2 ಹೊಸ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಭರವಸೆ ನೀಡಿದ ‘ಸಿರಿ ಕನ್ನಡ’ ವಾಹಿನಿ

‘ಸಿರಿ ಕನ್ನಡ’ ವಾಹಿನಿಯು 2 ಹೊಸ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡಲು ಸಜ್ಜಾಗಿದೆ. ‘ಹಾಸ್ಯ ದರ್ಬಾರ್ ಸೀಸನ್ 2’ ಶೋನಲ್ಲಿ ಕಾಮಿಡಿ ದಿಗ್ಗಜರು ಇರಲಿದ್ದಾರೆ. ಭರ್ಜರಿ ಮನರಂಜನೆಯ ಭರವಸೆಯೊಂದಿಗೆ ‘ಲಿಟಲ್ ಕಿಲಾಡೀಸ್’ ಕಾರ್ಯಕ್ರಮ ಕೂಡ ಪ್ರಸಾರಕ್ಕೆ ಸಿದ್ಧವಾಗಿದೆ. ಈ ಎರಡು ಶೋಗಳ ಬಗ್ಗೆ ಇಲ್ಲಿದೆ ಮಾಹಿತಿ..

2 ಹೊಸ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಭರವಸೆ ನೀಡಿದ ‘ಸಿರಿ ಕನ್ನಡ’ ವಾಹಿನಿ
‘ಸಿರಿ ಕನ್ನಡ’ ವಾಹಿನಿಯ ಹೊಸ ಶೋಗಳು
Follow us
ಮದನ್​ ಕುಮಾರ್​
|

Updated on: Aug 25, 2023 | 6:03 PM

ಕನ್ನಡ ಕಿರುತೆರೆಯ ಮನರಂಜನಾ ಲೋಕದಲ್ಲಿ ‘ಸಿರಿ ಕನ್ನಡ’ ವಾಹಿನಿ (Siri Kannada) ಕೂಡ ಗಮನ ಸೆಳೆಯುತ್ತಿದೆ. ಈಗಾಗಲೇ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ನೋಡುಗರಿಗೆ ರಂಜನೆ ನೀಡಿದೆ. ಈಗ ‘ಸಿರಿ ಕನ್ನಡ’ ವಾಹಿನಿಯು 2 ಹೊಸ ಕಾರ್ಯಕ್ರಮಗಳ ಮೂಲಕ ಮತ್ತೆ ಕರುನಾಡಿನಲ್ಲಿ ಮನರಂಜನೆಯ ಮಳೆ ಸುರಿಸಲು ಸಜ್ಜಾಗಿದೆ. ಈ ಚಾನೆಲ್​ನ ಜನಪ್ರಿಯ ಶೋ ಆಗಿದ್ದ ‘ಹಾಸ್ಯ ದರ್ಬಾರ್’ (Hasya Darbar) ಕಾರ್ಯಕ್ರಮವು ನೋಡುಗರ ಒತ್ತಾಯದ ಮೇರೆಗೆ ನೂತನ ರೂಪದಲ್ಲಿ ಹೊಸ ಆವೃತ್ತಿಯನ್ನು ಆರಂಭಿಸುತ್ತಿದೆ. ಇದರಲ್ಲಿ ಅನೇಕ ಖ್ಯಾತನಾಮರು ಭಾಗವಹಿಸಲಿದ್ದಾರೆ. ಆ ಮೂಲಕ ಈ ಕಾರ್ಯಕ್ರಮದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಹೊಸ ಸೀಸನ್​ ಬಗ್ಗೆ ಇಲ್ಲಿದೆ ಮಾಹಿತಿ..

‘ಹಾಸ್ಯ ದರ್ಬಾರ್ ಸೀಸನ್ 2’ ಶೋನಲ್ಲಿ ಕಾಮಿಡಿ ದಿಗ್ಗಜರಾದ ಪ್ರಾಣೇಶ್, ಸುಧಾ ಬರಗೂರು, ಪ್ರೊ. ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಎಮ್.ಎಸ್. ನರಸಿಂಹಮೂರ್ತಿ, ಮುಖ್ಯಮಂತ್ರಿ ಚಂದ್ರು, ಗುಂಡೂರಾವ್, ಮಿಮಿಕ್ರಿ ದಯಾನಂದ್ ಅವರು ಭಾಗವಹಿಸಲಿದ್ದಾರೆ. ಹಿರೇಮಗಳೂರು ಕಣ್ಣನ್ ಅವರು ಈ ಶೋ ನಡೆಸಿಕೊಡಲಿದ್ದಾರೆ ಎಂಬುದು ವಿಶೇಷ. ‘ಹಾಸ್ಯದರ್ಬಾರ್ ಸೀಸನ್ 2’ ಕಾರ್ಯಕ್ರಮಕ್ಕೆ ವಿಭಿನ್ನವಾದ ರೀತಿಯಲ್ಲಿ ಸೆಟ್​ ಹಾಕಲಾಗಿದೆ. ಅದ್ದೂರಿ ಸೆಟ್​ನಲ್ಲಿ ಈ ಶೋ ಶೂಟಿಂಗ್​ ಆಗಲಿದೆ.

ಆಗಸ್ಟ್ 28ರಿಂದ ಸೋಮವಾರದಿಂದ ಶುಕ್ರವಾರದವರಗೆ ಪ್ರತಿ ರಾತ್ರಿ 8 ಗಂಟೆಯಿಂದ 9 ಗಂಟೆಯ ತನಕ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಈ ಕಾರ್ಯಕ್ರಮದ ಶೂಟಿಂಗ್​ ನಡೆಯುತ್ತಿದೆ. ಇದರ ಉಚಿತ ಇ-ಪಾಸ್ ಪಡೆಯಲು ‘ಸಿರಿ ಕನ್ನಡ’ ವಾಹಿನಿಯನ್ನು ಸಂಪರ್ಕಿಸಬಹುದು ಎಂದು ಚಾನೆಲ್​ ಮುಖ್ಯಸ್ಥ ರಾಜೇಶ್ ರಾಜಘಟ್ಟ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಎರಡನೇ ಸ್ಥಾನಕ್ಕೆ ಜಿಗಿದ ‘ಸೀತಾ ರಾಮ’; ಟಿಆರ್​ಪಿ ರೇಸ್​ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ

ಇನ್ನೊಂದು ಶೋ ಮಕ್ಕಳಿಗೆ ಸಂಬಂಧಿಸಿದ್ದು. ಪುಟಾಣಿ ಮಕ್ಕಳ ಧಮಾಕೆಧಾರ್​ ಮನರಂಜನೆಯ ಕಾರ್ಯಕ್ರಮ ‘ಲಿಟಲ್ ಕಿಲಾಡೀಸ್’. ಇದು ಕೂಡ ಸೋಮವಾರದಿಂದ ಶುಕ್ರವಾರದ ತನಕ ಸಂಜೆ 6ಕ್ಕೆ ಪ್ರಸಾರ ಆಗಲಿದೆ. ಈ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಝಗಮಗಿಸುವ ಸೆಟ್​ನಲ್ಲಿ ಹಲವು ಬಗೆಯ ಕಾನ್ಸೆಪ್ಟ್​ಗಳ ಮೂಲಕ ರೂಪಿಸಲಾಗುತ್ತಿದೆ. ಒಂದು ವಾರಗಳ ಚಿಲ್ರನ್​ ಚಾಂಪಿಯನ್ ಸಿರೀಸ್ ಭಾರಿ ಮನರಂಜನೆ ನೀಡಲಿದೆ ಎಂದು ವಾಹಿನಿ ಹೇಳಿಕೊಂಡಿದೆ.

ಇದನ್ನೂ ಓದಿ: ಕನ್ನಡದ ಈ ಕಿರುತೆರೆ ನಟಿ ಯಾರೆಂದು ಗುರುತಿಸುತ್ತೀರಾ?

ಈ ಎರಡು ಹೊಸ ಶೋಗಳ ಜೊತೆ ವೀಕ್ಷಕರಿಂದ ಮೆಚ್ಚುಗೆ ಪಡೆದು 100ನೇ ಎಪಿಸೋಡ್​ನತ್ತ ಮುನ್ನುಗ್ಗುತ್ತಿರುವ ‘ಊರ್ಮಿಳ’ ಧಾರಾವಾಹಿ ಈಗ ಬದಲಾದ ಸಮಯದಲ್ಲಿ ಪ್ರಸಾರ ಆಗಲಿದೆ. ಇನ್ಮುಂದೆ ಇದು ರಾತ್ರಿ 7 ಗಂಟೆಗೆ ಮೂಡಿಬರಲಿದೆ ಎಂದು ‘ಸಿರಿಕನ್ನಡ’ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ ಹಾಗೂ ರಾಜೇಶ್ ರಾಜಘಟ್ಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ