ರಾಷ್ಟ್ರೀಯ ಸಿನಿಮಾ ದಿನ: 99 ರೂಪಾಯಿಗೆ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡೋ ಅವಕಾಶ

ಪಿವಿಆರ್​, ಸಿನಿಪೊಲಿಸ್​, ಐನಾಕ್ಸ್​, ಸಿಟಿಪ್ರೈಡ್​, ಮಿರಾಜ್​, ಮೂವೀ ಟೈನ್, ಏಷ್ಯನ್​ ಮುಂತಾದ ಮಲ್ಟಿಪ್ಲೆಕ್ಸ್​ಗಳು ಇದರಲ್ಲಿ ಭಾಗವಹಿಸುತ್ತಿವೆ. ಈ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ವೀಕ್ಷಿಸಿದರೆ ಟಿಕೆಟ್ ದರ ಕೇವಲ 99 ರೂಪಾಯಿ ಇರಲಿದೆ. ಈ ವಿಚಾರ ಸಿನಿಪ್ರಿಯರಿಗೆ ಖುಷಿ ನೀಡಿದೆ.

ರಾಷ್ಟ್ರೀಯ ಸಿನಿಮಾ ದಿನ: 99 ರೂಪಾಯಿಗೆ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡೋ ಅವಕಾಶ
ರಾಷ್ಟ್ರೀಯ ಸಿನಿಮಾ ದಿನ
Follow us
ರಾಜೇಶ್ ದುಗ್ಗುಮನೆ
|

Updated on: Oct 12, 2023 | 11:26 AM

ರಾಷ್ಟ್ರೀಯ ಸಿನಿಮಾ ದಿನ ಬಂದೇ ಬಿಟ್ಟಿದೆ. ಅಕ್ಟೋಬರ್ 13ರಂದು ರಾಷ್ಟ್ರಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಮಲ್ಟಿಪ್ಲೆಕ್ಸ್​ನಲ್ಲಿ (Multiplex) ಭರ್ಜರಿ ಆಫರ್ ನೀಡಲಾಗುತ್ತಿದೆ. ಕಳೆದ ವರ್ಷ ಈ ದಿನದಂದು ಟಿಕೆಟ್ ದರ 75 ರೂಪಾಯಿ ನಿಗದಿ ಮಾಡಲಾಗಿತ್ತು. ಇದಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಮಲ್ಟಿಪ್ಲೆಕ್ಸ್​ಗಳು ಹೌಸ್​ಫುಲ್ ಆಗಿದ್ದವು. ಈ ವರ್ಷವೂ ರಾಷ್ಟ್ರೀಯ ಸಿನಿಮಾ ದಿನಾಚರಣೆ (National Cinema Day) ಅಂಗವಾಗಿ ಟಿಕೆಟ್ ದರ 99 ರೂಪಾಯಿ ನಿಗದಿ ಮಾಡಲಾಗಿದೆ. ಈ ಮೂಲಕ ಕೈಗೆಟಕುವ ದರದಲ್ಲಿ ಮಲ್ಟಿಪ್ಲೆಕ್ಸ್​​ನಲ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಸಿಕ್ಕಿದೆ.

2023ರಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಂಡಿವೆ. ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಹಿಟ್ ಸಿನಿಮಾ ನೀಡಿದ್ದಾರೆ. ‘ಗದರ್ 2’, ‘ಕೌಸಲ್ಯ ಸುಪ್ರಜಾ ರಾಮ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಸಪ್ತ ಸಾಗರದಾಚೆ ಎಲ್ಲೋ’ ಸೇರಿ ಅನೇಕ ಚಿತ್ರಗಳು ಒಳ್ಳೆಯ ಬಿಸ್ನೆಸ್ ಮಾಡಿವೆ. ಈ ರೀತಿಯ ಹಿಟ್ ಚಿತ್ರಗಳನ್ನು ಮಲ್ಟಿಪ್ಲೆಕ್ಸ್​​ನಲ್ಲಿ ನೋಡಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ಆದರೆ, ಟಿಕೆಟ್ ದರ ದುಬಾರಿ ಇರುವುದರಿಂದ ಮಲ್ಟಿಪ್ಲೆಕ್ಸ್​ನಲ್ಲಿ ಚಿತ್ರ ವೀಕ್ಷಿಸೋಕೆ ಕೆಲವರಿಗೆ ಸಾಧ್ಯವಾಗುವುದಿಲ್ಲ. ಈಗ ‘ರಾಷ್ಟ್ರೀಯ ಸಿನಿಮಾ ದಿನ’ದ ಪ್ರಯುಕ್ತ 99 ರೂಪಾಯಿಗೆ ಸಿನಿಮಾ ಟಿಕೆಟ್​ ಮಾರಲು ತೀರ್ಮಾನಿಸಲಾಗಿದೆ.

ಪಿವಿಆರ್​, ಸಿನಿಪೊಲಿಸ್​, ಐನಾಕ್ಸ್​, ಸಿಟಿಪ್ರೈಡ್​, ಮಿರಾಜ್​, ಮೂವೀ ಟೈಮ್, ಏಷ್ಯನ್​ ಮುಂತಾದ ಮಲ್ಟಿಪ್ಲೆಕ್ಸ್​ಗಳು ಇದರಲ್ಲಿ ಭಾಗವಹಿಸುತ್ತಿವೆ. ಈ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ವೀಕ್ಷಿಸಿದರೆ ಟಿಕೆಟ್ ದರ ಕೇವಲ 99 ರೂಪಾಯಿ ಇರಲಿದೆ. ಈ ವಿಚಾರ ಸಿನಿಪ್ರಿಯರಿಗೆ ಖುಷಿ ನೀಡಿದೆ.

ಇದನ್ನೂ ಓದಿ: ‘ಹಾಲಿವುಡ್ ಸ್ಟುಡಿಯೋ ಜೊತೆ ಮಾತುಕತೆ ನಡೆಯುತ್ತಿದೆ’; ‘ಜವಾನ್’ ಬಳಿಕ ಹೆಚ್ಚಿತು ಅಟ್ಲಿ ಬೇಡಿಕೆ

ಸದ್ಯ ‘ಜವಾನ್’ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ. ‘ಮಿಷನ್ ರಾಣಿಗಂಜ್’, ‘ಚಂದ್ರಮುಖಿ 2’, ‘ರಾಜಮಾರ್ತಾಂಡ’ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಇವುಗಳನ್ನು ಮಲ್ಟಿಪ್ಲೆಕ್ಸ್​ನಲ್ಲಿ ಕಡಿಮೆ ದರದಲ್ಲಿ ವೀಕ್ಷಿಸುವ ಅವಕಾಶ ಸಿಕ್ಕಂತಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ