನು. ಶೀರ್ಷಿಕೆಗೆ ತಕ್ಕಂತೆಯೇ ಶುಕ್ರವಾರ ಮತ್ತು ಶನಿವಾರ ಹುಟ್ಟಿದ ಇಬ್ಬರು ವ್ಯಕ್ತಿಗಳ ನಡುವಿನ ಕಥೆ ಈ ಸಿನಿಮಾದಲ್ಲಿ ಇರಲಿದೆ. ಈ ಸಿನಿಮಾದಲ್ಲಿ ಪ್ರವೀಣ್ ತೇಜ್ ಮತ್ತು ಅಚ್ಯುತ್ ಕುಮಾರ್ ಅವರು ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ. ‘ಪದ್ಮಾ ಪಿಕ್ಚರ್ಸ್’ ಹಾಗೂ ‘ಗೌರಿ ಟಾಕೀಸ್’ ಬ್ಯಾನರ್​ಗಳ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ.

ಇದನ್ನೂ ಓದಿ: Toby Review: ಮಾತನಾಡದೆ ಮನಸ್ಸಿಗೆ ನಾಟುವ ‘ಟೋಬಿ’; ಇಲ್ಲಿದೆ ಒಂದಷ್ಟು ಪ್ಲಸ್​, ಇನ್ನೊಂದಿಷ್ಟು ಮೈನಸ್​

ರಾಘು ಶಿವಮೊಗ್ಗ ಬಗ್ಗೆ:

ರಾಘು ಶಿವಮೊಗ್ಗ ಅವರು ನಿರ್ದೇಶಕನಾಗುವ ಕನಸು ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟರು. ಅವರ ಮೊದಲ ಪ್ರಯತ್ನವಾಗಿ ‘ಚೌಕಬಾರ’ ಕಿರುಚಿತ್ರ ಮೂಡಿಬಂತು. ಅದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ಅವರು ನಾಂದಿ ಹಾಡಿದರು. ಬಳಿ ‘ಚೂರಿಕಟ್ಟೆ’ ಚಿತ್ರಕ್ಕೆ ಅವರು ನಿರ್ದೇಶನ ಮಾಡಿದರು. ವಿಮರ್ಶಕರಿಂದ ಆ ಸಿನಿಮಾಗೆ ಮೆಚ್ಚುಗೆ ಸಿಕ್ಕಿತು. ಅದರಿಂದ ರಾಘು ಶಿವಮೊಗ್ಗ ಅವರ ಖ್ಯಾತಿ ಹೆಚ್ಚಿತು. ಮಂಸೋರೆ ನಿರ್ದೇಶನದ ‘ಆ್ಯಕ್ಟ್ 1978’ ಚಿತ್ರದಲ್ಲಿ ಒಂದು ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಅವರು ನಟರಾಗಿಯೂ ಗುರುತಿಸಿಕೊಂಡರು. ಈ ಸಿನಿಮಾ ರಿಲೀಸ್​ ಆದ ಬಳಿಕ ನಟನೆಯಲ್ಲೂ ಅವರು ಬ್ಯುಸಿ ಆದರು. ಈಗ ಪುನಃ ನಿರ್ದೇಶನದ ಕಡೆಗೆ ಗಮನ ಹರಿಸಿದ್ದಾರೆ.

ಇದನ್ನೂ ಓದಿ: 2 ಹೊಸ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಭರವಸೆ ನೀಡಿದ ‘ಸಿರಿ ಕನ್ನಡ’ ವಾಹಿನಿ

‘ತುಕ್ರ-ತನಿಯ’ ಚಿತ್ರಕ್ಕೆ ಮಲೆನಾಡಿನ ಗ್ರಾಮೀಣ ಭಾಗದ ಲೊಕೇಷನ್​ಗಳಲ್ಲಿ ಡಿಸೆಂಬರ್ ತಿಂಗಳಿಂದ ಶೂಟಿಂಗ್​ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಈ ಚಿತ್ರಕ್ಕೆ ಶಾಂತಿ ಸಾಗರ್ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಕದ್ರಿ ಮಣಿಕಾಂತ್ ಅವರು ಸಂಗೀತ ನೀಡಲಿದ್ದಾರೆ. ಪ್ರಕಾಶ್ ಕಾರಿಂಜ ಅವರ ಸಂಕಲನದಲ್ಲಿ ‘ತುಕ್ರ-ತನಿಯ’ ಸಿನಿಮಾ ಮೂಡಿಬರಲಿದೆ. ಸದ್ಯಕ್ಕೆ ಟೈಟಲ್​ ಗಮನ ಸೆಳೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.